ಬಿಜೆಪಿ ಯಿಂದ ರಸ್ತೆ ತಡೆ : ಪರಿಹಾರ ನೀಡಲು ಒತ್ತಾಯಿಸಿ ಪ್ರತಿಭಟನೆ

ಬಿಜೆಪಿ ಯಿಂದ ರಸ್ತೆ ತಡೆ : ಪರಿಹಾರ ನೀಡಲು ಒತ್ತಾಯಿಸಿ ಪ್ರತಿಭಟನೆ

ಬಿಜೆಪಿ ಯಿಂದ ರಸ್ತೆ ತಡೆ : ಪರಿಹಾರ ನೀಡಲು ಒತ್ತಾಯಿಸಿ ಪ್ರತಿಭಟನೆ 

ಶಹಾಬಾದ : - ಬೆಳೆ ನಷ್ಟ ಪರಿಹಾರಕ್ಕಾಗಿ ಬಿಜೆಪಿ ಮತ್ತು ತಾಲ್ಲೂಕಿನ ರೈತರು ಸೇರಿ ಬಸವೇಶ್ವರ ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಬಿಜೆಪಿ ಯ ಮುಖಂಡರಾದ ಅರುಣ ಪಟ್ಟಣಕರ ಮಾತನಾಡಿ, ತಾಲ್ಲೂಕಿನಲ್ಲಿ ಅತಿವೃಷ್ಟಿ, ಅನಾವೃಷ್ಟಿ, ಅಥವಾ ಇತರ ಕಾರಣಗಳಿಂದ ಬೆಳೆಗಳು ನಾಶವಾದಾಗ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ರೈತರು ಬೆಳೆ ವಿಮೆಯ ಕಂತುಗಳು ತುಂಬಿದರು ಸಹಿತ 2023-24-25 ನೇ ಸಾಲಿನ ಪರಿಹಾರ ಬಾಕಿ ಹಣ ಇನ್ನೂ ರೈತರಿಗೆ ನೀಡದೆ ಇರುವುದು ರೈತರನ್ನು ಮತ್ತಷ್ಟು ತೊಂದರೆಗೆ ಸಿಲುಕಿಸಿದ್ದಾರೆ ಎಂದು ಆರೋಪಿಸಿದರು

ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕಲಬುರಗಿ ಜಿಲ್ಲೆಯಾದ್ಯಂತ ತೇವಾಂಶ ಹೆಚ್ಚಾಗಿ ಬೆಳೆಗಳಾದ, ತೊಗರಿ, ಹೆಸರು,ಹತ್ತಿ, ಜೋಳ ಸೇರಿದಂತೆ ವಿವಿಧ ಬೆಳೆಗಳು ನೀರುಪಾಲಾಗಿವೆ, ರೈತರು ಈ ಬೆಳೆಗಳನ್ನು ಬೆಳೆಯಲು ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿದ್ದು, ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ, ರೈತರಿಗೆ ಸರಕಾರ ಯಾವುದೇ ತಾಂತ್ರಿಕ ತೊಂದರೆ ನೆಪ ಹೇಳದೆ, ಬೆಳೆ ಹಾನಿಯಾದ ಜಮೀನಗಳ ಸಮೀಕ್ಷೆ ನಡೆಸಿ ನ್ಯಾಯೋಚಿತ ಬೆಳೆ ನಷ್ಟ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿದರು.

ಚಂದ್ರಕಾಂತ ಗೊಬ್ಬೂರ ಮತ್ತು ಅಣವೀರ ಇಂಗಿನಶೆಟ್ಟಿ ಮಾತನಾಡಿ,

ಸರ್ಕಾರ ಬೆಳೆ ಪರಿಹಾರ ಹಣ ನೀಡಿದ ಕಾರಣ ರೈತರು ಆತ್ಮಕದಲ್ಲಿದ್ದಾರೆ ಅತ್ತ ಸಾಲ ತೀರಿಸಲಾಗದೆ ಮತ್ತು ಇತ್ತ ಬದುಕು ಕಟ್ಟಿಕೊಳ್ಳಲಾಗದೆ ಆತ್ಮಹತ್ಯೆ ಅಂತ ಪ್ರಕರಣಗಳು ಹೆಚ್ಚುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು

ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ಬೆಳೆ ನಷ್ಟವಾಗಿದ್ದು, ರಾಜ್ಯ ಸರಕಾರ ಕೂಡಲೇ ಹಸಿಬರ ಅತಿವೃಷ್ಟಿ ಜಿಲ್ಲೆ ಎಂದು ಘೋಷಣೆ ಮಾಡಿ ಪ್ರತಿ ಎಕರೆಗೆ 50,000 ರೂ. ಪರಿಹಾರ ಒದಗಿಸಬೇಕು, ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ ತೊಗರಿ, ಹೆಸರು, ಉದ್ದು ಸೇರಿ ಇತರೆ ಬೆಳೆಗಳು ಜಲಾವೃತಗೊಂಡು ಸಂಪೂರ್ಣ ನಾಶವಾಗಿವೆ, ಅತಿವೃಷ್ಟಿಯಿಂದ ಹಾನಿಯಾಗಿರುವ ಮನೆಗಳಿಗೆ ಮತ್ತು ಜೀವ ಹಾನಿಗಳಿಗೆ ಸರ್ಕಾರ ಪರಿಹಾರ ನೀಡಬೇಕು ಎಂದು ಒತ್ತಾಯಿಸಲಾಯಿತು.

ಕಲ್ಬುರ್ಗಿ ಜಿಲ್ಲೆಯನ್ನು ಅತಿವೃಷ್ಟಿ ಪೀಡಿತ ಜಿಲ್ಲೆಯ ಎಂದು ಘೋಷಿಸಬೇಕು, ವಿಮೆ ಇಲ್ಲದ ಎಲ್ಲಾ ರೈತರಿಗೂ ಪರಿಹಾರ ಘೋಷಣೆ ಮಾಡಬೇಕು, ಸಾಲದ ಸುಳಿಯಲ್ಲಿ ಸಿಲುಕಿರುವ ಎಲ್ಲಾ ರೈತರ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿ ಮಾನ್ಯ ತಾಲೂಕ ತಹಸೀಲ್ದಾರ್ ನೀಲಿಪ್ರಭಾ ಬಬಲಾದ್ ಅವರ ಮುಖಾಂತರ ರಾಜ್ಯದ ಮುಖ್ಯಮಂತ್ರಿ ಅವರಿಗೆ ಮನಿ ಪತ್ರ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಮಂಡಲದ ಅಧ್ಯಕ್ಷ ನಿಂಗಪ್ಪ ಹುಳಗೊಳ್ಕರ, ಕಾರ್ಯದರ್ಶಿ ದೇವದಾಸ ಜಾದವ, ಜಗದೇವ ಸುಬೆದಾರ, ಅನಿಲ, ಡಾ. ಅಶೋಕ ಜಿಂಗಾಡೆ, ಸದಾನಂದ ಕುಂಬಾರ, ಕಾಶಣ್ಣ ಚೆನ್ನೂರ, ಬಸವರಾಜ್ ಮದ್ರಕಿ, ತಿರುಮಲ ದೇವ್ಕರ, ರಾಜು ಮಾನೆ, ಶಿವ ತಳವಾರ, ನಾರಾಯಣ ಕಂದುಕುರ, ಅಮರ್ ಕೋರೆ, ರಾಮು ಕುಸಾಲೆ, ಸತೀಶ್ ರಾಪ್ನೂರ, ಭೀಮಯ್ಯ, ಶ್ರೀನಿವಾಸ್ ದೇವಕರ, ರೇವಣಸಿದ್ಧ ಮತ್ತಿಮಡು, ಪದ್ಮ ಕಟಗೆ, ಶಶಿಕಲಾ ಸಜ್ಜನ, ಜಯಶ್ರೀ ಸೂಡಿ, ನೀಲಮ್ಮ ಗಂಟ್ಲಿ ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರು ಹಾಗೂ ರೈತರು ಭಾಗವಹಿಸಿದ್ದರು.

ಶಹಾಬಾದ್‌ ಸುದ್ದಿ ನಾಗರಾಜ್ ದಂಡಾವತಿ