ವಿದ್ಯುತ್ ಮತ್ತು ಹಾಲು ದರ ಏರಿಕೆ: ಜನರ ಮೇಲೆ ಆರ್ಥಿಕ ಹೊರೆ: ಬಿಜೆಪಿ ಬಿ. ಜಯಸಿಂಗ್ ಆರೋಪ

ವಿದ್ಯುತ್ ಮತ್ತು ಹಾಲು ದರ ಏರಿಕೆ: ಜನರ ಮೇಲೆ ಆರ್ಥಿಕ ಹೊರೆ: ಬಿಜೆಪಿ  ಬಿ. ಜಯಸಿಂಗ್ ಆರೋಪ

ವಿದ್ಯುತ್ ಮತ್ತು ಹಾಲು ದರ ಏರಿಕೆ: ಜನರ ಮೇಲೆ ಆರ್ಥಿಕ ಹೊರೆ: ಬಿಜೆಪಿ ಬಿ. ಜಯಸಿಂಗ್ ಆರೋಪ 

ಕಲಬುರಗಿ: ರಾಜ್ಯದಲ್ಲಿ ವಿದ್ಯುತ್ ಮತ್ತು ಹಾಲಿನ ದರ ಏರಿಕೆಯಿಂದ ಗ್ರಾಹಕರ ಮೇಲೆ ಆರ್ಥಿಕ ಹೊರೆ ಏರಿಕೆಯಾಗಿದೆ ಎಂದು ಭಾಜಪ ಹಿಂದುಳಿದ ವರ್ಗ ಮೋರ್ಚಾ ಮಹಾನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ. ಜಯಸಿಂಗ್ ಆರೋಪಿಸಿದರು.

ಅವರು ಮಾತನಾಡಿ, "ಕಾಂಗ್ರೆಸ್ ಸರ್ಕಾರವು ಜನಸಾಮಾನ್ಯರ ಜೀವನವನ್ನು ಸಂಕಷ್ಟಕ್ಕೆ ದೂಡುತ್ತಿದೆ. ವಿದ್ಯುತ್ ದರ ಏರಿಕೆ ಹಾಗೂ ಹಾಲು ದರ ಹೆಚ್ಚಳದಿಂದ ಪ್ರತಿ ಒಬ್ಬರು ಎದುರಿಸಬೆಕಾಗಿದೆ. ಇದು ಆರ್ಥಿಕವಾಗಿ ದುರ್ಬಲ ಕುಟುಂಬಗಳಿಗೆ ಹೆಚ್ಚುವರಿ ಹೊರೆ ಸೇರ್ಪಡೆ ಮಾಡುತ್ತಿದೆ," ಎಂದು ಹೇಳಿದರು.

ರಾಜ್ಯ ಸರ್ಕಾರವು ಜನಪರ ನೀತಿಗಳನ್ನು ಅಳವಡಿಸದೆ, ಆರ್ಥಿಕ ಬಿಕ್ಕಟ್ಟಿನ ಅವಲಂಬನೆ ಮಾಡುತ್ತಿರುವುದು ಖಂಡನೀಯ ಎಂದು ಅವರು ಅಭಿಪ್ರಾಯಪಟ್ಟರು.

"ಕಾಂಗ್ರೆಸ್ ಸರ್ಕಾರವು ಜನರ ಜೀವನ ಸುಗಮಗೊಳಿಸುವ ಬದಲಿಗೆ ಬೆಲೆ ಏರಿಕೆ ಮೂಲಕ ಜನರ ಕಷ್ಟವನ್ನು ಹೆಚ್ಚಿಸುತ್ತಿದೆ. ಇದಕ್ಕೆ ಪ್ರಜಾಪ್ರಭುತ್ವದ ಕ್ರಮವಂತಿಕೆ ಇಲ್ಲ," ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಹಿಂದುಳಿದ ವರ್ಗ ಮೋರ್ಚಾ ಪ್ರಮುಖರು ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.