ಡಿ.28.ರಂದು ಕುವೆಂಪು ಅವರ ಜನ್ಮದಿನ ನಿಮಿತ್ತ ಸಾಧಕರಿಗೆ ಕುವೆಂಪು ರತ್ನ ಪ್ರಶಸ್ತಿ ಪ್ರಧಾನ ಸಮಾರಂಭ

ಡಿ.28.ರಂದು ಕುವೆಂಪು ಅವರ ಜನ್ಮದಿನ ನಿಮಿತ್ತ ಸಾಧಕರಿಗೆ ಕುವೆಂಪು ರತ್ನ ಪ್ರಶಸ್ತಿ ಪ್ರಧಾನ ಸಮಾರಂಭ
ಕಲಬುರಗಿ: ಜೈ ಕನ್ನಡಿಗರ ರಕ್ಷಣಾ ವೇದಿಕೆಯ ರಾಜ್ಯ ಘಟಕ ಹಾಗೂ ಸಹರಾ ಪಬ್ಲಿಕ್ ಶಾಲೆ, ಸಹಾರ ಚಿಣ್ಣರ ಶಾಲೆ ಮತ್ತು ಐ.ಟಿ.ಐ. ಕಾಲೇಜು ಸಂಸ್ಥೆ ವೇದಿಕೆ ವತಿಯಿಂದ ರಾಷ್ಟçಕವಿ ಕುವೆಂಪುರವರ 120ನೇಯ ಜನ್ಮದಿನ ನಿಮಿತ್ಯವಾಗಿ ವಿವಿಧ ಕ್ಷೇತ್ರದ ಸಾಹಿತಿಗಳನ್ನು ಗುರುತಿಸಿ ಕುವೆಂಪು ರತ್ನ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಡಿ.28.ರಂದು ಬೆಳ್ಳಿಗೆ 11.30ಕ್ಕೆ ನಗರದ ಕನ್ನಡ ಭವನ ಆವರಣದಲ್ಲಿ ನಡೆಯಲಿದೆ ಎಂದು ಜೈ ಕನ್ನಡಿಗರ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಸಚೀನ್ ಫರಹತಾಬಾದ ತಿಳಿಸಿದ್ದಾರೆ.
ಕಾರ್ಯಕ್ರಮಕ್ಕೆ ದಿವ್ಯಸಾನಿಧ್ಯವನ್ನು ಶ್ರೀ ಷ.ಬ್ರ ಡಾ. ರೇವಣಸಿದ್ಧ ಶಿವಾಚಾರ್ಯರು, ಚಿಕ್ಕವಿರೇಶ್ವರ ಮಠ ಸುಕ್ಷೇತ್ರ ಶ್ರೀನಿವಾಸ ಸರಡಗಿ, ಪೂಜ್ಯ ಶ್ರೀ ಷ.ಪೂ. ಗುರುರಾಜೇಂದ್ರ ಶಿವಯೋಗಿಗಳು ಮಹಾಲಕ್ಷ್ಮಿ ಶಕ್ತಿಪೀಠ ನದಿಸಿನೂರ ಅವರು ವಹಿಸುವರು.
ಶಾಸಕ ಅಲ್ಲಮಪ್ರಭು ಪಾಟೀಲ ಕಾರ್ಯಕ್ರಮ ಉದ್ಘಾಟಿಸುವರು, ಸಹರಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ.ಡಿ. ಸಿದ್ಧಿಕಿ ಅಧ್ಯಕ್ಷತೆ ವಹಿಸುವರು, ಭಾಷಣಕಾರರಾಗಿ ಸುರೇಸ ಬಡಿಗೇರ, ಭಾವಚಿತ್ರ ಪೂಜೆಯನ್ನು ಮೇಯರ್ ಯಲ್ಲಪ್ಪ ನಾಯಕೋಡಿ ಸಲ್ಲಿಸುವರು, ವಿಧಾನ ಪರಿಷತ್ ಸದಸ್ಯ ತಿಪ್ಪಣಪ್ಪ ಕಮಕನೂರ, ದಕ್ಷಿಣ ಮತಕ್ಷೇತ್ರದ ಕಾಂಗ್ರೇಸ್ ಮುಖಂಡ ನೀಲಕಂಠರಾವ ಮೂಲಗೆ ಅತಿಥಿಗಳಾಗಿ ಆಗಮಿಸುವರು, ಬಿ.ಜೆ.ಪಿ. ಪಕ್ಷದ ಯುವ ಮುಖಂಡ ಶಿವಾಕಾಂತ ಮಹಾಜನ, ಕಲಬುರಗಿ, ಜೆ.ಡಿ.