ಜಾನಪದ ಉಳುವಿಗಾಗಿ ಶ್ರಮಿಸಬೇಕು ಗಿರೀಶ್ ಕಡಲೇವಾಡ
ಜಾನಪದ ಉಳುವಿಗಾಗಿ ಶ್ರಮಿಸಲು : ಗಿರೀಶ್ ಕಡಲೇವಾಡ ಕರೆ
ಕಲಬುರಗಿ : ಇಂದಿನ ತಂತ್ರಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳು ಜಾನಪದ ಮತ್ತು ಅದರ ಮಹತ್ವ ಅರ್ಥ ಮಾಡಿಕೊಳ್ಳುವುದು ಹಿಂದಿಗಿಂತಲೂ ಈಗ ತುಂಬಾ ಅಗತ್ಯವಿದೆ.
ಮಕ್ಕಳಿಗೆ ಸಾಹಿತ್ಯಿಕ, ಸಾಂಸ್ಕೃತಿಕ ಮತ್ತು ವೈಜ್ಞಾನಿಕ ಅರಿವು ಮೂಡಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ವಿಜ್ಞಾನ ಪರಿಷತ್ ನಿಕಟಪೂರ್ವ ಅಧ್ಯಕ್ಷ ಗಿರೀಶ್ ಕಡ್ಲೇವಾಡ ತಿಳಿಸಿದರು.
ಕಲಬುರಗಿ ನಗರದ ಹೊರವಲಯದಲ್ಲಿರುವ ಶಕುಂತಲಾ ಪಾಟೀಲ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಪ್ರೊ. ಹಿ.ಚಿ. ಬೋರಲಿಂಗಯ್ಯ ಅವರ ಕುರಿತ ಉಪನ್ಯಾಸ, ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಆಚರಣೆಯನ್ನು ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,
ಜನಪದ ಜನರ ಬಾಯಿಂದ ಬಾಯಿಗೆ ಹರಿದು ಬಂದದ್ದು, ಅದರ ನಾಶ ಆಗೋದು ಅಷ್ಟೊಂದು ಸುಲಭವಲ್ಲ. ಆದ್ದರಿಂದ ಎಲ್ಲರೂ ಜವಾಬ್ದಾರಿ ವಹಿಸಿ ಜನಪದದ ಉಳಿವಿಗೆ ಶ್ರಮಿಸಬೇಕಿದೆ. ಆಧುನಿಕ ಕಾಲಮಾನಕ್ಕೆ ತಕ್ಕಂತೆ ಬದಲಾಗುತ್ತಿರುವ ಜಾನಪದ ಸಾಹಿತ್ಯ ಸಂಸ್ಕೃತಿಯು ಎಲ್ಲ ನೆಲೆಗಳಲ್ಲಿ ವ್ಯಾಪಿಸುವ ಅವಶ್ಯಕತೆಯಿದೆ ಎಂದು ಕಡ್ಲೇವಾಡ ಅಭಿಪ್ರಾಯಪಟ್ಟರು.
ಜಾನಪದದಲ್ಲಿ ಬರುವ ಬುಡಕಟ್ಟು ಜನಾಂಗದವರ ಕುರಿತು ಸಾಕಷ್ಟು ಅಧ್ಯಯನ , ಸಂಶೋಧನಾತ್ಮಕ ಕೆಲಸ ಮಾಡಿರುವ ಪ್ರೊ.ಹಿ.ಚಿ.ಬೋರಲಿಂಗಯ್ಯ ಅವರು ಮೂಲತ ತುಮಕೂರ ಜಿಲ್ಲೆಯ ಕುಣಿಗಲ್ ತಾಲೂಕಿನ ಹಿತ್ತಲಪೂರ ಗ್ರಾಮದ ಕಾಳಮ್ಮ ಚಿಕ್ಕಣ್ಣ ದಂಪತಿಗಳ ಉದರದಲ್ಲಿ 1955 ರಲ್ಲಿ ಜನಿಸಿದರು. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಹುಟ್ಟೂರಿನಲ್ಲಿ ಮುಗಿಸಿ ಪದವಿ ಹಾಗೂ ಸ್ನಾತ್ತ ಕೋತ್ತರ, ಪಿ.ಎಚ್ .ಡಿ ಪದವಿ ಯನ್ನು ಸಮಾಜ ವಿಜ್ಞಾನ ವಿಷಯದಲ್ಲಿ ಮುಗಿಸುವುದರ ಜೊತೆಗೆ ಜಾನಪದವನ್ನು ತಮ್ಮಉಸಿರನ್ನಾಗಿಸಿಕೊಂಡು ಸಾಹಿತ್ಯದಲ್ಲಿ 22 ಕೃತಿಗಳು 82 ಆಂಗ್ಲ ಭಾಷೆಯಲ್ಲಿ ಸಂಶೋಧನಾತ್ಮಕ ಲೇಖನಗಳನ್ನು ಬರೆದು ಕೀರ್ತಿ ಪಡೆದಿದ್ದಾರೆ.
ಶಿವರಾಮ ಕಾರಂತರ ಪ್ರಶಸ್ತಿಯೊಂದಗೆ ಅನೇಕ ಜಾನಪದ ಪ್ರಶಸ್ತಿಗಳು ಇವರ ಮುಡಿಗೇರಿವೆ.ಪ್ರಸ್ತುತ ಕರ್ನಾಟಕ ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಯುನೆಸ್ಕೋ ಸಂಸ್ಥೆಯು ಕರ್ನಾಟಕ ಜಾನಪದ ಪರಿಷತ್ತಿಗೆ ಮಾನ್ಯತೆ ನಿಡಿದೆ ಎಂದು ಕರ್ನಾಟಕ ಜಾನಪದ ಪರಿಷತ್ತು ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಎಸ್.ಮಾಲಿ ಪಾಟೀಲ ತಮ್ಮ ಉಪನ್ಯಾಸದಲ್ಲಿ ತಿಳಿಸಿದ್ದಾರೆ.
ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಗೌರವ ಸನ್ಮಾನ ನಡೆಯಿತು.ಆಯುರ್ವೇದ ವೈದ್ಯರಾದ ಡಾ.ಸತೀಶ.ಎಂ.ಪಾಟೀಲ, ರಂಗ ಮಾಧ್ಯಮದ ಸಿದ್ಧಲಿಂಗಯ್ಯ ಮಲಕೂಡ , ಛಾಯಾಗ್ರಾಹಕರ ಕ್ಷೇತ್ರದಲ್ಲಿ ನಾಗೇಂದ್ರ ಸಕ್ಕರಗಿ , ಶಿಕ್ಷಣ ಕ್ಷೇತ್ರದಲ್ಲಿಸುಧಾ ಶೆಟ್ಟಿ ಕಲಬುರಗಿ,
ಆತ್ಮಾರಾಮ ಬುರಬುರೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರು , ಪ್ರಾಚಾರ್ಯರಾದ ಡಾ. ಮನೋಜಕುಮಾರ.ಎ. ಬುರಬುರೆ ಅವರು ಅಧ್ಯಕ್ಷತೆ ವಹಿಸಿದ್ದರು.
ಕಲಬುರಗಿ, ಕಲ್ಯಾಣ ಕಹಳೆ ಪತ್ರಿಕೆ ಸಂಪಾದಕರಾದ ಶರಣಗೌಡ ಪಾಟೀಲ ಪಾಳಾ, ಜ್ಞಾನ ಕಸ್ತೂರಿಶಿಕ್ಷಣ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಜಗನ್ನಾಥ ಹಾಲಮಡಗಿ, ಜ್ಞಾನ ಕಸ್ತೂರಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಕಿರಣಕುಮಾರ ಗಾದಗಿ ಅವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸುಧಾ ಶೆಟ್ಟಿ ನಿರೂಪಿಸಿದರು, ಅಂಬರೀಷ ಹಾಲವಿ ಸ್ವಾಗತಿಸಿದರು ಕು.ಸಾಕ್ಷಿ ಪ್ರಾರ್ಥನೆ ಗೀತೆ ಹಾಡಿದರು. ಹಿರಿಯ ಸಾಹಿತಿ ಹಣಮಂತರಾಯ ಮಂಗಾಣಿ ಜಾನಪದ ಗೀತೆ ಹಾಡಿದರು.