ಪ್ರಾಮಾಣಿಕತೆಗೆ ಹೆಸರಾದ ಬಂಜಾರರ ಜೀವನಶೈಲಿ ಅನುಕರಣೀಯ

ಪ್ರಾಮಾಣಿಕತೆಗೆ ಹೆಸರಾದ ಬಂಜಾರರ ಜೀವನಶೈಲಿ ಅನುಕರಣೀಯ

ಪ್ರಾಮಾಣಿಕತೆಗೆ ಹೆಸರಾದ ಬಂಜಾರರ ಜೀವನಶೈಲಿ ಅನುಕರಣೀಯ 

ವಿಶಿಷ್ಟ ಭಾಷೆ ಸಂಸ್ಕೃತಿಯಿಂದಾಗಿ ಬಂಜಾರರು ಶ್ರೀಮಂತರು

ನರೇಗಲ್: ಬಂಜಾರ ಜನಾಂಗವು ವಿಶಿಷ್ಟ ಭಾಷೆ ಹಾಗೂ ಸಂಸ್ಕೃತಿಯಿಂದ ಗುರುತಿಸಿಕೊಂಡಿದೆ. ಸದಾ ಒಳಿತು ಬಯಸುವ ಬಂಜಾರ ಸಮುದಾಯದ ಚಿಂತನೆ ಅನುಕರಣೀಯ ಎಂದು ರೋಣ ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಮಿಥುನ್‌ ಜಿ. ಪಾಟೀಲ ಹೇಳಿದರು. 

  ನರೇಗಲ್‌ ಪಟ್ಟಣದ ಬಂಜಾರ (ಲಂಬಾಣಿ) ಸಮಾಜದ ವತಿಯಿಂದ 3ನೇ ವಾರ್ಡ್‌ ಜಕ್ಕಲಿ ರೋಡ್‌ ಆಶ್ರಯ ಕಾಲೋನಿಯಲ್ಲಿ ಶನಿವಾರ ನಡೆದ ಸಂತ ಶ್ರೀ ಸೇವಾಲಾಲ್‌ ಮಾಹಾರಾಜರ 287ನೇ ಜಯಂತಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

 ಲಂಬಾಣಿ ಸಮಾಜದವರು ಶ್ರಮಜೀವಿ, ಪ್ರಾಮಾಣಿಕತೆಗೆ ಹೆಸರು ವಾಸಿಯಾದವರು. ಸಮುದಾಯದ ಸಂತ ಸೇವಾಲಾಲ್ ಅವರು ಸಮಾಜ ಸುಧಾರಕರಾಗಿ ಜನಾಂಗದ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದ್ದಾರೆ ಪ್ರತಿಯೊಬ್ಬರು ಅವರ ಮಾರ್ಗದಲ್ಲಿ ಸಾಗಬೇಕಿದೆ ಎಂದರು. ನರೇಗಲ್‌ ಪಟ್ಟಣದ ಬಂಜಾರ ಜನಾಂಗದ ಅಭಿವೃದ್ದಿಗಾಗಿ ಶಾಸಕರ ಗಮನಕ್ಕೆ ತಂದು ಆಶ್ರಯ ಮನೆ ಹಾಗೂ ಅಗತ್ಯತೆಗಳ ಪೂರೈಕೆಗೆ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.

   ರಾಜ್ಯ ಯುವಕಾಂಗ್ರೆಸ್‌ ಘಟಕದ ಪ್ರಧಾನ ಕಾರ್ಯದರ್ಶಿ ಅಕ್ಷಯ ಐ. ಪಾಟೀಲ ಮಾತನಾಡಿ, ಈ ಸಮುದಾಯದ ಸಂಸ್ಕೃತಿ ಶ್ರೀಮಂತವಾಗಿದೆ. ಸಂಸ್ಕೃತಿಯ ವಿಚಾರದಲ್ಲಿ ಯಾವ ಸಮುದಾಯವು ಈ ಜನಾಂಗದ ಸಂಸ್ಕೃತಿಯನ್ನು ತಲುಪಲು ಸಾಧ್ಯವಿಲ್ಲ. ಇಂದಿಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಸಾಗುತ್ತಿದೆ. ಈ ಸಮುದಾಯದ ಪ್ರಗತಿ ಇನ್ನೂ ಆಗಬೇಕಾಗಿದೆ ಅದಕ್ಕಾಗಿ ಈ ಸಮುದಾಯದ ಜನ ವಿದ್ಯಾವಂತರಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಕಿವಿಮಾತು ಹೇಳಿದರು.

