ಶಹಾಪೂರಿನ ಮಲ್ಲಿಕಾರ್ಜುನ್ ಮಹಲ್ ರೋಜಾ ಮುತ್ಯಾ ಪರ ಹೋರಾಟಕ್ಕೆ ಜೈ ಕನ್ನಡಿಗರ ಸೇನೆ ಬೆಂಬಲ

ಶಹಾಪೂರಿನ ಮಲ್ಲಿಕಾರ್ಜುನ್ ಮಹಲ್ ರೋಜಾ ಮುತ್ಯಾ ಪರ ಹೋರಾಟಕ್ಕೆ ಜೈ ಕನ್ನಡಿಗರ ಸೇನೆ ಬೆಂಬಲ

ಶಹಾಪೂರಿನ ಮಲ್ಲಿಕಾರ್ಜುನ್ ಮಹಲ್ ರೋಜಾ ಮುತ್ಯಾ ಪರ ಹೋರಾಟಕ್ಕೆ ಜೈ ಕನ್ನಡಿಗರ ಸೇನೆ ಬೆಂಬಲ

ಕಲಬುರಗಿ: ಶಹಾಪೂರ ತಾಲೂಕಿನ ಶಹಾಪೂರ ವ್ಯಾಪ್ತಿಯ ಶ್ರೀ ಮಲ್ಲಿಕಾರ್ಜುನ ಮುತ್ಯಾ ಮಹಲ್ ರೋಜ ಗೋಗಿ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಬಾಲಕಿ ಜೊತೆಗಿನ ಅನುಚಿತ ವರ್ತನೆ ಆರೋಪಗಳು ಸುಳ್ಳು ಹಾಗೂ ದುರುದ್ದೇಶಪೂರ್ವಕವಾಗಿ ಸೃಷ್ಟಿಸಲಾದವುಗಳಾಗಿರಬಹುದು ಎಂದು ಜೈ ಕನ್ನಡಿಗರ ಸೇನೆ ಆರೋಪಿಸಿದೆ.

ಈ ಕುರಿತು ಪ್ರಕಟಣೆ ನೀಡಿರುವ ಜೈ ಕನ್ನಡಿಗರ ಸೇನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಡಾ. ದತ್ತು ಹೆಚ್. ಭಾಸಗಿ ಅವರು, ಮುತ್ಯಾರವರು ಸರಳ, ಸಜ್ಜನಿಕೆ ಹಾಗೂ ಸಾಮಾಜಿಕ ಬದ್ಧತೆಯಿಂದ ಗುರುತಿಸಿಕೊಂಡ ವ್ಯಕ್ತಿಯಾಗಿದ್ದು, ಅವರ ಧಾರ್ಮಿಕ ಹಾಗೂ ಸಾಮಾಜಿಕ ಏಳಿಗೆಯನ್ನು ಸಹಿಸದ ಕೆಲವು ವ್ಯಕ್ತಿಗಳು ಷಡ್ಯಂತ್ರ ರೂಪಿಸಿ ತಪ್ಪು ಚಿತ್ರಣ ಮೂಡಿಸಿರುವ ಸಾಧ್ಯತೆ ಇದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಹರಿದಾಡುತ್ತಿರುವ ಆರೋಪಗಳ ಸತ್ಯಾಸತ್ಯತೆ ಕುರಿತು ಸಮಗ್ರ ಹಾಗೂ ನ್ಯಾಯಸಮ್ಮತ ತನಿಖೆ ನಡೆಯಬೇಕು. ತನಿಖೆ ಪೂರ್ಣಗೊಳ್ಳುವವರೆಗೆ ಯಾವುದೇ ನಿರ್ಧಾರಕ್ಕೆ ಬರದೇ ಕಾನೂನು ಪ್ರಕ್ರಿಯೆಗೆ ಗೌರವ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಇದೇ ವೇಳೆ, ದಿನಾಂಕ 02/03/2026 ರಂದು ಕಲಬುರಗಿ ನಗರದ ಜಗತ್ತ ವೃತ್ತದಿಂದ, ಕರ್ನಾಟಕ ರಾಜ್ಯ ಎಸ್‌ಟಿ ಹೋರಾಟ ಸಮಿತಿಯವರು ಹಾಗೂ ಅನೇಕ ಸಂಘಟನೆಗಳು ಹಮ್ಮಿಕೊಂಡಿರುವ ಪ್ರತಿಭಟನೆಗೆ ಜೈ ಕನ್ನಡಿಗರ ಸೇನೆ, ಕಲಬುರಗಿ ಜಿಲ್ಲಾ ಸಮಿತಿ ಸಂಪೂರ್ಣ ಬೆಂಬಲ