ಬಿಜೆಪಿ ಕಛೇರಿಯಲ್ಲಿ ಭಗತ್ ಸಿಂಗ್ ಸ್ಮರಣೆ*

*ಬಿಜೆಪಿ ಕಛೇರಿಯಲ್ಲಿ ಭಗತ್ ಸಿಂಗ್ ಸ್ಮರಣೆ*
ವಾಡಿ: ಬಿಜೆಪಿ ಕಛೇರಿಯಲ್ಲಿ ಭಗತ್ ಸಿಂಗ್ ಅವರ 118ನೇ ಜಯಂತಿ ಪ್ರಯುಕ್ತ ಭಗತ್ ಸಿಂಗ್ ಭಾವಚಿತ್ರಕ್ಕೆ ಮುಖಂಡರು ಪುಷ್ಪ ನಮನ ಸಲ್ಲಿಸಿದರು.
ಈ ವೇಳೆ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಅವರು ಮಾತನಾಡಿ ದೇಶದ ಸ್ವಾತಂತ್ರ್ಯ ಸಂಗ್ರಾಮದ ಚರಿತ್ರೆಯಲ್ಲಿ ಭಗತ್ ಸಿಂಗ್ ಅಚ್ಚಳಿಯದ ಹೆಸರು ಎಂದರು.
ತನ್ನ ಅಸಾಧಾರಣ ಧೈರ್ಯದಿಂದಲೇ ಬ್ರಿಟಿಷರ ಎದೆ ನಡುಗಿಸಿದ ಕ್ರಾಂತಿಕಾರಿ. ಚಿಕ್ಕ ವಯಸ್ಸಿನಲ್ಲೇ ದೇಶಪ್ರೇಮದಿಂದ ಪ್ರೇರಿತರಾಗಿ, ಬ್ರಿಟಿಷ್ ಆಡಳಿತದ ವಿರುದ್ಧ ಸಕ್ರಿಯವಾಗಿ ತೊಡಗಿಸಿಕೊಂಡ ಅವರು, ರೈತರು ಮತ್ತು ಕಾರ್ಮಿಕರನ್ನು ಒಗ್ಗೂಡಿಸಲು 'ನೌಜವಾನ್ ಭಾರತ್ ಸಭಾ'ವನ್ನು ಸ್ಥಾಪಿಸಿದರು.
ಲಾಹೋರ್ ಪಿತೂರಿ ಪ್ರಕರಣ ಮತ್ತು ದೆಹಲಿಯ ಕೇಂದ್ರೀಯ ಶಾಸನಸಭೆಯ ಮೇಲೆ ಬಾಂಬ್ ದಾಳಿಯಂತಹ ಕ್ರಾಂತಿಕಾರಿ ಕೃತ್ಯಗಳಲ್ಲಿ ಭಾಗವಹಿಸಿದಕ್ಕಾಗಿ ಅವರನ್ನು ಮಾರ್ಚ್ 1931 ರಲ್ಲಿ ಗಲ್ಲಿಗೇರಿಸಲಾಯಿತು. ಆಗ ಅವರಿಗೆ 23 ವಯಸ್ಸು, ನಗುನಗುತ್ತಾ ನೇಣಿಗೇರಿ ನಮ್ಮ ಸ್ವತಂತ್ರ ಭಾರತದ ಕನಸಿಗೆ ನನಸಾದರು ಎಂದು ಹೇಳಿದರು.
ಯುವ ಮೂರ್ಚಾ ಅಧ್ಯಕ್ಷ ಭಾಗಣ್ಣ ದೊರೆ ಕ್ರಾಂತಿ ಪುರುಷನ ಭಗತ ಸಿಂಗ್ ಹೋರಾಟ ನಮ್ಮಂತ ಯುವಕರಿಗೆ ಸ್ಪೂರ್ತಿ ಎಂದು ಹೇಳಿ ವಂದಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಮಾಜಿ ವಿರೋಧ ಪಕ್ಷದ ನಾಯಕ ಭೀಮಶಾ ಜೀರೊಳ್ಳಿ,ಎಸ್ ಸಿ ಮೂರ್ಚಾ ಅಧ್ಯಕ್ಷ ದೌಲತರಾವ ಚಿತ್ತಾಪುರಕರ, ಮುಖಂಡರಾದ ಅರ್ಜುನ ಕಾಳೆಕರ್,ಕಿಶನ ಜಾಧವ,ಕಾಶಿನಾಥ ಶೆಟಗಾರ,ಅಯ್ಯಣ್ಣ ದಂಡೋತಿ,ರವಿ ಚವ್ಹಾಣ ಸೇರಿದಂತೆ ಇತರರು ಇದ್ದರು.