  ಸಾನಿಧ್ಯ ಆಶೀರ್ವಚನ ನೀಡಿದ ನರೇಗಲ್‌ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯರು, ಸೇವಾಲಾಲ್ ಮಹಾರಾಜರು ಈ ಸಮುದಾಯವನ್ನು ಸತ್ಯದ ಹಾದಿಯಲ್ಲಿ ಮುನ್ನಡೆಸಿದರು. ಅವರು ಸಮಾಜದ ಏಳಿಗೆಗೆ ನಿಸ್ವಾರ್ಥ ಸೇವೆ ಸಲ್ಲಿಸಿದ ಮಹಾನ್ ಸಂತರು. ಸ್ವಂತಕ್ಕೆ ಆಸ್ತಿ ಮಾಡದೆ ಬಡವರ ಉದ್ಧಾರಕ್ಕಾಗಿ, ಸಮಾಜದ ಹಿತಕ್ಕಾಗಿ ಶ್ರಮಿಸಿ ನಿಸ್ವಾರ್ಥ ಸೇವೆ ಸಲ್ಲಿಸಿದ ದಾರ್ಶನಿಕರು. ಸಮಾಜದ ಉದ್ಧಾರಕ್ಕಾಗಿ ಜನ್ಮ ತಳೆದ ದೈವಿಪುರುಷರಾದ ಅವರ ಸತ್ಯ, ಅಹಿಂಸೆಯ ಮಾರ್ಗದಲ್ಲಿ ಸಾಗಿದರು ಎಂದು ಬಣ್ಣಿಸಿದರು.

  ಕೊಪ್ಪಳ ಬಹದ್ದೂರಬಂಡಾ ಬಂಜಾರ ಪೀಠದ ಗುರು ಗೋಸಾಯಿಬಾವ ಸ್ವಾಮೀಜಿ ಮಾತನಾಡಿದ, ಬಂಜಾರ ಸಮುದಾಯದ ಪವಾಡ ಪುರುಷರಾದ ಸೇವಾಲಾಲ್ ಸಮಾಜದಲ್ಲಿನ ಮೌಢ್ಯತೆ ತೊಡೆದು ಹಾಕಿದ ಸಂತರು. ಪ್ರಕೃತಿಯಲ್ಲಿನ ಪ್ರಾಣಿ ಪಕ್ಷಿಗಳೊಂದಿಗೆ ಸಂಭಾಷಣೆ ನಡೆಸುತ್ತಿದ್ದ ಅವರು ಸಕಲ ಜೀವಜಂತುಗಳಿಗೆ ಒಳ್ಳೆಯದಾಗಲಿ ಎಂಬ ಸಂದೇಶ ಸಾರಿದರು. ಪ್ರತಿ ಜೀವಿಯೂ ಸುರಕ್ಷಿತವಾಗಿರಲಿ ಎಂಬುದು ಸೇವಾಲಾಲ್‌ರ ಆಶಯವಾಗಿತ್ತು ಎಂದು ವಿವರಿಸಿದರು.

