ಆದಿ ಬಣಜಿಗ ಸಮಾಜಕ್ಕೆ 2-ಎ ಮೀಸಲಾತಿ ನೀಡಲು ಸರ್ಕಾರಕ್ಕೆ ವಿಶ್ವನಾಥ್ ಪಾಟೀಲ್ ಗವನಳ್ಳಿ ಒತ್ತಾಯ

ಆದಿ ಬಣಜಿಗ ಸಮಾಜಕ್ಕೆ 2-ಎ ಮೀಸಲಾತಿ ನೀಡಲು ಸರ್ಕಾರಕ್ಕೆ ವಿಶ್ವನಾಥ್ ಪಾಟೀಲ್ ಗವನಳ್ಳಿ ಒತ್ತಾಯ

ಆದಿ ಬಣಜಿಗ ಸಮಾಜಕ್ಕೆ 2-ಎ ಮೀಸಲಾತಿ ನೀಡಲು ಸರ್ಕಾರಕ್ಕೆ ವಿಶ್ವನಾಥ್ ಪಾಟೀಲ್ ಗವನಳ್ಳಿ ಒತ್ತಾಯ 

ಕಲಬುರಗಿ : ಅ.26-ರಾಜ್ಯದಲ್ಲಿರುವ ಆದಿ ಬಣಜಿಗ ಸಮಾಜಕ್ಕೆ 2- ಎ ‌ಮೀಸಲಾತಿ ನೀಡಲು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗು ,ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಿಗೆ ಕಲಬುರಗಿ ಜಿಲ್ಲಾಧಿಕಾರಿಗಳ ಮೂಲಕ  ಆದಿ ಸಮಾಜದ ಗೌರವಾಧ್ಯಕ್ಷ ವಿಶ್ವನಾಥ್ ಪಾಟೀಲ್ ಗವನಳ್ಳಿ ಮನವಿ ಮಾಡಿದ್ದಾರೆ.

ಆದಿ ಸಮಾಜ ಈಗಾಗಲೇ ಪ್ರವರ್ಗ 3- ಬಿ ಅಡ್ಡಿಯಲ್ಲಿದ್ದು , ಪ್ರವರ್ಗ -3 ರ. ದಡಿ ಲಿಂಗಾಯತ 19 ಉಪ ಜಾತಿಗಳು ಮೀಸಲಾತಿ ಸೌಲಭ್ಯ ಪಡೆಯುತ್ತವೆ.

   2009 ರ ಗೇಜೇಟನಲ್ಲಿ ಆದಿ ಬಣಜಿಗ ಸಮಾಜವನ್ನು ಸೇರ್ಪಡೆ ಮಾಡಿ ಶೇ/ 5 ಮೀಸಲಾತಿ ನಿಗದಿ ಗೋಳಿಸಲಾಗಿಯತ್ತು, ನಂತರ ಸದರಿ ಆದೇಶವನ್ನು ಅಂದಿನ ಸರಕಾರ ಹಿಂಪಡೆದು ಆದಿ ಸಮಾಜಕ್ಕೆ ಅನ್ಯಾಯ ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆದಿ ಸಮಾಜವು ರಾಜ್ಯದಲ್ಲಿ ಬೀದರ್ ,ಕಲಬುರ್ಗಿ ಯಾದಗಿರಿ ಕೊಪ್ಪಳ ರಾಯಚೂರು ಬಳ್ಳಾರಿ ಕೊಪ್ಪಳ ವಿಜಯಪುರ ಬಾಗಲಕೋಟ ಚಿಕ್ಕೋಡಿ ಹಾವೇರಿ ಬೆಳಗಾವಿ ಗದಗ ಬೆಂಗಳೂರು ಜಿಲ್ಲೆಗಳಲ್ಲಿ ಹೆಚ್ಚು ಸಂಖ್ಯೆ ಹೊಂದಿದೆ.

  ರಾಜ್ಯದ ವಿವಿಧ ಭಾಗಗಳಲ್ಲಿ ಸುಮಾರು 38 ರಿಂದ 40 ಲಕ್ಷ ಜನಸಂಖ್ಯೆ ಹೊಂದಿದೆ .ಆದಿ ಬಣಜಿಗ ಸಮಾಜವು 1883 ರಲ್ಲಿ ಮುಂಬಯಿ ಕರ್ನಾಟಕ ವ್ಯಾಪ್ತಿಗೆ ಒಳಪಟ್ಟಾಗ ಮಹಾರಾಷ್ಟ್ರ ಸರ್ಕಾರದ ಗೇಜೇಟನಲ್ಲಿ ಆದಿ ಬಣಜಿಗ ಸಮಾಜ ಎಂದು ನಮೂದಿಸಿತ್ತು, ಇದನ್ನು ಕರ್ನಾಟಕ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು.

