ಒಳಮೀಸಲಾತಿ ಜಾರಿ ಮಾಡದಿದ್ದರೆ ನೈತಿಕ ಹೊಣೆ ಹೊತ್ತು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಮಲ್ಲಿಕಾರ್ಜುನ ಜೀನಕೇರಿ ಆಗ್ರಹ
ಒಳಮೀಸಲಾತಿ ಜಾರಿ ಮಾಡದಿದ್ದರೆ ನೈತಿಕ ಹೊಣೆ ಹೊತ್ತು ಸಿಎಂ ಸಿದ್ದರಾಮಯ್ಯನವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮಲ್ಲಿಕಾರ್ಜುನ ಜೀನಕೇರಿ ಒತ್ತಾಯ
ಕಲಬುರಗಿ: ಇದೇ 28ರಂದು ಬೆಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಳಮೀಸಲಾತಿ ಜಾರಿ ಮಾಡದೇ ಶ್ರೀ ಸಿದ್ದರಾಮಯ್ಯ ಮಾನ್ಯ ಮುಖ್ಯಮಂತ್ರಿಗಳು ಮೊದಲು ಸದಾಶಿವ ಆಯೋಗ ಸುಮಾರು ವರ್ಷಗಳಿಂದ ನೇಮಕ ಮಾಡಲಾಗಿತ್ತು.ಒಂದು ಆಯೋಗ ವರದಿ ನೀಡಿದೆ. ಅದು ಸರಿಯಿಲ್ಲ ಅಂತಾ ಒಳ ಮೀಸಲಾತಿಯನ್ನು ಕಾರ್ಯರೂಪಕ್ಕೆ ತಂದು ಇದನ್ನು ನಿಮ್ಮ ಪಕ್ಷದಲ್ಲಿರುವ ರಾಜಕೀಯವರ ಒತ್ತಡಕ್ಕೆ ಮಣಿದು ಒಳ ಮೀಸಲಾತಿ ಜಾರಿಗೆ ತರದೇ ದಾರಿ ತಪ್ಪಿಸುವ ಕೆಲಸ ಮಾಡಿದ್ದಿರಿ. ಒಂದು ವೇಳೆ ಒಳ ಮೀಸಲಾತಿ ಜಾರಿ ಮಾಡದೆ ಆಗದಿದ್ದರೆ ನೈತಿಕ ಹೊಣೆ ಹೊತ್ತು ಸಿದ್ರಾಮಯ್ಯನವರೆ ತಾವುಗಳು ಕೂಡಲೇ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಭಾರತೀಯ ಜನತಾ ಪಕ್ಷದ ಎಸ್ಸಿ ಮೋರ್ಚಾ ಅಧ್ಯಕ್ಷ ಮಲ್ಲಿಕಾರ್ಜುನ ಜೀನಕೇರಿ ಅವರು ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಸದಾಶಿವ ಆಯೋಗ ವರದಿ ತಯಾರಿಸಲು ಈ ಆಯೋಗಕ್ಕೆ ಬಿಜೆಪಿ ಸರ್ಕಾರ ಅನುದಾನ ಮಂಜೂರು ಮಾಡಲಾಗಿತ್ತು. ಈಗ ತಾನೆ ಹರಿಯಾಣದಲ್ಲಿ ಬಿಜೆಪಿ ಸರ್ಕಾರ ಒಳ ಮೀಸಲಾತಿಯು ಜಾರಿ ಮಾಡಿದೆ. ಇದೊಂದು ಉದಾಹರಣೆ ಇಟ್ಟುಕೊಂಡು ನಮ್ಮ ರಾಜ್ಯದಲ್ಲಿ ಒಳಮೀಸಲಾತಿ ಜಾರಿ ಮಾಡಬಹುದಾಗಿತ್ತು. ಆದರೆ ನೀವು ಹೈಕೋರ್ಟ ನಿವೃತ್ತ ನ್ಯಾಯಧೀಶರು ಆಯೋಗ ರಚನೆ ಮಾಡುವುದು ಏನು ಅವಶ್ಯಕತೆ ಇದೆನಾ? ತಾವು ಮರು ಉಪ ಚುನಾವಣೆ ನಿಮಿತ್ಯವಾಗಿ (ಗಿಮಿಕ್) ಮಾಡೀದ್ದಿರಿ. ಇದರಿಂದ ಮಾದಿಗರಿಗೆ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಿರಿ ಎಂದು ಅವರು ಆರೋಪಿಸಿದರು.