   ಕೊಡಗಲಿಯ ಸಂತೋಷ ಮಹಾರಾಜ್‌ ಮತ್ತು ನಿವೃತ್ತ ಶಿಕ್ಷಕ ತಾರಾಸಿಂಗ್‌ ರಾಠೋಡ ವಿಶ್ವ ಶಾಂತಿಗಾಗಿ ಭೋಗ್‌ ಸಮರ್ಪಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಉಪನ್ಯಾಸ ನೀಡಿದರು. ವಿವಿಧ ಕ್ಷೇತ್ರದ ಸಾಧಕರನ್ನು, ದಾನಿಗಳನ್ನು ಸನ್ಮಾನಿಸಲಾಯಿತು. ಮುಖಂಡರಾದ ನಿಂಗನಗೌಡ ಲಕ್ಕನಗೌಡ್ರ, ವೀರನಗೌಡ ಪಾಟೀಲ, ಅಲ್ಲಾಬಕ್ಷಿ ಪಿ. ನದಾಫ್‌, ಮೈಲಾರಪ್ಪ ವೀ. ಚಳ್ಳಮರದ, ಹನಮಂತಪ್ಪ ಎಚ್. ಅಬ್ಬಿಗೇರಿ, ಕಳಕನಗೌಡ ಪೊಲೀಸ್‌ಪಾಟೀಲ, ಎಂ. ಎಸ್. ಧಡೇಸೂರಮಠ, ಬಿ.ಇ.ಡಬ್ಲೂ. ಇಂಡಸ್ಟ್ರೀಜ್‌ನ ಉದ್ಯಮಿ ಬಸವರಾಜ ವಂಕಲಕುಂಟಿ, ಕುಮಾರಸ್ವಾಮಿ ಕೋರಧಾನ್ಯಮಠ, ದಾದಾಸಾಬ್‌ ನದಾಫ್‌, ಗುಡದಪ್ಪ ಗೋಡಿ, ಸದ್ದಾಂ ನಶೇಖಾನ್‌, ಬಂಜಾರ ಸಮಾಜದ ಹಿರಿಯ ಮಹಿಳೆ ದೇವಕ್ಕ ಎಸ್‌. ರಾಠೋಡ ಇದ್ದರು. 

28ನರೇಗಲ್‌1: ನರೇಗಲ್‌ ಪಟ್ಟಣದ ಬಂಜಾರ (ಲಂಬಾಣಿ) ಸಮಾಜದ ವತಿಯಿಂದ 3ನೇ ವಾರ್ಡ್‌ ಜಕ್ಕಲಿ ರೋಡ್‌ ಆಶ್ರಯ ಕಾಲೋನಿಯಲ್ಲಿ ಶನಿವಾರ ಸಂತ ಶ್ರೀ ಸೇವಾಲಾಲ್‌ ಮಾಹಾರಾಜರ 287ನೇ ಜಯಂತಿಯನ್ನು ಆಚರಣೆ ಮಾಡಲಾಯಿತು 

28ನರೇಗಲ್‌2: ನರೇಗಲ್‌ ಪಟ್ಟಣದ ಬಂಜಾರ (ಲಂಬಾಣಿ) ಸಮಾಜದ ವತಿಯಿಂದ 3ನೇ ವಾರ್ಡ್‌ ಜಕ್ಕಲಿ ರೋಡ್‌ ಆಶ್ರಯ ಕಾಲೋನಿಯಲ್ಲಿ ಶನಿವಾರ ನಡೆದದ ಸಂತ ಶ್ರೀ ಸೇವಾಲಾಲ್‌ ಮಾಹಾರಾಜರ 287ನೇ ಜಯಂತಿಯಲ್ಲಿ ಸಾಧಕರನ್ನು, ದಾನಿಗಳನ್ನು ಸನ್ಮಾನಿಸಲಾಯಿತು 

28ನರೇಗಲ್‌3: ನರೇಗಲ್‌ ಪಟ್ಟಣದ ಬಂಜಾರ (ಲಂಬಾಣಿ) ಸಮಾಜದ ವತಿಯಿಂದ 3ನೇ ವಾರ್ಡ್‌ ಜಕ್ಕಲಿ ರೋಡ್‌ ಆಶ್ರಯ ಕಾಲೋನಿಯಲ್ಲಿ ಶನಿವಾರ ನಡೆದ ಸಂತ ಶ್ರೀ ಸೇವಾಲಾಲ್‌ ಮಾಹಾರಾಜರ 287ನೇ ಜಯಂತಿಗೆ ಗಣ್ಯರು ಚಾಲನೆ ನೀಡಿದರು

ವರದಿ ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