ಜಾನಪದ ಉಸಿರಾಗಿಸಿದ್ದ:ಸೂಗಯ್ಯ ಹಿರೇಮಠ
ಜಾನಪದ ಉಸಿರಾಗಿಸಿದ್ದ:ಸೂಗಯ್ಯ ಹಿರೇಮಠ
ಸೂಗಯ್ಯ ಹಿರೇಮಠ ಅವರು ಈ ನಾಡು ಕಂಡ ಅಪರೂಪದ ಲೇಖಕರು.ಕಲ್ಯಾಣ ಕರ್ನಾಟಕದ ಬಹು ಮುಖ ವ್ಯಕ್ತಿತ್ವದ ಅಸಾಧರಣ ಶಕ್ತಿ. ಸೃಜನಶೀಲ ಸಾಹಿ ತ್ಯ ಮತ್ತು ಹೋರಾಟಗಳಲ್ಲಿ ತಮ್ಮದೇ ಛಾಪು ಮೂಡಿ ಸಿದ ವರ್ಣನಾತೀತ ಸಾಹಿತಿ.ಅವರು ಇವತ್ತಿನ ಯಾದಗಿ ರಿ ಜಿಲ್ಲೆಯ ಶಹಪೂರ ತಾಲೂಕಿನ ಸಿಂಗನಹಳ್ಳಿಯವ ರು.ಸಗರ ನಾಡೆಂದು ಜಂಗಮ ಮನೆತನದ ಸಂಪ್ರದಾಯಸ್ಥರ,ಸುಸಂಸ್ಕೃತ, ಕಲೆ,ಸಾಹಿತ್ಯ ಕೇಂದ್ರದ ಮನೆತನದಲ್ಲಿ ಹುಟ್ಟಿದವರು.ಇಲ್ಲಿಯ ಶರಣಯ್ಯ ಮತ್ತು ಶಾಂತ ಮ್ಮರ ಮಗನಾಗಿ ನ೦೯-೦೫-೧೯೫೦ರಂದು ಜನಿಸಿದರು. ಬಾಲ್ಯದಿಂದಲೇ ವೈಚಾರಿಕತೆ ಮೂಡಿಸಿಕೊಂಡ ಅಪರೂಪದ ಜೀವಿ.
ಸಿಂಗನಹಳ್ಳಿ, ಗೋಗಿ,ಶಹಪೂರ,ಕಲಬುರಗಿಯ ಶ್ರೀ ಶರಣಬಸವೇಶ್ವ ರ ಕಲಾ ಮಹಾವಿದ್ಯಾಲಯದಿಂದ ಬಿ.ಎ.ಪದವಿ ಪಡೆದ ಅವರು ಮುಂದೆ ಎಂ.ಎ.ಕನ್ನಡ ಮತ್ತು ಜಾನಪದ ವಿಷ ಯ ಆಯ್ದುಕೊಂಡು ಧಾರವಾಡ ಕರ್ನಾಟಕ ವಿಶ್ವವಿ ದ್ಯಾಲಯದ ಸ್ನಾತಕೋತ್ತರ ಕೇಂದ್ರ ಗುಲಬರ್ಗಾದಿಂದ ೧೯೭೫ರಲ್ಲಿ ಪದವಿ ಪಡೆದರು. ಆಗ ಡಾ.ಬಿ.ಬಿ.ಹೆಂಡಿ,ಡಾ.ಎಂ.ಜಿ. ಬಿರಾದಾರ,ಡಾ.ಕೃಷ್ಣಮೂರ್ತಿ ಕಿತ್ತೂರ, ಡಾ.ಎಂ.ಎಸ್. ಲಠ್ಠೆ,ಡಾ.ಬಿ.ವಿ.ಮಲ್ಲಾಪೂರ,ಡಾ.ಶಶಿಕಲಾ ಮೊಳ್ದಿ,ಡಾ. ಸಂಗಮೇಶ ಸವದತ್ತಿಮಠ ಪ್ರಾಧ್ಯಾಪಕರಾಗಿದ್ದರು.
