ಕಾಯಕ ಯೋಗಿ `ಶರಣ ಸಂಗಮೇಶ’ ಗ್ರಂಥ ಲೋಕಾರ್ಪಣೆ

ಕಾಯಕ ಯೋಗಿ `ಶರಣ ಸಂಗಮೇಶ’ ಗ್ರಂಥ ಲೋಕಾರ್ಪಣೆ

ಕಾಯಕ ಯೋಗಿ `ಶರಣ ಸಂಗಮೇಶ’ ಗ್ರಂಥ ಲೋಕಾರ್ಪಣೆ

ಆಚಾರ-ವಿಚಾರ ಒಂದಾಗಿಸಿಕೊಂಡು 

ಬಾಳಿದ ಸದಾಚಾರಿ `ಶರಣ ಸಂಗಮೇಶ’

ಜಹೀರಾಬಾದ (ತೆಲಂಗಾಣ) : ಆಚಾರ ಮತ್ತು ವಿಚಾರ ಎರಡನ್ನೂ ಒಂದಾಗಿಸಿಕೊಂಡು ಬಾಳುವುದು ಅರ್ಥಪೂರ್ಣ. ಅಂತಹ ಅರ್ಥಪೂರ್ಣವಾಗಿ ಬಾಳಿದ ಸದಾಚಾರಿ `ಶರಣ ಸಂಗಮೇಶ’ ಎಂದು ನೆನಪಿಸಿಕೊಂಡವರು ಬಸವನ ಭಾಗೇವಾಡಿಯ ಇಂಗಳೇಶ್ವರ ಮತ್ತು ಮಹಾಗಾಂವನ ವಿರಕ್ತ ಮಠದ ಒಡೆಯರಾದ ಪೂಜ್ಯಶ್ರೀ ಚನ್ನಬಸವ ಮಹಾಸ್ವಾಮಿಗಳು.

 ಅವರು ಭಾನುವಾರ ಝರಾ ಸಂಗಮ ಕ್ಷೇತ್ರನಾಥ ಒಡೆಯರಾದ ಶ್ರೀ ಕೇತಕಿ ಸಂಗನಾಥನ ಸಾನಿಧ್ಯದಲ್ಲಿ ಗುಂಡೂರಾವ ಕಡಣಿಯವರು ವಿರಚಿತ `ಶರಣ ಸಂಗಮೇಶ’ ಗ್ರಂಥ ಲೋಕಾರ್ಪಣೆ ಮಾಡಿ ಆಶೀರ್ವಚನ ನೀಡುತ್ತಾ, ಸುಮಾರು ಐವತ್ತು ವರ್ಷಗಳ ಹಿಂದೆ ಬಾಳಿ ಬೆಳಗಿದ ಮಹಾಗಾಂವನ ಸತ್ಸಂಗ ಜೀವಿಗಳಲ್ಲಿ ಸಂಗಪ್ಪ ಹತ್ತಿಯವರು ತೀರ ಚಿಕ್ಕ ವಯಸ್ಸಿನವರು. ಕಾಯಕ, ಪೂಜೆ ಮತ್ತು ದಾಸೋಹ ತ್ರಿವಿಧ ಧರ್ಮ ಸೇವೆ ಮಾಡಿ ಬದುಕು ಸಾರ್ಥಕ ಮಾಡಿಕೊಂಡ ಸಾತ್ವಿಕ ವ್ಯಕ್ತಿ ಎಂದು ಗುಣಗಾನ ಮಾಡಿದರು. 

 ಸಂಗಪ್ಪ ಹತ್ತಿಯವರು ತಮ್ಮಂದಿಲ್ಲೇ ಶಿವದೀಕ್ಷೆ ಪಡೆದು ಶಿವ ಸಂಸ್ಕೃತಿಯಲ್ಲಿ ಸಾಗಿ ಮಾಡಿದ ಪುಣ್ಯ ಸೇವೆ ಫಲ ಅವರ ಮಕ್ಕಳಿಗೆ ಮತ್ತು ಮೊಮ್ಮಕ್ಕಳಿಗೆ ಪ್ರಾಪ್ತಿಯಾಗಿದೆ ಎಂದು ನುಡಿದರು. 

 ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಮಲಾಪೂರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈಜನಾಥ ತಡಕಲ್ ಮಾತನಾಡಿ, ಮಹಾಗಾಂವಿನ ಹತ್ತಿ ಕುಟುಬವು ಸಂಸ್ಕಾರಯುತ ನಡೆ-ನುಡಿಯಲ್ಲಿ ಒಂದಾಗಿ ವೀರಶೈವ ಲಿಂಗಾಯಿತ ಧರ್ಮವನ್ನು ಸದಾಕಾಲವು ಎತ್ತಿ ಹಿಡಿಯುವ ಸಂಪ್ರದಾಯ ಅವರಾಗಿದ್ದು, ಸಂಗಪ್ಪ ಹತ್ತಿಯವರು ಆ ನಿಟ್ಟಿನಲ್ಲಿ ಕಾರ್ಯ ಮಾಡುತ್ತಾ ಪ್ರತಿ ಶ್ರಾವಣ ಮಾಸದ ಗುರು-ಲಿಂಗ-ಜಂಗಮರನ್ನು ಕರೆಯಿಸಿಕೊಂಡು ಪಾದಪೂಜೆ, ಪ್ರಸಾದ ವ್ಯವಸ್ಥೆ ಮಾಡುತ್ತಾ ಅಲ್ಲಿಯೇ ಮನಃಶಾಂತಿ ಪಡೆದುಕೊಳ್ಳುತ್ತಿದ್ದರು ಎಂಬ ಮಾತನ್ನು ನಮ್ಮ ತಂದೆಯವ ಬಾಯಿಂದ ಕೇಳಿದ್ದೇವೆ ಎಂದು ಸ್ಮರಿಸಿಕೊಂಡರು.

 ಅತಿಥಿಯಾಗಿ ಆಗಮಿಸಿದ ಜಿ.ಪಂ. ಮಾಜಿ ಅಧ್ಯಕ್ಷರಾದ ಶಿವಪ್ರಭು ಪಾಟೀಲ ಅವರು ಮಾತನಾಡಿ, ಹಿರಿಯರ ಸಂಪ್ರದಾಯವು ಇಂದಿನ ಯುವ ಪೀಳಿಗೆಗೆ ಗೊತ್ತಾಗಬೇಕಾದರೆ, ಇಂತಹ ಗ್ರಂಥಗಳನ್ನು ರಚಿಸುವುದು ಮುಖ್ಯವಾಗಿದೆ. ಯಾಕೆಂದರೆ, ಅಂದಿನ ಕಾಲದ ಅವರ ನಡೆ-ನುಡಿ, ಆಚಾರ-ವಿಚಾರಗಳು, ಸಂಸ್ಕಾರಗಳು ಅವರ ಒಡೆನಾಡಿಗಳಿಂದ ತಿಳಿಯಬೇಕೆಂದರೂ, ಅರ‍್ಯಾರೂ ಈಗಿಲ್ಲ. ಅವರ ಕುರಿತು ಸಿದ್ದಣ್ಣ ಹತ್ತಿಯವರು ಶ್ರಮ ವಹಿಸಿ ಈ ಗ್ರಂಥವನ್ನು ಲೋಕಾರ್ಪಣೆ ಮಾಡಿದ್ದು ಸರ್ವ ಕಾಲಕ್ಕೂ ಅವರ ಬಗ್ಗೆ ತಿಳಿಯಬಹುದಾಗಿದೆ ಎಂದು ಹೇಳಿದರು.  

 ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪುರಾಣ ಪ್ರವಚನಕಾರ ಪಂ. ಸಿದ್ದೇಶ್ವರ ಶಾಸ್ತ್ರಿಗಳು, ಲಿಂ ಶ್ರೀ ಸಂಗಪ್ ಹತ್ತಿ ದಂಪತಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಷಟ್‌ಸ್ಥಲ ಧ್ವಜಾರೋಹಣ ನೆರವೇರಿಸಿ ಮಾತನಾಡಿದರೆ, ಮಹಾಗಾಂವನ ಕಳ್ಳಿ ಮಠದ ಭಾವಿ ಪೀಠಾಧಿಪತಿ ಪೂಜ್ಯಶ್ರೀ ವಿರೂಪಾಕ್ಷ ದೇವರು ಆಶೀರ್ವಚನ ನೀಡಿದರು. ಇದೇ ಸಂದರ್ಭದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ವಿಭಾಗದಲ್ಲಿ ರಾಜ್ಯ ಮಟ್ಟದ ಪುರಸ್ಕೃತರಾಗಿರುವ ಮಹಾಗಾಂವ ಮೊಮ್ಮಗ ಗಣೇಶ ಬಸವರಾಜ ಟೆಂಗಳಿಯವರಿಗೆ ಸನ್ಮಾನಿಸಲಾಯಿತು. 

