ಮಲ್ಲಿಕಾರ್ಜುನ ಮುತ್ಯಾ ಮೇಲಿನ ಆರೋಪ ಸುಳ್ಳು– ಸಂಗಮೇಶ ಸರಡಗಿ
ಮಲ್ಲಿಕಾರ್ಜುನ ಮುತ್ಯಾ ಮೇಲಿನ ಆರೋಪದ ಸುಳ್ಳು - ಸಂಗಮೇಶ ಸರಡಗಿ
ಕಲಬುರಗಿ: ಶಹಾಪುರ ತಾಲೂಕಿನ ಮಹಲರೋಜಾದ ಮಲ್ಲಿಕಾರ್ಜುನ ಮುತ್ಯಾ ಅವರ ಮೇಲಿನ ಪೋಕ್ಸ್ ಆರೋಪಗಳನ್ನು ಖಂಡಿಸಿ ಕೋಲಿ ಸಮಾಜದ ಯುವ ಮುಖಂಡ ಸಂಗಮೇಶ್ ಸರಡಗಿ ಪತ್ರಿಕಾ ಪ್ರಕಟಣೆ ನೀಡಿದ್ದಾರೆ.
ಮಲ್ಲಿಕಾರ್ಜುನ ಮುತ್ಯಾ ಅವರು ಮುಗ್ಧ ಮನಸ್ಸಿನ ಗುರುಗಳಾಗಿದ್ದು, ಮಗುವಿನೊಂದಿಗೆ ವಾತ್ಸಲ್ಯದಿಂದ ವರ್ತಿಸಿರುವುದನ್ನು ಕೆಲವರು ತಪ್ಪಾಗಿ ಬಿಂಬಿಸಿ ತೇಜೋವಧೆ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಸರ್ಕಾರವು ಕೂಡಲೇ ಮುತ್ಯಾ ಅವರ ಮೇಲಿನ ಆರೋಪಗಳನ್ನು ವಜಾಗೊಳಿಸಿ ನ್ಯಾಯ ಒದಗಿಸಬೇಕು ಎಂದು ಸಂಗಮೇಶ್ ಸರಡಗಿ ಆಗ್ರಹಿಸಿದ್ದಾರೆ.