೧೯೭೬ರಿಂದ ಕರ್ನಾಟಕ ವಿಶ್ವವಿದ್ಯಾಲಯ ಸ್ನಾತಕೋ ತ್ತರ ಕೇಂದ್ರ ಕನ್ನಡ ವಿಭಾಗದಿಂದ ನಡೆದ ಉತ್ತರ ಕರ್ನಾಟಕದ ಏಳು ಜಿಲ್ಲೆಯ ಯು.ಜಿ.ಸಿ ಯೋಜನೆಯ
ಜನಪದ ಸಾಹಿತ್ಯ ಸಂಗ್ರಹದಲ್ಲಿ ಸಹಾಯಕ ಸಂಶೋಧ ಕರಾಗಿ ೧೯೮೦ರವರೆಗೆ ನಾಲ್ಕು ವರ್ಷ ಕಾರ್ಯನಿರ್ವ ಹಿಸಿದರು.ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಯುಜಿಸಿ ಯೋಜನೆಯ ಜಪದ ವೈದ್ಯ ಕೋಶದ ಗುಲ ಬರ್ಗಾ ಜಿಲ್ಲೆಯ ಸಂಗ್ರಹಕಾರರಾಗಿಯೂ ಮಹತ್ತ್ವದ ಕೆಲಸ ಮಾಡಿದವರು.
ಸಂಘರ್ಷದ ಮಧ್ಯ ಹೋರಾಟಗಾರ:ಎಂ.ಎ.ಓದು ವಾಗಲೇ ಸಿಂಗನಹಳ್ಳಿಯಲ್ಲಿ ಜಾಗೃತಿ ಯುವಕ ಸಂಘ ಮತ್ತು ಅಕ್ಕನ ಬಳಗವನ್ನು ಸ್ಥಾಪಿಸಿದರು.ಶಹಪೂರ ಸಮಾಜ ಕಲ್ಯಾಣ ಅಧಿಕಾರಿಗಳನ್ನು ಕರೆಸಿ ಉದ್ಘಾಟನೆ
ಮಾಡಿಸಿದರು.ಮೂರು ತಿಂಗಳಲ್ಲಿ ಜಮಖಾನೆ,ಗ್ಯಾಸ್, ಕಪ್ಪುಹಲಗೆ,ಬಳಪ,ಪುಸ್ತಕ, ಭಜನೆ ಸಾಮಾನುಗಳು ಬಂದಮೇಲೆ ಊರ ಜನರಿಗೆ ಖುಷಿ.ಅಕ್ಷರ ಕಲಿಕೆ, ಹಾ ಡು, ಆಟ,ಪಾಠಗಳು,ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅಣಿಯಾದವು.ಯುವ ತರುಣ ಸಂಘದ ಅಧ್ಯಕ್ಷರಾಗಿ ಸೂಗಯ್ಯನವರಿದ್ದರು.ಸಮಾಜ ಪರಿವರ್ತನೆ ಯಲ್ಲಿ ಯುವಕರ ಪಾತ್ರ ಭಾಷಣ ಸ್ಪರ್ಧೆಯಲ್ಲಿ ಪ್ರಥಮಸ್ಥಾನ ಸೂಗಯ್ಯನವರು ಪಡೆದಾಗ ಹೊತ್ತುಕೊಂಡು ಸಂಭ್ರ ಮಿಸಿದರು.ಬಿಡಿಓ ಅವರು ಬೆಂಗಳೂರಿನ ಕುಂಬಳ ಗೋಡಿಯಲ್ಲ ನಡೆಯುವ ರಾಜ್ಯ ಮಟ್ಟದ ಯುವ ನಾಯಕರ ತರಬೇತಿಗೆ ಆಯ್ಕೆಮಾಡಿ ಕಳಿಸಿದರು.ಇಲ್ಲಿ ಆಗಲೇ ಗುರುಬಸಯ್ಯ ಅಮ್ಮಾಪುರ,ಲಿಂಗಣ್ಣ ಸತ್ಯಂ ಪೇಟೆ,ಶಾಂತರಸ,ವೀರನಗೌಡ ಮಾನ್ವಿ,ಚನ್ನಬಸಪ್ಪ ಬೆಟ್ಟದೂರು,ಬಸವರಾಜ ತಂಬಾಕೆ ಅವರ ಒಡನಾಟ ದಿಂದ ಯುವಜನ ವಿಚಾರ ವೇದಿಕೆ ಮಾಡಿ ಎಲ್ಲರೂ ಸೇರುತ್ತಿದ್ದರು,ಇದೇ ಹೊತ್ತಿಗೆ ಕಲ್ಯಾಣ ನಾಡಿನ ಶರಣ ಸಾಹಿತ್ಯ ಪರಿಷತ್ತಿನ ಸಮ್ಮೇಳನ ಜರುಗಿದವು.