ಅಕಾಲಿಕ ಮಳೆಯಿಂದ ಜನ ಹಸ್ತವ್ಯಸ್ತ – ಸರ್ಕಾರ ತುರ್ತು ನೆರವು ನೀಡಲಿ : ಮೊಹಮ್ಮದ್ ಶೋಯಬ್ ಗಿರಣಿ ಆಗ್ರಹ

ಅಕಾಲಿಕ ಮಳೆಯಿಂದ ಜನ ಹಸ್ತವ್ಯಸ್ತ – ಸರ್ಕಾರ ತುರ್ತು ನೆರವು ನೀಡಲಿ : ಮೊಹಮ್ಮದ್ ಶೋಯಬ್ ಗಿರಣಿ ಆಗ್ರಹ

ಅಕಾಲಿಕ ಮಳೆಯಿಂದ ಜನ ಹಸ್ತವ್ಯಸ್ತ – ಸರ್ಕಾರ ತುರ್ತು ನೆರವು ನೀಡಲಿ : ಮೊಹಮ್ಮದ್ ಶೋಯಬ್ ಗಿರಣಿ ಆಗ್ರಹ

ಕಲಬುರಗಿ : ಅಕಾಲಿಕ ಧಾರಾಕಾರ ಮಳೆಯಿಂದ ಜನರ ಜೀವನ ಅಸ್ತವ್ಯಸ್ತಗೊಂಡಿರುವ ಹಿನ್ನೆಲೆ, ಸರ್ಕಾರ ತಕ್ಷಣವೇ ಜಾತಿಗಣತಿ ಸಮೀಕ್ಷೆಯನ್ನು ಕೈಬಿಟ್ಟು ಬೆಳೆ ನಷ್ಟದ ಸಮೀಕ್ಷೆ ನಡೆಸಿ ರೈತರಿಗೆ ಪರಿಹಾರ ಧನ ವಿತರಿಸಬೇಕೆಂದು ಭಾರತೀಯ ಕ್ರಾಂತಿಕಾರಿ ರೈತ ಸೇನೆಯ ಕಲಬುರಗಿ ಜಿಲ್ಲಾಧ್ಯಕ್ಷರಾದ ಮೊಹಮ್ಮದ್ ಶೋಯಬ್ ಗಿರಣಿ ಆಗ್ರಹಿಸಿದ್ದಾರೆ.

“ಇಂತಹ ಸಂಕಷ್ಟದ ಸಮಯದಲ್ಲಿ ಜಾತಿಗಣತಿ ನಡೆಸುವುದು ಅವಜ್ಞಾನಿಕ ಕ್ರಮ. ಬದಲಿಗೆ ರೈತರ ಹಿತಾಸಕ್ತಿ ಕಾಪಾಡಲು ತಕ್ಷಣವೇ ಬೆಳೆ ಪರಿಹಾರ ನೀಡಬೇಕು. ಅಲ್ಲದೆ ಎಲ್ಲ ವಿಧದ ಬೆಳೆಸಾಲಗಳನ್ನು ಕೂಡಲೇ ಮನ್ನಾ ಮಾಡುವ ಮೂಲಕ ರೈತರಿಗೆ ನೈತಿಕ ಧೈರ್ಯ ತುಂಬಬೇಕು” ಎಂದು ಅವರು ತಿಳಿಸಿದರು.

ವಿರೋಧ ಪಕ್ಷದ ನಾಯಕರೂ ಸಹ ಸರ್ಕಾರದ ಗಮನಕ್ಕೆ ಈ ವಿಷಯವನ್ನು ತರುವ ಕೆಲಸ ಮಾಡಬೇಕೆಂದು ಅವರು ಒತ್ತಾಯಿಸಿದರು.

ವರದಿ : ಜಟ್ಟಪ್ಪ ಎಸ್. ಪೂಜಾರಿ