ಕಲೆ ಸಾಹಿತ್ಯ ಸಂಗೀತದಿಂದ ಸಮಾಜಕ್ಕೆ ವಿಶೇಷ ಸಂದೇಶ ಕೊಡಲು ಸಾಧ್ಯ :ಮಲ್ಲಪ್ಪ ಹೊಸಮನಿ
ಕಲೆ ಸಾಹಿತ್ಯ ಸಂಗೀತದಿಂದ ಸಮಾಜಕ್ಕೆ ವಿಶೇಷ ಸಂದೇಶ ಕೊಡಲು ಸಾಧ್ಯ :ಮಲ್ಲಪ್ಪ ಹೊಸಮನಿ
ಕಲಬುರಗಿ -ಕಲೆ ಸಾಹಿತ್ಯ, ಸಂಗೀತ, ಗಾಯನ, ನಾಟ್ಯ ಮುಂತಾದವುಗಳನ್ನು ಒಳಗೊಂಡ ವ್ಯವಸ್ಥಿತ ಸಂಭ್ರಮಾಚರಣೆಯಿಂದ ಸಮಾಜಕ್ಕೆ ವಿಶೇಷ ಸಂದೇಶ ಕೊಡಲು ಸಹಕಾರಿಯಾಗುತ್ತದೆ. ಹೊಸ ಹೊಸ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿ ಕೊಡುವುದರೊಂದಿಗೆ ನಮ್ಮ ನಾಡಿನ ಸಂಗೀತವು ದಿನ ನಿತ್ಯ ಬದುಕಿಗೆ ಬೇಕಾಗಿರುವಂತದ್ದು, ಅದನ್ನು ಇಂದಿನ ಪೀಳಿಗೆಯಲ್ಲಿ ಬೆಳೆಸುವುದು ನಮ್ಮ ಕರ್ತ್ಯವ್ಯವಾಗಿದೆ ಎಂದು ಭಾರತೀಯ ದಲಿತ ಪ್ಯಾಂಥರ್ ಸಂಘಟನೆಯ ರಾಜ್ಯ ಅಧ್ಯಕ್ಷರಾದ ಮಲ್ಲಪ್ಪಾ ಎಂ. ಹೊಸಮನಿ ಅವರು ಹೇಳಿದರು
ಅವರು ಶಾರದಂಬೆ ಸಾಂಸ್ಕೃತಿಕ ಕಲಾ ಸಂಘ (ರಿ )ಶರಣ ಶಿರಸಗಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ನಗರದ ಲಕ್ಷ್ಮೀ ದೇವಸ್ಥಾನ ಆವರಣ ಲಕ್ಷ್ಮಿ ನಗರದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಚೆನ್ನವೀರ, ಪಿ.ಎಸ್.ಐ. ಎಮ್. ಬಿ. ನಗರ, ಕಲಬುರಗಿ, ಸೈಬಣ್ಣಾ ಬಿ ಮಹಾಂತಗೋಳ, ಸೂರ್ಯಕಾಂತ ಪಿ. ಜಿ, ಮುಖ್ಯ ಗುರುಗಳು ಚೈತನ್ಯ ಕನ್ನಡ ಮಧ್ಯಮ ಪ್ರೌಢ ಶಾಲೆ, ರಾಜಶೇಖರಯ್ಯಾ ಟಿ. ಕೊಲ್ಲೂರ, ಗೌರವ ಅಧ್ಯಕ್ಷರು, ಶ್ರೀ ಲಕ್ಷ್ಮೀ ದೇವಸ್ಥಾನ ಅಬಿವೃಧಿ ಟ್ರಸ್ಟ್, ಮಹಾದೇವ ಆರ್. ಹಂಚೆ,ಅಧ್ಯಕ್ಷರು, ಶ್ರೀ ಲಕ್ಷ್ಮೀ ದೇವಸ್ಥಾನ ಅಬಿವೃಧಿ ಟ್ರಸ್ಟ್, ಶ್ರೀ ನೂರ ಜಿ. ರಾಠೋಡ, ಉಪಾಧ್ಯಕ್ಷರು, ಶ್ರೀ ಲಕ್ಷ್ಮೀ ದೇವಸ್ಥಾನ ಅಬಿವೃಧಿ ಟ್ರಸ್ಟ್, ಶ್ರೀ ನಾಗಪ್ಪ ಪೂಜಾರಿ, ಸದಸ್ಯರು, ಶ್ರೀ ಲಕ್ಷ್ಮೀ ದೇವಸ್ಥಾನ ಅಬಿವೃಧಿ ಟ್ರಸ್ಟ್, ಶ್ರೀ ಮಲ್ಲಿಕಾರ್ಜುನ್ ಕೊಳ್ಳುರೆ, ವಕೀಲರು ಕಲಬುರಗಿ, ಅಮೃತಪ್ಪ ಜಂಬಿಗಿ. ವೇದಿಕೆಮೇಲೆ ಉಪಸ್ಥಿತರಿದ್ದರು
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗುರುಶಾಂತಯ್ಯ ಸ್ಥಾವರಮಠ, ಸ್ವಾತಿ ಬಿ. ಕೆ. ಶ್ರೀಮತಿ ವಿಜಯಲಕ್ಷ್ಮಿ ಕೆಂಗನಾಳ, ಶಿವಕುಮಾರ ಹೀರೆಮಠ, ಬಲಭೀಮ ನೇಲೋಗಿ, ಸೈದಪ್ಪ ಚೌಡಪುರ್, ನಾಗಲಿಂಗಯ್ಯ ಸ್ವಾಮಿ, ಶ್ರೀ ಬಾಬುರಾವ ಕೋಬಾಳ್ ಬಸಯ್ಯ ಬಿ. ಗುತ್ತೇದಾರ,ಪವಿತ್ರ ವಿಶ್ವನಾಥ್, ಕು|| ವಿಂದ್ಯಶ್ರೀ ಕೋಪಳ್ಳ, ಶ್ರೀಮತಿ ರಂಜಿತಾ, ಇವರಿಂದ ಸುಗಮ ಸಂಗೀತ, ವಚನ ಗಾಯನ, ಗಜಲ್, ಜಾನಪದ ಗಾಯನ ಹಾಗೂ ತತ್ವಪದ ಗಾಯನ ಹಾಡಿ ಜನಮನ ಸೆಳೆದರು. ನಾಗಲಿಂಗಯ್ಯ ಸ್ಥಾವರಮಠ ಕಾರ್ಯಕ್ರಮ ನಿರೂಪಿಸಿದರು. ಮಹೇಶ್ ರಾಜೋಳ್ಕರ್ ಸಂಸ್ಥೆಯ ಅದ್ಯಕ್ಷರು ಎಲ್ಲಾ ಗಣ್ಯರಿಗೆ ಹಾಗೂ ಕಲಾವಿದರಿಗೆ ವಂದಿಸಿದರು.