೧೯೭೫ ಜೂನ್ ೨೫ರಂದು ಪ್ರಧಾನಿ ಇಂದಿರಾ ಗಾಂಧಿ ತುರ್ತು ಪರಸ್ಥಿತಿ ಜಾರಿಗೊಳಿಸಿದರು.ಇದರ ವಿರುದ್ಧ ಚಳವಳಿ, ಲೇಖನ ಬರೆದು ಪ್ರತಿಭಟಿಸಿದರು. ಜೆಪಿಯವರ ಮುಂ ದಾಳತ್ವದಲ್ಲಿ ಚಳವಳಿ ಪ್ರಾರಂಭವಾಯಿತು.ಗುಲಬ ರ್ಗಾ ಸಮಾಜವಾದಿಗಳಾದ ವೈಜನಾಥ ಪಾಟೀಲ, ಎಸ್.ಕೆ.ಕಾಂತಾ,ಬಿ.ಆರ್.ಪಾಟೀಲ ಸೇರಿದರು.ಜನಪ ರ ವಿಚಾರಧಾರೆಯ ಸೂಗಯ್ಯನವರನ್ನು ಕಂಡು ಸಂ ಪೂರ್ಣ ಕ್ರಾಂತಿಯ ಸಂಚಾಲಕರನ್ನಾಗಿ ನೇಮಿಸಿದರು.
ಎಚ್.ಟಿ.ಸಾಂಗ್ಲಿಯಾನರ ಚಿಕ್ಕಮಗಳೂರು ವರ್ಗಾವ ಣೆ ರಹಸ್ಯ ಸ್ಫೋಟ ಎಂದು ಕರ ಪತ್ರ ಬರೆದು ಹಂಚಿದ ವರು. ವಿಧಾನ ಸಭೆಯಲ್ಲಿ ಚರ್ಚೆಯಾಗಿ ಸರಕಾರ ಶೋಧ ಮಾಡಿದರು ಬರೆದು ಹಂಚಿದವರು ಸೂಗಯ್ಯ ನವರು ಎಂದೂ ಯಾರಿಗೂ ಗೊತ್ತಾಗಲಿಲ್ಲ.
ಸಮುದಾಯ ಜಾಥಾ:ಜನಪರ ಕಾಳಜಿ ಹೊಂದಿದ ಸೂಗಯ್ಯನವರು ೧೯೭೯ರಲ್ಲಿ ಸಾಂಸ್ಕೃತಿಕ ಜಾಥಾ ಒಂದು ತಿಂಗಳ ಕಾಲ ಹಳ್ಳಿಹಳ್ಳಿಯಲ್ಲಿ ಪಟ್ಟಣ,ನಗರಗ ಳಲ್ಲಿ ಜಾಗೃತಿ ಮೂಡಿಸಿದರು.ಬೀದರ ತಂಡದಿಂದ ಸೂ ಗಯ್ಯನವರು ಎಂ.ಎಸ್.ಸತ್ಯು ಉದ್ಘಾಟಿಸಿದರು. ಆಗ ಬೀದಿಯಲ್ಲಿ ನಾಟಕ ಪ್ರದರ್ಶನ,ಬೆಲ್ಚಿ,ಸಂಗಪ್ಪನ ಕೊಲೆ ಪ್ರಕರಣ,ಚೆಸ್ನಾಲಾ ಗಣಿ ದುರಂತ,ಹೈದರಾಬಾದ್ ಗೋ ಲಿ,ಬುರುಡೆ ಬಾಬಾನ ಕಥೆ,ಬೆಳೆದವರು,ಕತ್ತಲೆಯ ದಾರಿ ದೂರ ಮೊದಲಾದ ನಾಟಕಗಳಲ್ಲಿ ಪಾತ್ರ ಮಾಡಿ ದವರು.ನಾಟಕ ಮುಗಿದ ಮೇಲೆ ಅಲ್ಲಿಯ ಸ್ಥಳೀಯ ರಾಜಕಾರಣಿಗಳು, ಸಮಾಜ,ಚಿಂತಕರು ನಾಗರೀಕರು,ಕಾರ್ಯಕರ್ತರೊಂದಿಗೆ ಚರ್ಚೆ ಮಾಡಿ ರಾಜಕೀಯ ಬದಲಾವಣೆಗೆ ಕಾಣೀಭೂತರಾದರು.