 ಗಣ್ಯರಾದ ಪಿಎಲ್‌ಡಿ ಅಧ್ಯಕ್ಷ ಸಿಥಿಕಂಠ ತಡಕಲ್, ಕೃಷಿ ಪಂಡಿತ ಪುರಸ್ಕçತ ಮಲ್ಲಿಕಾರ್ಜುನ ಕೊಳ್ಳೂರ ಮೇಳಕುಂದಿ, ವಕೀಲರಾದ ಮಲ್ಲಿಕಾರ್ಜುನ, ಖ್ಯಾತ ವಕೀಲರಾದ ಅಮೃತಪ್ಪ ಮಲ್ಕಪಗೌಡ, ದೊಡ್ಡಪ ಕಾಮಾ, ವಿಶ್ವನಾಥ, ಪ್ರಾಚಾರ್ಯ ಶರಣಪ್ಪ ಮಾಳಗೆ, ಸಾಹಿತಿ ನಾಗಣ್ಣ ವಿಶ್ವಕರ್ಮ ಕುರಿಕೋಟ, ಹತ್ತಿ ಪ್ರಕಾಶನ ಸಂಸ್ಥೆಯ ಸುಮಂಗಲಾ ಹತ್ತಿ, ಸವಿತಾ ಸಜ್ಜನ್, ಎನ್.ಎಂ. ಹರಸೂರ ಮುಂತಾದವರು ಉಪಸ್ಥಿತರಿದ್ದರು.  

 ಡಾ. ರೇಣುಕಾದೇವಿ ಬಗಾಲೆ (ಹತ್ತಿ) ಯವರು ಗ್ರಂಥ ಕುರಿತು ಸುದೀರ್ಘವಾಗಿ ಮಾತನಾಡಿದರು. ನಿವೃತ್ತ ಬ್ಯಾಂಕ್ ಅಧಿಕಾರಿ ಸಿದ್ದಲಿಂಗಪ್ಪ ಹತ್ತಿಯವರು ಷಟ್‌ಸ್ಥಲ ಧ್ವಜ ಗೀತೆ ಹಾಡಿ, ಸರ್ವರನ್ನು ಸ್ವಾಗತಿಸಿ, ಪ್ರಾಸ್ಥಾವಿಕ ನುಡಿದರು. ಅಧ್ಯಕ್ಷತೆ ಶಿವರುದ್ರಪ್ಪ ಹತ್ತಿ ವಹಿಸಿಕೊಂಡಿದ್ದರು. ಇದೇ ಸಂದರ್ಭದಲ್ಲಿ ಸುಕಿ ಮೆಲೋಡಿಯಸ್ ಮೇರ‍್ಸ್ ತಂಡದಿಂದ ಭಕ್ತಿಗೀತೆಗಳ ಗಾಯನ ನಡೆಯಿತು. 

 ಕಾರ್ಯಕ್ರಮದ ಆರಂಭದಲ್ಲಿ ಪ್ರಾರ್ಥನಾ ಗೀತೆ ಹೇಳಿದ ಕಿರಣ್ ಪಾಟೀಲರು ವಿಜಯಪುರದ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರಶ್ರೀಗಳ ಕುರಿತು ರಚನೆಗೊಂಡ `ಸಂತನೆಂದರೆ ಯಾರು ?’ ಗಾಯನ ನೆರೆದ ಸಭಿಕರನ್ನು ಮಂತ್ರ ಮುಗ್ದರನ್ನಾಗಿಸಿದರು. ಅಪಾರ ಸಂಖ್ಯೆಯಲ್ಲಿ ಹತ್ತಿ ಪರಿವಾರದವರು, ಸಂಗಪ್ಪ ಹತ್ತಿ ಅಭಿಮಾನಿಗಳು ಭಾಗವಹಿಸಿದ್ದರು.