ಪ್ರವಾಹ ಪೀಡಿತ ಚಿಂಚೋಳಿ ಪ್ರದೇಶಕ್ಕೆ ಶಾಸಕ ಡಾ. ಅವಿನಾಶ ಜಾಧವ ಭೇಟಿ – ಸಿಎಂ ವಿಶೇಷ ಪ್ಯಾಕೇಜ್ ಘೋಷಿಸಲು ಮನವಿ*
ಶಾಸಕ ಡಾ. ಅವಿನಾಶ ಜಾಧವ : ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ಪ್ರವಾಹಕ್ಕೆ 100 ರಷ್ಟು ರೈತರ ಬೆಳೆ ನಷ್ಟ,
ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಚಿಂಚೋಳಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಒತ್ತಾಯ,
ಸಿಎಂ ಚಿಂಚೋಳಿಗೆ ವಿಶೇಷ ಪ್ಯಾಕೇಜ್ ನೀಡಿ, ಹಸಿ ಬರಗಾಲ ಘೋಷಿಸಲು ಮನವಿ
ಚಿಂಚೋಳಿ : ರೈತರು ಬೆಳೆದ ಬೆಳೆಯ ಮೇಲೆ ನಂಬಿಕೆಯನ್ನು ಇಟ್ಟು ಬದುಕುತ್ತಿದರು. ಆದರೆ ಮೂರು ದಿನಗಳಿಂದ ಅತಿಯಾಗಿ ಸುರಿದ ಮಳೆಯ ಪ್ರಮಾಣ ಹೆಚ್ಚಳಕ್ಕೆ ರೈತ ಬೆಳೆದ ತೊಗರಿ ಸೋಯಾ, ಕಬ್ಬು ಪ್ರವಾಹಕ್ಕೆ ಕೊಚ್ಚಿಕೊಂಡು ಹೋಗಿದೆ. ರೈತ ಕಂಗಲಾಗಿದ್ದಾನೆ. ಚಿಂಚೋಳಿ ಕ್ಷೇತ್ರದ ರೈತರ ಒಳತಿಗಾಗಿ ವಿಶೇಷ ಪ್ಯಾಕೇಜ್ ನೀಡಬೇಕು ಮತ್ತು ಹಸಿ ಬರಗಾಲ ಘೋಷಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ಒತ್ತಾಯಿಸಲಾಗುತ್ತದೆ ಎಂದು ಶಾಸಕ ಡಾ. ಅವಿನಾಶ ಜಾಧವ್ ತಿಳಿಸಿದರು.
ಅವರು ತಾಲೂಕಿನ ಶಾದಿಪೂರ, ಚಾಪ್ಲಾನಾಯಕ ತಾಂಡಾ, ಜವಾಹರನಗರ, ಜಿಲ್ವರ್ಷ, ಬಿಕ್ಕುನಾಯಕ ತಾಂಡಾ, ಬೋನಸಪೂರ್, ಚಿಂದಾನೂರ, ಮೋಗದಂಪೂರ್, ಸೋಮಲಿಂಗದಳ್ಳಿ ಗ್ರಾಮಗಳ ಹಾನಿಗೊಳಗಾದ ರೈತರ ಹೊಲಗಳಿಗೆ ಮತ್ತು ಹಾನಿಗೊಳಗಾದ ಸೇತುವೆಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಪ್ರವಾಹದಿಂದ ಆಗಿರುವ ಹಾನಿಯ ಪರಿಸ್ಥಿತಿ ಬಗ್ಗೆ ಅವಲೋಕಿಸಿ, ಸುದ್ಧಿಗಾರರೊಂದಿಗೆ ಮಾತನಾಡಿದರು.