ನವಲಗುಂದ ರೈತರ ಕರ ನಿರಾಕರಣೆ,ಗೋಲಿಬಾರ್, ಸಮುದಾಯ ಇದನ್ನ ನೋಡಿ ರೈತ ಕಾರ್ಮಿಕರತ್ತ ಸಮುದಾಯ ಸಾಂಸ್ಕೃತಿಕ ಜಾಥಾ, ಹದಿನೈದು ದಿವಸ ಎಲ್ಕರೊಂದಿಗೆ ಸೇರಿ ಭಾಷಣ,ಅಭಿನಯದಲ್ಲಿ ಪಾಲ್ಗೊ ಂಡವರು.ರೈತಪರ ಹೋರಾಟದಲ್ಲಿ ಪಾಲ್ಗೊಂಡರು.ವಿ ದ್ಯಾರ್ಥಿ ರೈತ ಸಂಘದ ಸಂಚಾಲಕರಾಗಿ ನಂಜುಂಡ ಸ್ವಾಮಿಗಳು ನೇಮಕ ಮಾಡಿದರು.ರೈತಪರ ಕೆಲಸ ಹಸಿ ರು ಶಾಲುಹೊದ್ದು ನಿರ್ವಹಿಸಿದರು.
ಪತ್ರಿಕಾ ವರದಿಗಾರರಾಗಿ:ಗ್ರಿನೋಬಲ್ಸ, ಸತ್ಯಕಾಮ,ಶಾ ಸನ,ಪತ್ರಿಕೆ ಗೆ ಕಬನ,ಕಥೆ,ಲೇಖನ,ವರದಿ ಮಾಡುತ್ತಾ ಬಂದಿದ್ದಾರೆ. ಪಿ.ಲಂಕೇಶರು ನೀವು ಹಳ್ಳಿ ಸುತ್ತಿ ನೋಡಿ ದ ಸಮಸ್ಯೆಗಳ ಕುರಿತು ಲೇಖನ ಕಳಿಸಲು ಹೇಳಿದರು ಮೂರು ದಿನಗಳಲ್ಲಿ ಟೆಲಿಗ್ರಾಂ ಕೊಟ್ಟುನಜ್ಮಸ ಭಾಂಗಿ ಶಿಕ್ಷಕಿಯ ಮೇಲೆ ಹಲ್ಲೆಯ ಬಗ್ಗೆ ವಿಜಯಪುರಕ್ಕೆ ಹೋ ಗಿ ವರದಿಯನ್ನು ತಯಾರಿಸಿ ಕಳಿಸಿದಾಗ ಗಮನ ಸೆಳೆದರು.ಕನ್ನಡ ಭಾಷಾ ಚಳವಳಿಯಲ್ಲಿ ಸಂಸ್ಕೃತ ಭಾಷೆಗಿಂತ ಕನ್ನಡ ಭಾಷೆಗೆ ಆದ್ಯತೆ ನೀಡಲಿ ಕನ್ನಡ ಶಕ್ತಿ ಕೇಂದ್ರದ ಮೂಲಕ ಪ್ರತಿಭಟನೆಗೆ ಮುಂದಾದರು.ಗುಲ ಬರ್ಗಾ ನಗರ ಸಭೆ ಮುಂದೆ ಸತ್ಯಾಗ್ರಹ ಕುಂತಾಗ ಎಲ್ಲ ರಾಜಕಾರಣಿಗಳು ಬಂದು ಹೇಳಿದರೂ ನಿಲ್ಲಿಸಲಿಲ್ಲ ಕೊ ನೆಗೆ ಪ್ರಥಮ ಭಾಷೆಯಾಗಿ ಕನ್ನಡ ಕಲಿಸಲು ಕಡ್ಡಾಯ ಮಾಡಿದಾಗ ಗೋಕಾಕ ಚಳವಳಿ ಕೈಬಿಡಲಾಯಿತು.
