ತಳವಾರ ಜಾತಿ ಪರಿಶಿಷ್ಟ ಪಂಗಡ ದಲ್ಲಿ ಮಾತ್ರ ಇರುತ್ತದೆ : ಸಂತೋಷ ತಳವಾರ

ತಳವಾರ ಜಾತಿ ಪರಿಶಿಷ್ಟ ಪಂಗಡ ದಲ್ಲಿ ಮಾತ್ರ  ಇರುತ್ತದೆ : ಸಂತೋಷ ತಳವಾರ

ತಳವಾರ ಜಾತಿ ಹಿಂದೂಳಿದ ವರ್ಗದಲ್ಲಿಲ್ಲ, ಪರಿಶಿಷ್ಟ ಪಂಗಡದಲ್ಲಷ್ಟೇ ಇದೆ: ಸಂತೋಷ ತಳವಾರ

ಕಲಬುರಗಿ: ಕರ್ನಾಟಕ ರಾಜ್ಯದಲ್ಲಿ ತಳವಾರ ಜಾತಿ ಹಿಂದೂಳಿದ ವರ್ಗದ ಪಟ್ಟಿಯಲ್ಲಿ ಇಲ್ಲ, ಅದು ಪರಿಶಿಷ್ಟ ಪಂಗಡ (ಎಸ್.ಟಿ) ಪಟ್ಟಿಯಲ್ಲಷ್ಟೇ ಸೇರಿದೆ ಎಂದು ಅಖಿಲ ಕರ್ನಾಟಕ ಮಹರ್ಷಿ ವಾಲ್ಮೀಕಿ ತಳವಾರ ಸಮಾಜ ಸಂಘದ ಅಧ್ಯಕ್ಷ ಸಂತೋಷ ತಳವಾರ ಹೇಳಿದ್ದಾರೆ.

ಕೆಲವರು, ತಳವಾರ ಜಾತಿ ಹಿಂದೂಳಿದ ವರ್ಗದಲ್ಲಿಯೂ ಇದೆ ಎಂದು ಹೇಳುತ್ತಿರುವುದು ಸುಳ್ಳು ಮತ್ತು ದಾಖಲೆ ರಹಿತ ಎಂದು ಆರೋಪಿಸಿದರು. ಕೋಲಿ, ಕಬ್ಬಲಿಗ, ಅಂಬಿಗ, ಗಂಗಾಮತ ಸಮಾಜಗಳ ಉಪಜಾತಿಗಳಲ್ಲಿಯೂ ತಳವಾರ ಜಾತಿ ಇಲ್ಲವೆಂದು ಸ್ಪಷ್ಟಪಡಿಸಿದರು.

ನೈಜ ತಳವಾರರಿಗೆ ಪರಿಶಿಷ್ಟ ಪಂಗಡ ಜಾತಿ ಪ್ರಮಾಣಪತ್ರಗಳನ್ನು ತಡೆಹಿಡಿಯಲಾಗುತ್ತಿರುವುದನ್ನು ಖಂಡಿಸಿ, ಜಿಲ್ಲಾಡಳಿತ ತಕ್ಷಣ ಕ್ರಮ ಕೈಗೊಳ್ಳಬೇಕು. 15 ದಿನಗಳಲ್ಲಿ ಪ್ರಮಾಣಪತ್ರ ನೀಡದಿದ್ದರೆ ಸಂಘದಿಂದ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು..