ಅಮಿತ್ ಶಾ ಬಹಿರಂಗವಾಗಿ ಕ್ಷಮೆಯಾಚಿಸಲಿ : ಯಲ್ಲಾಲಿಂಗ ದಂಡಿನ್
ಅಮಿತ್ ಶಾ ಬಹಿರಂಗವಾಗಿ ಕ್ಷಮೆಯಾಚಿಸಲಿ : ಯಲ್ಲಾಲಿಂಗ ದಂಡಿನ್
ಕಲಬುರಗಿ: ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರನ್ನು ಪದೇ ಪದೇ ಬಳಸುವುದು ಶೋಕಿಯಾಗಿದೆ, ಅವರ ಹೆಸರು ಬದಲಿಗೆ ದೇವರ ಹೆಸರನ್ನು ಹೇಳಿದ್ದರೆ ಏಳು ಜನ್ಮದ ವರೆಗೂ ಸ್ವರ್ಗ ಲಭ್ಯವಾಗುತ್ತಿತ್ತು" ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಈ ಮೇಲಿನ ಹೇಳಿಕೆಯಲ್ಲಿ ಅಂಬೇಡ್ಕರ್ ವಿರೋಧಿ ಮನೋಭಾವ ಎದ್ದು ಕಾಣುತ್ತದೆ. ಇಂತಹ ಅಸೂಕ್ಷ್ಮ ಮತ್ತು ಅಭದ್ರ ಹೇಳಿಕೆ ಇಡೀ ದೇಶದ ಶೋಷಿತ ಸಮುದಾಯಗಳ ಸಂಕಷ್ಟ ಮತ್ತು ಅವಮಾನವನ್ನು ಪುನಃ ಒತ್ತಿಹೇಳುತ್ತದೆ. ಅವರ ಈ ಹೇಳಿಕೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ.
ಭಾರತದ ಇತಿಹಾಸದಲ್ಲಿ ಅಸ್ಪೃಶ್ಯರು, ಮಹಿಳೆಯರು ಮತ್ತು ಶೋಷಿತ ವರ್ಗಗಳಿಗೆ ಮಾನವೀಯ ಬದುಕು ನೀಡಿದ ಶಕ್ತಿ ಬಾಬಾಸಾಹೇಬರು ಕೊಟ್ಟ ಸಂವಿಧಾನ ಮತ್ತು ಅವರ ಮಾರ್ಗದರ್ಶಕ ತತ್ವಗಳಿಂದ ಬಂದಿದೆ. ಅಸ್ಪೃಶ್ಯತೆ, ಅಸಮಾನತೆ, ಮತ್ತು ಶೋಷಣೆಯ ವಿರುದ್ಧ ಬಾಬಾಸಾಹೇಬರು ತಮ್ಮ ತ್ಯಾಗ, ಅಧ್ಯಯನ ಮತ್ತು ಬದ್ಧತೆಯ ಮೂಲಕ ಸಮಾಜವನ್ನು ಮೇಲೆತ್ತಿದ ಸತ್ಯವನ್ನು ಮರೆಯುವಂತಿಲ್ಲ.
ಬಾಬಾ ಸಾಹೇಬ್ ಅವರು ಕೊಟ್ಟ ಸಂವಿಧಾನದ ಅಡಿಯಲ್ಲಿಯೇ ಕಾರ್ಯ ನಿರ್ವಹಿಸುತ್ತಿರುವ ಸಂಸತ್ ನಲ್ಲಿ ನಿಂತು ಇಂತಹ ಹೇಳಿಕೆ ನೀಡುತ್ತಿರುವ ತಾವುಗಳು. ಅಂಬೇಡ್ಕರ್ ಹುಟ್ಟದಿದ್ದರೆ ನೀವು ನಿಮ್ಮೂರಿನಲ್ಲೇ ಗುಜರಿ ವ್ಯಾಪಾರ ಮಾಡಿಕೊಂಡು ಇರಬೇಕಾಗುತಿತ್ತು.
ಬುದ್ಧ, ಬಸವಣ್ಣ ಮತ್ತು ಅಂಬೇಡ್ಕರ್ ಅವರ ಆದರ್ಶಗಳು, ಶೋಷಿತ ವರ್ಗಗಳಿಗೆ ಹೊಸ ಬದುಕು ನೀಡಿದ ನಿಜವಾದ ದಾರಿ. ಬಾಬಾಸಾಹೇಬರು ಸ್ಪಷ್ಟವಾಗಿ ಹೇಳಿರುವಂತೆ, ಶಿಕ್ಷಣ, ವೈಜ್ಞಾನಿಕ ಮನೋಭಾವ ಮತ್ತು ವೈಚಾರಿಕತೆ ಮಾತ್ರವೇ ಸಮಾಜದಲ್ಲಿ ಬದಲಾವಣೆ ತರಬಲ್ಲ ಯೋಗ್ಯ ಮಾರ್ಗ.
ಅಮಿತ್ ಶಾ ಅವರಂತಹ ವ್ಯಕ್ತಿಗಳು ಇಂತಹ ಹೀನ ಹೇಳಿಕೆಗಳಿಂದ ದೇಶದ ಜನತೆ ಮುಂದೆ ಕ್ಷಮೆಯಾಚಿಸಬೇಕು ಮತ್ತು ತಮ್ಮ ಸ್ಥಾನಕ್ಕೆ ತಕ್ಷಣ ರಾಜೀನಾಮೆ ನೀಡಬೇಕು ಎಂದು ವಿಧ್ಯಾರ್ಥಿಗಳ ಒಕ್ಕೂಟ ತಾಲೂಕು ಅಧ್ಯಕ್ಷ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯದರ್ಶಿ ಯಲ್ಲಾಲಿಂಗ ದಂಡಿನ್ ಆಗ್ರಹಿಸಿದರು. ಈ ಸಂದರ್ಭದಲ್ಲಿ ಶರಣು ತೇಗಲತಿಪ್ಪಿ, ಪ್ರವಿಣ್ ಮೇತ್ರಿ ಕನಕಪೂರ, ವಾಶಿಂ ಅಕ್ರಂ ಗಾರಂಪಳ್ಳಿ, ಅಶೋಕಬಾಬು, ನಾಗಸೇನ್ ಭೌಮನಳ್ಳಿ, ಗುರುಪ್ರಸಾದ ಪಾಟಿಲ್, ಅಕ್ಷಿದ್ ಮೀಯಾ ಹಾಜರಿದ್ದರು.