“ಕಾಂತಾಮಣಿಯ ಕನಸುಗಳು” ಕಥಾಸಂಕಲನ ಪರಿಚಯ ಕಾರ್ಯಕ್ರಮ

“ಕಾಂತಾಮಣಿಯ ಕನಸುಗಳು” ಕಥಾಸಂಕಲನ ಪರಿಚಯ ಕಾರ್ಯಕ್ರಮ
ಕಲಬುರಗಿ: ಕನ್ನಡ ನಾಡು ಲೇಖಕರು ಮತ್ತು ಓದುಗರ ಸಹಕಾರ ಸಂಘದ ವತಿಯಿಂದ ದಿನಾಂಕ 27-09-2025, ಶನಿವಾರ, ಸಾಯಂಕಾಲ 5.30 ಗಂಟೆಗೆ ಸಂಘದ ಕಾರ್ಯಾಲಯದಲ್ಲಿ “ಪುಸ್ತಕ ಪರಿಚಯ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಪ್ರೋ. ಕೆ.ಎಸ್. ನಾಯಕರು ರಚಿಸಿದ **“ಕಾಂತಾಮಣಿಯ ಕನಸುಗಳು”** ಎಂಬ ಕಥಾ ಸಂಕಲನದ ಕುರಿತು ಸರ್ಕಾರಿ ಕನ್ಯಾಪೂರ್ವ ಕಾಲೇಜಿನ ನಿವೃತ್ತ ಕನ್ನಡ ಉಪನ್ಯಾಸಕರಾದ ಶ್ರೀ ರೇವಣಸಿದ್ಧಪ್ಪ ದುಕಾನದಾರ ಅವರು ಗ್ರಂಥಾವಲೋಕನ ಮಾಡುವರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ನಾಡು ಲೇಖಕರು ಮತ್ತು ಓದುಗರ ಸಹಕಾರ ಸಂಘದ ಅಧ್ಯಕ್ಷರಾದ ಶ್ರೀ ಅಪ್ಪಾರಾವ ಅಕ್ಕೋಣೆಯವರು ವಹಿಸುವರು. ಸಂಘದ ಉಪಾಧ್ಯಕ್ಷರಾದ ಡಾ. ಸ್ವಾಮಿರಾವ ಕುಲಕರ್ಣಿ ಮತ್ತು ಕಥಾಸಂಕಲನದ ಲೇಖಕರಾದ ಪ್ರೋ. ಕೆ.ಎಸ್. ನಾಯಕರು ಉಪಸ್ಥಿತರಿರುವರು.
ಸಾಹಿತ್ಯಾಸಕ್ತರು ಹಾಗೂ ಓದುಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಂಘದ ಪರವಾಗಿ ವಿನಂತಿಸಲಾಗಿದೆ.
ಸಂಚಾಲಕರು: ಡಾ. ವಿಜಯಕುಮಾರ ಪರುತೆ ಸರ್ವರಿಗೂ ಆದರದ ಸುಸ್ವಾಗತ ಕೋರಿದ್ದಾರೆ.