ಎಸ್. ಪಕ್ಷದ ಯುವ ಮುಖಂಡ ಕೃಷ್ಣಾ ರೆಡ್ಡಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಮಹಾನಗರ ಪಾಲಿಕೆ ಸದಸ್ಯ ಪ್ರಕಾಶ ಕಪನೂರ, ಮಾಜಿ.ಜಿ.ಪಂ. ಸದಸ್ಯ ಧೂಳಪ್ಪ ದೊಡ್ಡಮನಿ, ವಿಜಯಕುಮಾರ ಕಟ್ಟಿಮನಿ, ಸಂದೀಪ ಹುಲಿ, ಜೈಭೀಮ ಹುಡಗಿ, ಗೋಪಾಲ ಕಲಕರ್ಣಿ, ಗಿರೀಶ ಬೋರೆ, ರಾಜಕುಮಾರ.ಆರ್., ಮಿನಗುತಾರೆ ಮೆಲೋಡಿಸ್ ವತಿಯಿಂದ ರಸಮಂಜರಿ ಕಾರ್ಯಕ್ರಮದಲ್ಲಿ ಕುಮಾರಿ ಅನ್ಯನ್ಯಾ ಗೋಲ್ಡ್ಸ್ಮೀತ ಅವರಿಂದ ಭರತ ನಾಟ್ಯನೃತ್ಯವನ್ನು ನಡೆಸಿಕೊಡುತ್ತಾರೆ.
ರಾಷ್ಟçಕವಿ ಕುವೆಂಪುರವರ 120ನೇಯ ಜನ್ಮದಿನ ನಿಮಿತ್ಯವಾಗಿ ವಿವಿಧ ಕ್ಷೇತ್ರದ ಸಾಹಿತಿಗಳನ್ನು ಗುರುತಿಸಿ ಕುವೆಂಪು ರತ್ನ ಪ್ರಶಸ್ತಿ ಪ್ರಧಾನವನ್ನು ವಿ.ಆರ್. ಚಾಂಬಳ, ಹಿರಿಯ ಸಾಹಿತಿಗಳು, ಶಾಂತಾ ಪಸ್ತಾಪೂರ ಹಿರಿಯ ಸಾಹಿತಿಗಳು, ಡಾ. ಕಾವ್ಯಶ್ರೀ ಮಹಾಗಾಂವಕರ್, ಹಿರಿಯ ಕಥೆಗಾರರು, ಶರಣಪ್ಪ ಸೈದಾಪೂರ, ಸಾಹಿತಿಗಳು ಹಾಗೂ ಪ್ರಾಧ್ಯಾಪಕರು, ಮಹ್ಮದ ಅಯುಜುದ್ದೀನ್ ಪಟೇಲ್, ವಿಶ್ವಖ್ಯಾತಿಯ ಚಿತ್ರ ಕಲಾವಿದರು, ಅರುಣ ಕದಂಬ ಪತ್ರಕರ್ತರು ನ್ಯೂಸ್ 18 ಕನ್ನಡ, ಮೇಘಾ ದೇಶಮುಖ ಸಾಹಿತಿಗಳು ಮತ್ತು ಸಮಾಜ ಸೇವಕರು, ವಿಜಯಲಕ್ಷಿö್ಮÃ ಸುತಾರ ಶಿಕ್ಷಕರು, ಮಧು ದೇಶಮುಖ ಆಕಾಶವಾಣಿ ನಿರೂಪಕರು, ಕವಿತಾ ಆರ್.ಹಳ್ಳಿ ಶಿಕ್ಷಕರು ಹಾಗೂ ಸಾಹಿತಿಗಳು ಇವರಿಗೆ ಕುವೆಂಪು ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು, ಈ ಕಾರ್ಯಕ್ರಮಕ್ಕೆ ಕಲಬುರಗಿ ನಗರ ಸಾರ್ವಜನಿಕರು, ಕನ್ನಡ ಅಭಿಯಾನಿಗಳು, ಸಂಘಟನೆ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಸಚೀನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸತೀಶ ಫರಹತಾಬಾದ, ಸುರೇಶ ಹನಗುಡಿ, ಅಕ್ಷಯ, ಗುಡ್ಡು ಸಿಂಗ್ ವಿಕಾಸ, ಅಣವೀರ ಪಾಟೀಲ ಉಪಸ್ಥಿತರಿದ್ದರು.