ಕನ್ನಡ ಜ್ಯೋತಿ ರಥ ಯಾತ್ರೆ ಕಲಬುರ್ಗಿಯಲ್ಲಿ ಸ್ವಾಗತ

ಕನ್ನಡ ಜ್ಯೋತಿ ರಥ ಯಾತ್ರೆ ಕಲಬುರ್ಗಿಯಲ್ಲಿ ಸ್ವಾಗತ

ಕನ್ನಡ ಜ್ಯೋತಿ ರಥ ಯಾತ್ರೆ ಕಲಬುರ್ಗಿಯಲ್ಲಿ ಸ್ವಾಗತ 

ಇಂದು, ಶುಕ್ರವಾರ ಬೆಳ್ಳೆಗ್ಗೆ 9 ಗಂಟೆಗೆ, ಮಂಡ್ಯದಲ್ಲಿ ಜರುಗಲಿರುವ 87ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರಕ್ಕೆ ಹಮ್ಮಿಕೊಂಡ 

ಕನ್ನಡ ಜ್ಯೋತಿ ರಥ ಯಾತ್ರೆ ಕಲಬುರ್ಗಿ ಮಹಾನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ, ಜಿಲ್ಲಾಡಳಿತ ಕಛೇರಿ ಮುಂದೆ ಅದ್ಧುರಿಯಾಗಿ ಸ್ವಾಗತಿಸಿದರು.ಕನ್ನಡ ರಥಕ್ಕೆ ಬರಮಾಡಿಕೊಂಡು ಪೂಜೆ ಸಲ್ಲಿಸಲಾಯಿತು,

  ಸಪ್ತ ನೇಕಾರರ ಸೇವಾ ಸಂಘದ ಅಧ್ಯಕ್ಷರು ಹಾಗೂ ಸದ್ಗುರು ಶ್ರೀ ದಾಸಿಮಯ್ಯ ಕಾನೂನು ಸೇವಾ ಸಂಸ್ಥೆಯ ಸಂಸ್ಥಾಪಕರಾದ ಶಿವಲಿಂಗಪ್ಪಾ ಅಷ್ಟಗಿ ಯವರು ದಸರಾ ಮಹೋತ್ಸವದ ಅಂಗವಾಗಿ ಸಂಪ್ರದಾಯದಂತೆ, ರಥಕ್ಕೆ ಬನ್ನಿ, ಬಂಗಾರದ ಟೊಂಗೆ ಯನ್ನು ಭುವನೇಶ್ವರಿ ತಾಯಿಗೆ ಸಲ್ಲಿಸಿ ಭಾವಚಿತ್ರಕ್ಕೆ ಪೂಜೆಸಲ್ಲಿಸಿದರು

ನಂತರ ಮಾತನಾಡುತ್ತ ಕೇಂದ್ರ ಸರ್ಕಾರ ಕನ್ನಡ ಶಾಸ್ತ್ರೀಯ ಭಾಷೆ ಎಂದು ಪರಿಗಣಿಸಲು 11 ನೇ ಶತಮಾನದ ಕನ್ನಡದ ಆದ್ಯ ವಚನಕಾರ ದೇವರ ದಾಸಿಮಯ್ಯ ನವರ ವಚನ ಸಾಹಿತ್ಯವೇ ಮೂಲವಾಗಿದೆ ಎಂದು ಹೇಳಿದರು.

  ಹಿರಿಯ ನ್ಯಾಯವಾದಿ ,ಕವಿಗಳಳಾದ ದತ್ತರಾಜ ಕುಲಕರ್ಣಿ, ಭುವನೇಶ್ವರಿ, ಅವರೂ ರೈತಪರ ನೂತನ ಕವನ ವಾಚನ ಮಾಡುವ ಮೂಲಕ ವಿಶೇಷವಾಗಿ ಗೌರವಿಸಿದರು,

ಈ ಸಮಯದಲ್ಲಿ ಜಿಲ್ಲಾ ಕ.ಸಾ.ಪ.ದ ಸಂಘಟನಾ ಕಾರ್ಯದರ್ಶಿ ಹಾಗೂ ಶಿಕ್ಷಕ ನರೋಣಿ ಶರಣಬಸಪ್ಪ, ಕಾಳಗಿ ತಾಲೂಕಾ ಕ.ಸಾ.ಪ.ದ ಅಧ್ಯಕ್ಷ ಸಂತೋಷ್ ಕುಡಳ್ಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ದತ್ತಪ್ಪ ಸಾಗನೂರ್, ತೊಗಟವೀರ ಸೇವಾ ಸಂಘದ ಅಧ್ಯಕ್ಷರಾದ ಶ್ರೀನಿವಾಸ ಬಲಪೂರ್, ಜಿಲ್ಲಾ ಹಟಗಾರ ಸಮಾಜದ ಪ್ರಮುಖ ಮುಖಂಡ ರಾದ ಡಾ.ಬಸವರಾಜ ಚನ್ನಾ, ಜಿಲ್ಲಾ ಕ.ಸಾ.ಪ.ದ ಕಾರ್ಯಕಾರಿಣಿ ಸದಸ್ಯರು ಹಾಗೂ ನೇಕಾರ ಮಹಾಸಭಾದ ಸಂಚಾಲಕ ನ್ಯಾಯವಾದಿ ಜೇ. ಎಸ್.ವಿನೋದಕುಮಾರ ಉಪಸ್ಥಿತರಿದ್ದರು.