ಮೂಲಗೆ ಅಭಿಮಾನಿಗಳಿಂದ ಬೃಹತ್ ಪ್ರತಿಭಟನಾ ಮೆರವಣಿಗೆ

ಮೂಲಗೆ ಅಭಿಮಾನಿಗಳಿಂದ ಬೃಹತ್ ಪ್ರತಿಭಟನಾ ಮೆರವಣಿಗೆ
ಕಲಬುರಗಿ: ಕಾಂಗ್ರೆಸ್ ಮುಖಂಡರಾದ ನಿಲಕಂಠರಾವ ಮೂಲಗೆ ಅವರನ್ನು ರಾಜ್ಯ ಸರ್ಕಾರ ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ನೇಮಿಸಿ ತಕ್ಷಣವೇ ಆದೇಶ ರದ್ದುಪಡಿಸಿರುವ ಕ್ರಮವನ್ನು ಖಂಡಿಸಿ ಮೂಲಗೆ ಅವರ ಅಭಿಮಾನಿಗಳು ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ಪ್ರತಿಭಟನಾಕಾರರು ಮೂಲಗೆ ಅವರ ನೇಮಕಾತಿಯನ್ನು ಪುನಃ ಜಾರಿಗೆ ತರಬೇಕೆಂದು ಆಗ್ರಹಿಸಿ ಘೋಷಣೆ ಕೂಗಿದರು.
ಮೆರವಣಿಗೆ ಬಳಿಕ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಯಿತು. ಅಭಿಮಾನಿಗಳು ಮೂಲಗೆ ಅವರು ಸದಾ ಹೋರಾಟಗಾರ ಹಾಗೂ ಸಾಮಾನ್ಯ ಜನರ ಪರ ಧ್ವನಿ ಎತ್ತಿದ ಜನನಾಯಕರೆಂದು ಶ್ಲಾಘಿಸಿದರು. ಈ ವೇಳೆ ಜನರ ಹಿತಾಸಕ್ತಿಗಾಗಿ ತೀರ್ಮಾನವನ್ನು ಹಿಂತೆಗೆದುಕೊಳ್ಳುವುದು ನ್ಯಾಯಸಮ್ಮತವಾಗುವುದೆಂದು ಅಭಿಪ್ರಾಯ ವ್ಯಕ್ತವಾಯಿತು.
ಕಾರ್ಯಕ್ರಮದಲ್ಲಿ ರಾಜೇಶ ಹಡಗಿಲಕರ್, ಶಿವಕುಮಾರ ಮುಡ್ಡಿ, ಗೋಪಾಲ ಯಾದವ್, ಶಶೀಧರ ಆಮಟೆ, ಯಲ್ಲಪ್ಪ ಯಾದವ್, ರಾಜಶೇಖರ್ ಓಂಶೆಟ್ಟಿ, ಲಕ್ಷ್ಮಣ ಕೋರಿ, ಎಂ.ಡಿ. ಹಿಸಾಮುದ್ದಿನ್ ಮತ್ತಿತರರು ಭಾಗವಹಿಸಿದರು.