ನೀವು ಒಬ್ಬ ಹಿಂದುಳಿದ ವ್ಯಕ್ತಿಯಾಗಿ, ಬಡವರಾಗಿದ್ದು, ಹಸಿವು ಏನೆಂಬುವುದನ್ನು ಕಂಡಂತ ವ್ಯಕ್ತಿ ನಮ್ಮ ಸಮಾಜಕ್ಕೆ ಹೀಗೆ ಏಕೆ ಅನ್ಯಾಯ ಮಾಡುತ್ತಿದ್ದಿರಿ ಎಂದು ಅವರು ಪ್ರಶ್ನಿಸಿದರು? ಈ ರಾಜ್ಯ ಸರ್ಕಾರಕ್ಕೆ ಸುಮಾರು ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದೇವೆ. ತಮ್ಮ ರಾಜ್ಯದ ಅನುಗುಣವಾಗಿ ಒಳ ಮೀಸಲಾತಿ ಜಾರಿ ಮಾಡಬಹುದು ಎಂದು ಸಂವಿಧಾನ ನಿಯಮಗಳ ಪ್ರಕಾರ ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಹಿಂದುಳಿದ ಸಮಾಜದವರಿಗೆ ಅಭಿವೃದ್ಧಿ ಹೊಂದಬೇಕೆಂದು ಡಾ.ಬಿ.ಆರ್. ಅಂಬೇಡ್ಕರ್ ರವರ ಆಸೆಯಾಗಿತ್ತು. ಇದನ್ನು ಅರಿತುಕೊಂಡು ಸುಪ್ರಿಂ ಕೋರ್ಟ್ ಮಹತ್ವವಾದ ತೀರ್ಪು ನೀಡಿದೆ.ಆದರೂ ಕೂಡ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗ ನಮ್ಮ ಸಮಾಜಕ್ಕೆ ಬಹಳ ಮೋಸ ಮಾಡುತ್ತಿದೆ.
ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿಯಲ್ಲಿನ ಒಳ ಮೀಸಲಾತಿ ಜಾರಿ ವಿಚಾರವಾಗಿ ಸುಳ್ಳು ಭರವಸೆಗಳನ್ನು ನೀಡುತ್ತಾ ಬಂದಿದೆ. ಒಳ ಮೀಸಲಾತಿಯು ಸಂವಿಧಾನ ಬದ್ದ ಹಕ್ಕು, ಅದನ್ನು ಜಾರಿ ಮಾಡುವ ಅಧಿಕಾರ ಆಯಾ ರಾಜ್ಯ ಸರ್ಕಾರಗಳಿಗೆ ಇದೆ ಎಂದು ಸುಪ್ರಿಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ನ್ಯಾಯಾಲಯದ ಆದೇಶ ಧಿಕ್ಕರಿಸಿ ಅದನ್ನು ಜಾರಿ ಮಾಡದೇ ರಾಜ್ಯ ಸರ್ಕಾರ ಕಾಲಹರಣ ಮಾಡುತ್ತಿದೆ ಇದನ್ನು ಮಾದಿಗ ಸಮಾಜ ಖಂಡಿಸುತ್ತದೆ’ ಎಂದರು.
