ಜಯನಗರ ಶಿವಮಂದಿರದಲ್ಲಿ ಸಂಭ್ರಮದಿಂದ ಜರುಗಿದ ಗರ್ಭಾ ದಾಂಡಿಯಾ ನೃತ್ಯ

ಜಯನಗರ ಶಿವಮಂದಿರದಲ್ಲಿ ಸಂಭ್ರಮದಿಂದ ಜರುಗಿದ ಗರ್ಭಾ ದಾಂಡಿಯಾ ನೃತ್ಯ

 ಜಯನಗರ ಶಿವಮಂದಿರದಲ್ಲಿ ಸಂಭ್ರಮದಿಂದ ಜರುಗಿದ ಗರ್ಭಾ ದಾಂಡಿಯಾ ನೃತ್ಯ 

ಕಲಬುರಗಿ:ದಸರಾ ಹಬ್ಬದ ಅಂಗವಾಗಿ ನವರಾತ್ರಿ ವಿಶೇಷ ಜಯನಗರ ಶಿವಮಂದಿರದಲ್ಲಿ ಭಾನುವಾರ ಸಂಜೆ ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಸಂಭ್ರಮ ಸಡಗರದಿಂದ ಗರ್ಭಾ ದಾಂಡಿಯಾ ನೃತ್ಯ ಕಾರ್ಯಕ್ರಮ ಜರುಗಿತು.

ನಾಲ್ಕು ಚಕ್ರ ಸಂಘಟನೆಯ ಮುಖ್ಯಸ್ಥೆ ಸಮಾಜಸೇವಕಿ ಮಾಲಾ ಕಣ್ಣಿ ಅವರು ಜ್ಯೋತಿ ಬೆಳಗಿಸುವ ಮೂಲಕ ದಾಂಡಿಯಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ನಂತರ ಮಾತನಾಡಿದ ಅವರು ಗರ್ಭಾ ದಾಂಡಿಯಾ ನೃತ್ಯ ದಸರಾ ಹಬ್ಬದ ಮಹತ್ವ ಸಾರುತ್ತದೆ. ದಾಂಡಿಯಾ ನೃತ್ಯ ಕೇವಲ ಮನೋರಂಜನೆ ಅಲ್ಲ.ಅದೊಂದು ಒಗ್ಗಟ್ಟು ಬಲಪಡಿಸುವ ಸಾಧನವಾಗಿದೆ.ಮಹಿಳೆಯರು, ಮಕ್ಕಳು ಸೇರಿದಂತೆ ಅನೇಕರು ಇದರಲ್ಲಿ ಭಾಗವಹಿಸುವುದು ಒಂದು ವಿಶೇಷ.ಪ್ರಥಮವಾಗಿ ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಶಿವಂದಿರದಲ್ಲಿ ಏರ್ಪಡಿಸಿ ಯಶಸ್ಸು ಕಂಡಿರುವುದು ಶ್ಲಾಘನೀಯ ಎಂದರು.

ವಿವಿಧ ಬಡಾವಣೆಗಳಿಂದ ಅನೇಕ ಮಹಿಳೆಯರು, ತರುಣಿಯರು ವಿಶೇಷ ಅಲಂಕಾರ ಮಾಡಿಕೊಂಡು ಕೊಲು ಹಿಡಿದುಕೊಡು ನೃತ್ಯದಲ್ಲಿ ಭಾಗವಹಿಸಿದ್ದರು.ಟ್ರಸ್ಟ್ ಅಧ್ಯಕ್ಷ ಡಾ.ಲಿಂಗರಾಜ ಸಿರಗಾಪೂರ, ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ ಕೆ.ಬಿ, ಮಹಿಳಾ ಘಟಕದ ಅಧ್ಯಕ್ಷೆ ಶೈಲಜಾ ವಾಲಿ, ಅನುರಾಧ ಕುಮಾರಸ್ವಾಮಿ, ದಾಂಡಿಯಾ ನೃತ್ಯಗಾರ್ತಿ ರಾಜೇಶ್ವರಿ ಪಾಟೀಲ ಮಾತನಾಡಿದರು.

ಅನಿತಾ ನವಣೆ ‌ಸ್ವಾಗತಿಸಿದರು.ಲತಾ ತುಪ್ಪದ ವಂದಿಸಿದರು.ಟ್ರಸ್ಬ್ ಪದಾಧಿಕಾರಿಗಳಾದ ಬಂಡಪ್ಪ ಕೇಸೂರ, ಬಸವರಾಜ ಮಾಗಿ, ಮಲ್ಲಯ್ಯ ಸ್ವಾಮಿ ಗಂಗಾಧರಮಠ, ವೀರಪ್ಪ ಹುಡುಗಿ, ಹಿರಿಯ ಸದಸ್ಯರಾದ ಬಸವರಾಜ ಅನ್ವರಕರ, ನಾಗರಾಜ ಖೂಬಾ, ಬಸವರಾಜ ಪುರ್ಮ, ಮನೋಹರ ಬಡಶೇಷಿ, ಸುನಿಲ್ ಬಿಡಪ್, ಮಲ್ಲಯ್ಯ ಸ್ವಾಮಿ ಬೀದಿಮನಿ,ಶಿವಮಂದಿರದ ಅರ್ಚಕ ವೀರಯ್ಯ ಹಿರೇಮಠ,ಮಹಿಳಾ ಘಟಕದ ಸುರೇಖಾ ಬಾಲಕೊಂದೆ, ಸುಜಾತಾ ಭೀಮಳ್ಳಿ, ಗೀತಾ ಸಿರಗಾಪೂರ, ಪಾರ್ವತಿ ರಠಕಲ್, ಗೀತಾ ಹುಡುಗಿ,ಗಂಗಾ ಅನ್ವರಕರ, ವಿಜಯಲಕ್ಷ್ಮಿ ಪುರ್ಮ, ಶೈಲಜಾ ಬೊಮ್ಮಣ,ನಿಲೋಚನಾ ಬಿಡಪ್ಪ, ಅರ್ಚನಾ, ಜ್ಯೋತಿ ಬಂಡಿ, ಸವಿತಾ ಮುರಲೆ, ಸವಿತಾ ಕೋಟಗೆ ಸೇರಿದಂತೆ ಅನೇಕ ಮಹಿಳೆಯರು, ತರುಣಿಯರು, ಮಕ್ಕಳು,ಹಿರಿಯರು ಪಾಲ್ಗೊಂಡಿದ್ದರು.