ರಂಭಾಪುರಿ ಜಗದ್ಗುರುಗಳವರ ಕಾರ್ಯಕ್ರಮದಲ್ಲಿ ಹಾರಕೂಡ ಶ್ರಿ ಮಠದಿಂದ 5 ದಿನದ ದಾಸೋಹ ಸೇವೆ

ರಂಭಾಪುರಿ ಜಗದ್ಗುರುಗಳವರ ಕಾರ್ಯಕ್ರಮದಲ್ಲಿ ಹಾರಕೂಡ ಶ್ರಿ ಮಠದಿಂದ 5 ದಿನದ ದಾಸೋಹ ಸೇವೆ
ಬಸವಕಲ್ಯಾಣ ನಗರದಲ್ಲಿ ಜರುಗುತ್ತಿರುವ ಶ್ರೀಮದ್ ರಂಭಾಪುರಿ ಜಗದ್ಗುರುಗಳವರ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದಲ್ಲಿ ದಿನಾಂಕ 22 ಸೆಪ್ಟೆಂಬರ್ 2025 ರಿಂದ 26 ಸೆಪ್ಟೆಂಬರ್ 2025 ರವರೆಗೆ ಕಾರ್ಯಕ್ರಮಕ್ಕೆ ಆಗಮಿಸಿದ ಭಕ್ತರಿಗೆ 5 ದಿನಗಳ ಕಾಲ ಶ್ರೀ ಚನ್ನಬಸವೇಶ್ವರ ಸಂಸ್ಥಾನ ಹಿರೇಮಠ ಸುಕ್ಷೇತ್ರ ಹಾರಕೂಡ ವತಿಯಿಂದ ದಾಸೋಹ ಸೇವೆ ಜರುಗಿತು.
ಹಾರಕೂಡ ಶ್ರೀಮಠದ ಪೀಠಾಧಿಪತಿಗಳಾದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ಭಕ್ತರಿಗೆ ಪ್ರಸಾದ ಉಣಬಡಿಸಿದರು.