ಆದಿ ಸಮಾಜವು ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದೆ.ಮತ್ತು ಸೌಲಭ್ಯ ವಂಚಿತ ಸಮುದಾಯ ವಾಗಿದೆ.ಸಮಾಜದ ಹೆಚ್ಚಿನ ಜನ ಕೃಷಿ , ಕೂಲಿ ಕಾರ್ಮಿಕ ಕೆಲಸದಲ್ಲಿ ತೊಡಗಿದೆ.

 ಹಿಂದುಳಿದ ಆಯೋಗದ ಅಧ್ಯಕ್ಷರಾದ ಎಸ್ ಸಿದ್ದಗಂಗಯ್ಯ. ಎನ್ ಶಂಕರಪ್ಪ. ಸಿ ಎಸ್ ದ್ವಾರಕಾನಾಥ್. ಜಯಪ್ರಕಾಶ್ ಹೆಗಡೆ ಅವರಿಗೆ ಮನವಿ ಸಲ್ಲಿಸಿದ್ದೆವೆ 

2005 ರಲ್ಲಿ ಎಸ್ ಸಿದ್ದಗಂಗಯ್ಯ ಹಾಗೂ ಜಯಪ್ರಕಾಶ್ ಹೆಗಡೆ ರವರು ಅಂದು ಸರ್ಕಾರಕ್ಕೆ ಆದಿ ಸಮಾಜಕ್ಕೆ ಪ್ರವರ್ಗ 2 ಎ ‌ಮೀಸಲಾತಿ ಅವಶ್ಯವಿದೆ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.ಆದರೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ

 ಶ್ರೀ ಎಚ್ ಡಿ ದೇವೆಗೌಡ. ಶ್ರೀ ಜೆ ಎಚ್ ಪಟೇಲ್. ಶ್ರೀ ಎಸ್ ಎಂ ಕೃಷ್ಣ. ಶ್ರೀ ಎನ್ ಧರ್ಮಸಿಂಗ್. ಶ್ರೀ ಎಚ್ ಡಿ ಕುಮಾರಸ್ವಾಮಿ. ಶ್ರೀ ಬಿ ಎಸ್ ಯಡ್ಡಿಯೂರಪ್ಪ. ಡಿ ವಿ ಸದಾನಂದಗೌಡ . ಶ್ರೀ ಜಗದೀಶ್ ಶೆಟ್ಟರ್. ಶ್ರೀ ಸಿದ್ದರಾಮಯ್ಯ (ತಮಗೆ) ಶ್ರೀ ಬಸವರಾಜ ಬೊಮ್ಮಾಯಿ ಸೇರಿ ಎಲ್ಲಾ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇವೆ ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ.

  ಬೆಂಗಳೂರು , ಬೆಳಗಾವಿಯ ಚಳಿಗಾಲ ಅಧಿವೇಶನದಲ್ಲಿ 2 ಬಾರಿ ದೊಡ್ಡ ಸಂಖ್ಯೆಯಲ್ಲಿ ಆದಿ ಸಮಾಜ ಜನಸೇರಿ ಪ್ರತಿಭಟಿಸಿ, ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರಿಗೆ ಸಮಾಜದ ಸ್ಥಿತಿ ಗತಿ ಕುರಿತು ಮನವರಿಕೆ ಮಾಡಿದಾಗ ಸರ್ಕಾರ 2 -ಸಿ ಹಾಗೂ 2- ಡಿ ಪ್ರವರ್ಗ ಮಾಡಿ ಸಮಾಜವನ್ನು 3 -ಬಿ ಯಿಂದ 2- ಸಿ ಗೆ ಸೇರ್ಪಡೆಗೆ ಸೂಚಿಸಿತು.ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ.

 ಕರ್ನಾಟಕ ಸರ್ಕಾರದ ಗೇಜೇಟನಲ್ಲಿ ಸೇರ್ಪಡೆ ಗೊಳಿಸಿ ಪ್ರವರ್ಗ 2 -ಎ ‌ಮೀಸಲಾತಿಯನ್ನು ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಮೀಸಲಾತಿ ಸೌಲಭ್ಯ ಕಲ್ಪಿಸಲು ಸರ್ಕಾರ ಆದಿ ಸಮಾಜಕ್ಕೆ ಸೂಕ್ತ ನ್ಯಾಯ ಒದಗಿಸಬೇಕೆಂದು ಗವನಳ್ಳಿ ಅವರು ಸರ್ಕಾರಕ್ಕೆ ಒತ್ತಾಯ ಪಡಿಸಿದ್ದಾರೆ. ಒಂದು ವೇಳೆ ಸರ್ಕಾರ ನಿರ್ಲಕ್ಷ ಧೋರಣೆ ತೊರಿದರೆ ಸಮಾಜವು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದರು.