ಓಬಿಸಿ ಸಮುದಾಯಗಳಲ್ಲಿ ಒಳಮೀಸಲಾಯಿಂದ ಹಿಂದುಳಿದ ಸಮುದಾಯಗಳಿಗೆ ಆಸರೆ
ಓಬಿಸಿ ಸಮುದಾಯಗಳಲ್ಲಿ ಒಳಮೀಸಲಾಯಿಂದ ಹಿಂದುಳಿದ ಸಮುದಾಯಗಳಿಗೆ ಆಸರೆ
ಕಲಬುರಗಿ: ಇತ್ತೀಚಿಗೆ ಮಾನ್ಯ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ದೇಶಾಂದ್ಯAತ ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿಯನ್ನು ಜಾರಿಗೆ ತರಲಾಗುತ್ತಿದೆ. ಅದರಂತೆ ಕರ್ನಾಟಕದಲ್ಲಿ ಒಳಮೀಸಲಾತಿಗೆ ರಾಜ್ಯ ಸರ್ಕಾರವು ಕ್ರಮಕೈಗೊಳ್ಳುತ್ತಿದೆ. ಆದರೆ ಓಬಿಸಿ ಸಮುದಾಯಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಸಮುದಾಯಗಳು ಮುಂದೆ ಬರಬರಲು ಓಬಿಸಿಯಲ್ಲಿಯೂ ಒಳಮೀಸಲಾತಿ ಜಾರಿಗೆ ಆಗಬೇಕು ಎಂದು ವಿಶ್ವಕರ್ಮ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ದೇವಿಂದ್ರ ದೇಸಾಯಿ ಕಲ್ಲೂರ ಒತ್ತಾಯಿಸಿದ್ದಾರೆ.
ಹೇಳಿಕೆಯೊಂದನ್ನು ಹೊರಡಿಸಿರುವ ಅವರು ಪರಿಶಿಷ್ಟ ಜಾತಿಯಲ್ಲಿ ಅನ್ಯಾಯಕ್ಕೆ ಒಳಗಾದ ಸಮುದಾಯಗಳಿಗೆ ಸಾಮಾಜಿಕ ನ್ಯಾಯವನ್ನು ದೊರಕಿಸಬೇಕು ಎಂದು ಮೂರು ದಶಕಗಳಿಂದ ಹೋರಾಟ ಮಾಡಿಲಾಗಿತ್ತು. ಅದರಂತೆ ಸುಪ್ರೀಂಕೋರ್ಟ್ನಲ್ಲಿ ನಡೆದ ತೀರ್ಮಾನದಂತೆ ಒಳಮೀಸಲಾತಿಯನ್ನು ಕಲ್ಪಸಬೇಕು ಎಂದು ಆದೇಶ ನೀಡಲಾಗಿದೆ.
ಆದರೆ ರಾಜ್ಯ ಸರ್ಕಾರವು ಹಿಂದುಳಿದ ಸಮುದಾಯಗಳಲ್ಲಿ ಅತ್ಯಂತ ಹಿಂದುಳಿದ ಸಮುದಾಯಗಳನ್ನು ಗುರುತಿಸುವಿಕೆ ಕೆಲಸ ಮಾಡಬೇಕು. ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಇರುವ ಕೆಲವೇ ಕೆಲವು ಸಮುದಾಯಗಳಲ್ಲಿ ಹಿಂದುಳಿದ ವರ್ಗಗಳಲ್ಲಿ ಮೀಸಲಾತಿಯನ್ನು ಪಡೆದು ರಾಜಕೀಯ ಮಾಡುತ್ತಾ ಇರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ.
ಹಿಂದುಳಿದ ವರ್ಗಗಳಲ್ಲಿ ವಿಶ್ವಕರ್ಮ ಪಂಚ ಸಮುದಾಯಗಳು ಅತ್ಯಂತ ಹಿಂದುಳಿದ ಸಮುದಾಯಗಳಾಗಿವೆ.
ಹಳಿಗಳಲ್ಲಿ ಅನೇಕರು ಇಂದಿಗೂ ಸರ್ಕಾರದ ಸವಲತ್ತುಗಳೇ ಗೊತ್ತಲ್ಲದಂತ ಸಮುದಾಯಗಳಿವೆ. ಅಂತಹ ಸಮುದಾಯಗಳನ್ನು ಗುರುತಿಸಿ ಅವುಗಳಿಗೆ ಸೂಕ್ತವಾಗಿ ಆರ್ಥಿಕವಾಗಿ ಮುಂದೆ ಬರಲು ಹಿಂದುಳಿದು ವರ್ಗಗಳಲ್ಲಿ ಒಳಮೀಸಲಾತಿ ಜಾರಿಗೆ ತರಲು ಚಿಂತೆನೆ ಮಾಡಬೇಕಾಗಿದೆ.
ಮುಂದಿನ ದಿನಗಳಲ್ಲಿ ಹಿಂದುಳಿದ ವರ್ಗಗಳಲ್ಲಿನ ಆರ್ಥಿಕವಾಗಿ ಹಿಂದುಳಿದ ಸಮುದಾಯಗಳಿಂದ ಹೋರಾಟ ಮಾಡುವಂತಹ ಅನಿವಾರ್ಯ ಆಗಬಾರದು ಎನ್ನುವುದಾದರೆ ಕೂಡಲೆ ಹಿಂದುಳಿದ ವರ್ಗಗಳಿಲ್ಲಿಯೂ ಒಳಮೀಸಲಾತಿಗಾಗಿ ಕ್ರಮಕೈಗೊಳ್ಳಬೇಕು ಎಂದು ದೇವಿಂದ್ರ ದೇಸಾಯಿ ಒತ್ತಾಯಿಸಿದ್ದಾರೆ.
