ಅಪರೂಪದ ಸಾಹಿತಿ ಬಸವರಾಜ ಐನೋಳಿ-ಪ್ರೊ. ಶೋಭಾದೇವಿ ಚೆಕ್ಕಿ

ಅಪರೂಪದ  ಸಾಹಿತಿ ಬಸವರಾಜ ಐನೋಳಿ-ಪ್ರೊ.  ಶೋಭಾದೇವಿ ಚೆಕ್ಕಿ

 ಅಪರೂಪದ ಸಾಹಿತಿ ಬಸವರಾಜ ಐನೋಳಿ--ಪ್ರೊ. ಶೋಭಾದೇವಿ ಚೆಕ್ಕಿ

ಚಿಂಚೋಳಿ - ಶಿಕ್ಷಣ ಕ್ಷೇತ್ರದಲ್ಲಿ ಸಾರ್ಥಕ ಜೀವನ ಸಲ್ಲಿಸಿ ಮೌಲಿಕವಾದ ಹದಿನಾರು ಕೃತಿಗಳನ್ನು ನೀಡಿದ ಅಪರೂಪದ ಲೇಖಕ ಶಿಕ್ಷಕ ಸಾಹಿತಿ ಬಸವರಾಜ ಐನೋಳಿಯವರಾಗಿದ್ದಾರೆ. ಅವರ ಬರವಣಿಗೆ ವಿಶಾಲ ದೃಷ್ಟಿಕೋನ ಹೊಂದಿದೆ. ಶಿಕ್ಷಕರಾದವರು, ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುವವರನೆಕರು ಶೈಕ್ಷಣಿಕ ಸಮಸ್ಯೆಗಳು ಹೇಳುತ್ತಾರೆ. ಅವುಗಳಿಗೆ ಪರಿಹಾರ ನೀಡುವವರು ಬಹಳ ಕಡಿಮೆ. ತಮ್ಮ ಬರಹದಲ್ಲಿ ಐನೋಳಿಯವರು ಸಮಸ್ಯೆಗಳಿಗೆ ಪರಿಹಾರವನ್ನು ತಿಳಿಸಿದ್ದಾರೆ. ಅವರು ಗಡಿನಾಡಿನಲ್ಲಿದ್ದು ಕನ್ನಡ ಕಟ್ಟುವ ಕೆಲಸದಲ್ಲೂ ಪ್ರಮುಖ ಪಾತ್ರವಹಿಸಿದ್ದಾರೆ. ಸಾಂಸ್ಕೃತಿಕ ಕ್ಷೇತ್ರದ ಸಂಘಟಕರಾಗಿದ್ದಾರೆoದು ನಿವೃತ್ತ ಪ್ರಾಧ್ಯಾಪಕಿ, ಸಾಹಿತಿ, ಪ್ರೊ. ಶೋಭಾದೇವಿ ಚೆಕ್ಕಿ ಸೇಡಂ ಅವರು ಅಭಿಪ್ರಾಯಪಟ್ಟರು. ರವಿವಾರ ಇಲ್ಲಿನ ಚಂದಾಪುರ ಬಸವನಗರದ ಕಾಯಕ ನಿಲಯದಲ್ಲಿ, ಕಲಬುರ್ಗಿ ಜಿಲ್ಲಾ ಸಿರಿಗನ್ನಡ ವೇದಿಕೆ ಹಾಗೂ ಕಲ್ಬುರ್ಗಿ ಸಾಕ್ಷಿ ಪ್ರತಿಷ್ಠಾನದ ವತಿಯಿಂದ ಏರ್ಪಡಿಸಿದ ಸಾಹಿತ್ಯ ಸಮಾಗಮ - ೩ ಉಪನ್ಯಾಸ ಮಾಲಿಕೆ ಕಾರ್ಯಕ್ರಮದಲ್ಲಿ ಬಸವರಾಜ ಐನೋಳಿಯವರ ಬದುಕು ಬರಹ ಕುರಿತು ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

     ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿರಿಗನ್ನಡ ವೇದಿಕೆ ಕಲ್ಬುರ್ಗಿ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಗವಿಸಿದ್ದಪ್ಪ ಪಾಟೀಲರು "ಶಿಕ್ಷಕರು ಸಾಹಿತ್ಯ ಕ್ಷೇತ್ರಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ಅಂಥವರ ಸಾಲಿನಲ್ಲಿ ಬಸವರಾಜ ಐನೊಳಿಯವರು ಒಬ್ಬರಾಗಿದ್ದಾರೆ. ಅವರ ಶಿಸ್ತು ಸರಳತೆ, ಸಾತ್ವಿಕ ವ್ಯಕ್ತಿತ್ವ ಅನುಕರಣೀಯವಾಗಿದೆ". ಅವರು ಬದುಕಿದಂತೆ ಬರೆದಿದ್ದಾರೆoದರು. ಅತಿಥಿಗಳಾಗಿದ್ದ ಅ ಭಾ ಶ ಸಾ ಪರಿಷತ್ತು ಚಿಂಚೋಳಿ ತಾಲೂಕ ಘಟಕದ ಗೌರವಾಧ್ಯಕ್ಷ ಡಾ. ಮಲ್ಲಿಕಾರ್ಜುನ ಪಾಲಾಮೂರ ಮಾತನಾಡಿ; ಗಾಳಿಯಲ್ಲಿ ತೇಲಿ ಹಾರಾಡುವ ಗಾಳಿಪಟ ಎಲ್ಲರಿಗೂ ಕಾಣುತ್ತದೆ. ಆ ಗಾಳಿಪಟ ಬಾನಲ್ಲಿ ತೇಲುವಂತೆ ಮಾಡುವುದೇ ಒಂದು ತೆಳುವಾದ ದಾರ. ಆ ದಾರದಂತೆ ಬದುಕಿದವರು ಬಸವರಾಜ ಐನೋಳಿಯವರಾಗಿದ್ದಾರೆಂದರು. 

ಉಪಸ್ಥಿತರಿದ್ದ ಬಸವರಾಜ ಐನೋಳಿ ಯವರು ಮಾತನಾಡಿ ಕಲಬುರ್ಗಿಯ ಎಸ್ ಬಿ ಕಾಲೇಜಿನಲ್ಲಿ ಓದುವಾಗ ಅಲ್ಲಿನ ಸಾಹಿತ್ತಿಕ ಸಾಂಸ್ಕೃತಿಕ ವಾತಾವರಣ ನನ್ನನ್ನು ಓದುಗನನ್ನಾಗಿ ರೂಪಿಸಿತು ಎಂದು, ತಮ್ಮ ವಿದ್ಯಾರ್ಥಿ ಜೀವನದ ಅನುಭವಗಳನ್ನು ಮೆಲುಕು ಹಾಕಿದರು. ಕಾರ್ಯಕ್ರಮದಲ್ಲಿ ಗೀತಾರಾಣಿ ಐನೋಳಿ ಸ್ವಾಗತಿಸಿದರು. ರೇವಣಸಿದ್ದಯ್ಯ ಹಿರೇಮಠ, ಶರಣಯ್ಯ ಸ್ವಾಮಿ ಅಲ್ಲಾಪುರ, ನಾಗೇಶ ಬಿ ಶೀಲವಂತ ಅವರು ವಚನ ಗಾಯನ ಮಾಡಿದರು. ಡಾ. ರಾಜಕುಮಾರ ಮಾಳಗೆ ನಿರೂಪಿಸಿದರು. ರಜತ ಐನೋಳಿ ವಂದಿಸಿದರು. ಕಾರ್ಯಕ್ರಮದಲ್ಲಿ ಡಾ. ಸಿದ್ದಪ್ಪ ಹೊಸ್ಮನಿ, ಶ್ರೀದೇವಿ ಪಾಟೀಲ್, ಡಾ. ಶೀಲಾದೇವಿ ಆಕಾಶ ತೆಗನೂರ, ರಾಮಯ್ಯ ಸ್ವಾಮಿ ಐನೋಳಿ ಡಾ. ವಿದ್ಯಾಸಾಗರ, ಎಸ್ ಎನ್ ದಂಡಿನ್ ಕುಮಾರ್, ಜ್ಯೋತಿ ಬೊಮ್ಮ, ಸುರೇಶ್ ದೇಶಪಾಂಡೆ, ಶಂಕರಜಿ ಹಿಪ್ಪರಗಿ, ಉತ್ತಮ ದೊಡ್ಮನಿ, ಕೈಲಾಸ ಜ್ಯೋತಿ, ಚನ್ನಬಸಯ್ಯ ಮಠ, ಸೂರ್ಯಕಾಂತ ಹುಲಿ, ರಮೇಶ ಮಕಾಶಿ, ಚಂದ್ರಶೇಖರ ಲಗಶೆಟ್ಟಿ ಮತ್ತಿತರು ಉಪಸ್ಥಿತರಿದ್ದರು.