ತಾಲ್ಲೂಕ ಸಾಹಿತ್ಯ ಸಮ್ಮೇಳನದ ಪೂರ್ವ ಭಾವಿ ಸಭೆ :..

ತಾಲ್ಲೂಕ ಸಾಹಿತ್ಯ ಸಮ್ಮೇಳನದ ಪೂರ್ವ ಭಾವಿ ಸಭೆ :..
ಶಹಾಬಾದ : - ತಾಲ್ಲೂಕ ಕನ್ನಡ ಸಾಹಿತ್ಯ ಸಮ್ಮೇಳನದ ಆಯೋಜನೆ ಕುರಿತು ಮಂಗಳವಾರ ದಿನಾಂಕ 10/12/2024 ರಂದು ಬೆಳಗ್ಗೆ 11 ಗಂಟೆಗೆ ತಾಲ್ಲೂಕ ತಹಶೀಲ್ದಾರ್ ಕಛೇರಿಯಲ್ಲಿ ಪೂರ್ವ ಭಾವಿ ಸಭೆಯನ್ನು ಕರೆಯಲಾಗಿದೆ ಎಂದು ತಾಲ್ಲೂಕ ತಹಶೀಲ್ದಾರ್ ಜಗದೀಶ ಚೌರ ರವರು ತಿಳಿಸಿದ್ದಾರೆ.
ಅಂದಿನ ಪೂರ್ವ ಭಾವಿ ಸಭೆಗೆ ತಾಲ್ಲೂಕಿನ ಎಲ್ಲಾ ಇಲಾಖೆಯ ಸರಕಾರಿ ಅಧಿಕಾರಿಗಳು, ಸಂಘ - ಸಂಸ್ಥೆಗಳ ಪದಾಧಿಕಾರಿಗಳು, ಕನ್ನಡ ಪರ ಹೋರಾಟಗಾರರು, ಸಾಹಿತಿಗಳು, ಲೇಖಕರು ಸಭೆಗೆ ಕಡ್ಡಾಯವಾಗಿ ಆಗಮಿಸಿ ತಮ್ಮ ಸಲಹೆ ಸೂಚನೆಗಳನ್ನು ಸೂಚಿಸಬೇಕು ಎಂದು ತಿಳಿಸಿದ್ದಾರೆ.