ತೆಲಂಗಾಣ ರಾಜ್ಯದ ಕೆರೆ ಯ ಒಡೆದರ ಪರಿಣಾಮವಾಗಿ ನೀರು ಹರಿದು ಬಂದಿದರ ಹಿನ್ನಲೆಯಲ್ಲಿ ಶಾದಿಪೂರ ಭಾಗದ ರೈತರ ಬೆಳೆಗಳು ಹಾನಿಗೊಂಡಿವೆ. ಆದರೆ ಕೆಲವು ಕುತಂತ್ರಿಗಳು ಇದು ಶಾದಿಪೂರ್ ಕೆರೆ ಆಗದ ದುರಸ್ತಿ ಕಾರ್ಯದಿಂದ ಪ್ರವಾಹ ಆಗಿ, ರೈತರ ಬೆಳೆ ಹಾಳಾಗಿದೆ ಎಂದು ಹೇಳುತ್ತಿದ್ದಾರೆ. ನಾವು ಫೋಟೋ ಶೋ ಗೋಸ್ಕರ ಪ್ರಚಾರ ಮಾಡಕ್ಕೆ ಬಂದಿಲ್ಲ. ರೈತರು ಮತ ಕೊಟ್ಟು ಗೆಲ್ಲಿಸಿ ಶಾಸಕನಾಗಿ ಮಾಡಿ ಶಕ್ತಿ ನೀಡಿದ್ದಾರೆ. ಅವರ ಹಿತಕಾಯುವ ಕೆಲಸಕ್ಕಾಗಿ ಬಂದಿದ್ದೇವೆ ಹೊರತು ಯಾವುದೇ ರಾಜಕೀಯ ಮಾಡಲು ಬಂದಿಲ್ಲ. ನಾನೊಬ್ಬ ಕಾಮನ್ ಮ್ಯಾನ್ ಎಂದರು. ಅಧಿಕಾರಿಗಳು ರೈತರಿಗೆ ಹಾನಿಯಾಗಿರುವ ನಷ್ಟದ ಬೆಳೆ ಬಗ್ಗೆ ಸರಕಾರಕ್ಕೆ ವರದಿ ಸಲ್ಲಿಸಬೇಕು. ನಾಳೆ ಸಿಎಂ ಸಿದ್ದರಾಮಯ್ಯ ಅವರು ಕಲಬುರಗಿ ಜಿಲ್ಲೆಗೆ ಆಗಮಿಸಲಿದ್ದು, ಅಧಿಕಾರಿಗಳು ಪ್ರವಾಹದಿಂದ ಆಗಿರುವ ಹಾನಿಯ ಬಗ್ಗೆ ಸಮಗ್ರ ವರದಿ ಸಲ್ಲಿಸಬೇಕು ಎಂದು ತಿಳಿಸಿದರು. ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಕೂಡ ಚಿಂಚೋಳಿ ಕ್ಷೇತ್ರದಲ್ಲಿ ಪ್ರವಾಹದ ಹಾನಿಯ ನಷ್ಟದ ಬಗ್ಗೆ ಭೇಟಿ ನೀಡಿ ಸಮೀಕ್ಷೆ ನಡೆಸಿ, ಕ್ಷೇತ್ರಕ್ಕೆ ವಿಶೇಷ ಪ್ಯಾಕೇಜ್ ನೀಡುವುದರೊಂದಿಗೆ ಹಸಿ ಬರಗಾಲ ಘೋಷಿಸಲು ಸರಕಾರಕ್ಕೆ ಒತ್ತಾಯಿಸಲು ಕೆಪಿಸಿಸಿ ಉಪಾಧ್ಯಕ್ಷ ಆಗಿರುವ ಸುಭಾಷ ರಾಠೋಡ್ ಅವರು ಸರಕಾರದ ಮೇಲೆ ಒತ್ತಡತಂದು ನಷ್ಟಕ್ಕೆ ಒಳಗಾದ ಕ್ಷೇತ್ರದ ರೈತರ ಕಣ್ಣೀರು ತಡೆಯಬೇಕು ಎಂದರು.
ಈ ಸಂದರ್ಭದಲ್ಲಿ ಅಧಿಕಾರಿಗಳಾದ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ,ಇಒ ಸಂತೋಷ ಚವ್ಹಾಣ, ಸಹಾಯಕ ಕೃಷಿ ಅಧಿಕಾರಿ ವೀರಶೆಟ್ಟಿ ರಾಠೋಡ್, ಕೃಷಿ ಅಧಿಕಾರಿ ಇಮ್ರಾನ್ ಅಲಿ, ಪಿಆರ್ ಇ ಪ್ರವೀಣ, ಬಿಜೆಪಿ ಮುಖಂಡ ಅಶೋಕ ಮೊಗದಂಪೂರ್, ಉಮಾಪತಿ, ಗೋಪಾಲ ಕುಂಚಾವರಂ, ಅಮರ ಲೋಡ್ನೂರ್, ವಿಜಯಕುಮಾರ ರಾಠೋಡ್, ರಾಜು ಪವಾರ, ಅಶೋಕ ಚವ್ಹಾಣ, ಪ್ರೇಮಸಿಂಗ್ ಜಾಧವ, ಕೆ. ಎಂ ಬಾರಿ, ಭೀಮಶೆಟ್ಟಿ ಮುರುಡಾ, ನಾರಾಯಣ ನಾಟಿಕಾರ ಉಪಸ್ಥಿತರಿದ್ದರು.