ಈ ಬಗ್ಗೆ ಅನೇಕ ವರ್ಷದಿಂದ ಹೋರಾಟ ನಡೆಯುತ್ತಿದ್ದು, ಆ ವೇಳೆ ತೊಡಕುಗಳನ್ನು ಮುಂದಿಡುತ್ತಿದ್ದರು. ಈಗ ಕಾನೂನು ಮೂಲಕವೇ ಸ್ಪಷ್ಟನೆ ದೊರಕಿದೆ.ಆದರೆ ಅದರಲ್ಲಿನ ಕೆಲವು ಸಣ್ಣ ಅಂಶವನ್ನು ನೆಪವಾಗಿಟ್ಟು ಮೀಸಲಾತಿ ಜಾರಿಗೊಳಿಸುವುದನ್ನು ತಡೆಯುವ ಹುನ್ನಾರ ನಡೆಯುತ್ತಿದೆ. ಪರಿಶಿಷ್ಟ ಜಾತಿಯೊಳಗಡೆ ಯಾವುದೇ ಸೌಲಭ್ಯ ದೊರೆಯದೆ ಅನ್ಯಾಯಕ್ಕೊಳಗಾಗಿರುವ ಸಮುದಾಯಗಳಿಗೆ ಒಳ ಮೀಸಲಾತಿಯು ಸಾಮಾಜಿಕ ನ್ಯಾಯ ದೊರಕಿಸಿ ಕೊಡಲಿದ್ದು ಶೀಘ್ರ ಜಾರಿಗೊಳಿಸಬೇಕು’ ಎಂದು ಆಗ್ರಹಿಸಿದರು.
ಜನರಿಗೆ ಸಾಮಾಜಿಕ ಭದ್ರತೆ ನೀಡುತ್ತೇವೆ ಎಂಬ ಭರವಸೆ ನೀಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಒಳಮೀಸಲಾತಿ ಜಾರಿ ವಿಚಾರದಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವುದು ಸರಿಯಲ್ಲ. ತನ್ನ ಪ್ರಣಾಳಿಕೆಯಲ್ಲಿ ತಿಳಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪನ್ನು ಆಧರಿಸಿ ಮೀಸಲಾತಿ ಜಾರಿಗೊಳಿಸಬೇಕು’ ಎಂದು ಒತ್ತಾಯಿಸಿದರು.
‘ಒಳಮೀಸಲಾತಿ ಜಾರಿಯಾಗುವವರೆಗೆ ಬ್ಯಾಕ್‌ಲಾಗ್ ಸೇರಿದಂತೆ ಯಾವುದೇ ಹುದ್ದೆ, ನೇಮಕಾತಿ ಹಾಗೂ ಪದೋನ್ನತಿ ಮಾಡಬಾರದು. ಜನಗಣತಿ ವಿಚಾರ ಮುನ್ನೆಲೆಗೆ ತಂದು ಎಸ್.ಸಿ ಒಳಮೀಸಲಾತಿ ಜಾರಿಗೊಳಿಸುವಲ್ಲಿ ನಿರ್ಲಕ್ಷ್ಯ ತೋರಬಾರದು. ಸುಪ್ರೀಂ ಕೋರ್ಟ್ ತೀರ್ಪು ಉಲ್ಲಂಘನೆಯ ಒಳ ಹುನ್ನಾರ ಮುಂದುವರಿಸಿದರೆ ಹೋರಾಟ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.
ಈಗ ಸರ್ಕಾರ ಇದೆ ನಾಮ ನಿರ್ದೇಶನಗಳು ನಮ್ಮ ಮಾದಿಗ ಸಮಾಜದವರಿಗೆ ಸುಮಾರು 9 ಕ್ಷೇತ್ರಗಳಿದ್ದು,ಇದರಲ್ಲಿ ಯಾವ ಕ್ಷೇತ್ರಗಳಲ್ಲಿ ನಮ್ಮ ಮಾದಿಗ ಸಮಾಜದವರಿಗೆ ನಾಮ ನಿರ್ದೇಶನ ಮಾಡಿದ್ದಾರೆ. ಇದರಿಂದ ನಮ್ಮ ಸಮಾಜದವರಿಗೆ ಕಾಂಗ್ರೆಸ್ ಪಕ್ಷವು ಹೀಗೆ ಮೋಸ ಮಾಡುತ್ತಿದೆ. ಕೂಡಲೇ ಮಾದಿಗ ಸಮಾಜದವರು ಇದನ್ನು ಅರಿತುಕೊಳ್ಳಬೇಕು ಎಂದು ಅವರು ಪತ್ರಿಕಾ ಪ್ರಕಟಣೆ ಮೂಲಕ ಮನವಿ ಮಾಡಿಕೊಂಡರು.