ಜೋಗುರ ಗ್ರಾಮದಲ್ಲಿ ರೈತ ಭವನದ ಕಟ್ಟಡಕ್ಕೆ ಅಡಿಗಲ್ಲು: ಅಂದಾಜು ರೂ. 30 ಲಕ್ಷ ಮೊತ್ತದ ಕಾಮಗಾರಿ ಆರಂಭ

ಜೋಗುರ ಗ್ರಾಮದಲ್ಲಿ ರೈತ ಭವನದ ಕಟ್ಟಡಕ್ಕೆ ಅಡಿಗಲ್ಲು: ಅಂದಾಜು ರೂ. 30 ಲಕ್ಷ ಮೊತ್ತದ ಕಾಮಗಾರಿ ಆರಂಭ

 ಜೋಗುರ ಗ್ರಾಮದಲ್ಲಿ ರೈತ ಭವನದ ಕಟ್ಟಡಕ್ಕೆ ಅಡಿಗಲ್ಲು: ಅಂದಾಜು ರೂ. 30 ಲಕ್ಷ ಮೊತ್ತದ ಕಾಮಗಾರಿ ಆರಂಭ   

ಕಲಬುರಗಿ: ಕಲಬುರಗಿ ತಾಲೂಕಿನ ಅಫಜಲಪೂರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜೋಗುರ ಗ್ರಾಮದಲ್ಲಿ ರೈತ ಭವನದ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಭಾನುವಾರ ಅಡಿಗಲ್ಲು ಹಾಕಲಾಯಿತು. ಈ ಕಾಮಗಾರಿ ರೂ. 30 ಲಕ್ಷಗಳ ಅಂದಾಜು ವೆಚ್ಚದಲ್ಲಿ ಭೀಮಾ ವಿತ ನೀರಾವರಿ ಯೋಜನೆ, ವಿಭಾಗ ಅಫಜಲಪೂರ (ಕರ್ನಾಟಕ ನೀರಾವರಿ ನಿಗಮ ನಿಯಮಿತ - ಕರ್ನಾಟಕ ಸರ್ಕಾರದ ಒಂದು ಉಧ್ಯಮ) ಮೂಲಕ ಕೈಗೊಳ್ಳಲಾಗುತ್ತಿದೆ.

ಈ ಅಡಿಗಲ್ಲು ಸಮಾರಂಭವನ್ನು ಕೆಪಿಸಿಸಿಐ ಸದಸ್ಯರು, ಹೆಚ್‌ಕೆಇ ಸದಸ್ಯರು ಹಾಗೂ ಹಿರಿಯ ಕಾಂಗ್ರೆಸ್ ಮುಖಂಡರಾದ ಅರುಣಕುಮಾರ ಎಂವಾಯ್ ಪಾಟೀಲ ಅವರು ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಬಸವಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕವಿತಾ ಎಂ. ಸೀತಾಳೆ, ಸ್ಥಳೀಯ ಮುಖಂಡರಾದ ಚಿತಳಪ್ಪ ಸಣ್ಣಃಮನಿ, ಸುಲ್ತಾನ, ಅಶೋಕ, ಸೋಮ, ಮಶಾಕ್ ಪಟೇಲ್, ಸುರೇಶ ತಿಬ್ಬಶೆಟ್ಟಿ, ಬಸವರಾಜ ಜೋಗೂರು, ಭೀಮಾ ವಿತ ಯೋಜನೆಯ ಮುಖ್ಯ ಅಭಿಯಂತರ ಸೂರ್ಯಕಾಂತ ಮಾಲೆ, ಕಾರ್ಯನಿರ್ವಾಹಕ ಅಭಿಯಂತರ ಶಿವಕುಮಾರ ಸ್ವಾಮಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಸಂತೋಷಕುಮಾರ ಸಜ್ಜನ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

ಸ್ಥಳೀಯ ರೈತರ ಬೇಡಿಕೆಗೆ ಸ್ಪಂದನೆಯಾಗಿ ಈ ಕಾಮಗಾರಿ ಕೈಗೊಳ್ಳಲಾಗಿದ್ದು, ರೈತರಿಗೆ ಒಳಿತಾದ ಸಹಕಾರ ಕೇಂದ್ರವೊಂದು ರೂಪುಗೊಳ್ಳಲಿದೆ ಎಂಬ ನಿರೀಕ್ಷೆಯಿದೆ.