ವಿಶ್ವವಿದ್ಯಾಲಯ ಲಾಂಛನ ಹೋರಾಟ: ಗುಲಬರ್ಗಾ ವಿಶ್ವವಿದ್ಯಾಲಯ ೧೯೮೦ರಲ್ಲಿ ಸ್ವತಂತ್ರವಾಯಿತು. ಹಂಪಿ ಕಲ್ಲಿನ ರಥ ಮತ್ತು ಅಮೃತಂ ವಿದ್ಯಂ ಎಂದು ನಾಮಕರಣವಾದಾಗ ಪ್ರತಿಭಟಿಸಿದ ಹಿರೇಮಠರು ವಿದ್ಯೆಯೇ ಅಮೃತ ಎಂದು ಮರು ಬದಲಾಯಿಸಿದರು.
ವೃತ್ತಿ : ಇವರು ಪ್ರತಿನಿತ್ಯ ಹೋರಾಟಮಯ ಜೀವನ ಕಂಡವರು.ಎಸ್.ಕೆ.ಕಾಂತಾ,ಕೆ.ಬಿ.ಶಾಣಪ್ಪ,ಬಾಪುಗೌ ಡ ದರ್ಶನಾಪೂರ ಇವರೆಲ್ಲ ಜನತಾ ಪಕ್ಷದ ಶಾಸಕರಾಗಿ ಆಯ್ಕೆ ಹೊಂದಿದರು.ಇವರ ಹಿಂದೆ ದುಡಿದ ಹಿರೇಮಠ ಅವನ್ನು ರಾಜಕೀಯದಲ್ಲಿ ಮುಂದುವರಿಸೋಣ ಎಂದ ರು.ಅದಕ್ಕೆ ವೈಜನಾಥ ಪಾಟೀಲ, ಡಾ.ಬಿ.ಜಿ.ಜವಳಿ ಸಹಮತ ಕೊಟ್ಟರು ಇದಕ್ಕೆ ಒಪ್ಪದಿದ್ದಾಗ ಯಾವುದೋ ನಿಗಮ ಮಂಡಳಿಯ ಸದಸ್ಯರಾಗಿ ಮಾಡೋಣವೆಂದರೆ ಇದಕ್ಕೂ ಒಪ್ಪದೇ ನನಗೆ ಸಾಮಾಜಿಕ ಪರಿವರ್ತನೆಗೆ ಹಳ್ಳಿ ಸುತ್ತಿದೆ.ಈಗ ಗ್ರಾಮೀಣ ಮಕ್ಕಳಿಗೆ ಪಾಠದ ಜೊತೆ ಸಮಾಜ ಪರಿವರ್ತನೆಯ ಚಿಂತನೆ ಹೇಳುವೆ ಎಂ ದವರ ಮಾತು ಕೇಳಿ ಡಾ.ಜವಳಿಯವರು ವೈಜನಾಥ ಪಾಟೀಲ ರಿಗೆ ಹೇಳಿ ಶಿಕ್ಷಣ ಮಂತ್ರಿ ಗೆ ಕೇಳಿ ಹೈ.ಕ.ಶಿ. ಸಂಸ್ಥೆಗೆ ಚಿಂಚೋಳಿಯಲ್ಲಿ ಕಾಲೇಜು ತೆರೆಯಲು ಸೂ ಚಿಸಿ ಅಲ್ಲಿಗೆ ಸೂಗಯ್ಯನವರನ್ನ ಉಪನ್ಯಾಸಕ ಜೊತೆ ಪ್ರಾಚಾರ್ಯ ಹುದ್ದೆಗೆ ನೇಮಿಸಿ ಆದೇಶ ನೀಡಿದಂತೆ ಅವರು ಹೋಗಿ ಕರ್ತವ್ಯ ಪರಿಪಾಲನೆ ಮಾಡಿ ಕಾಲೇಜ ಕಟ್ಟಿ ಬೆಳೆಸಿದರು.ಆಗ ವೀರೇಂದ್ರ ಪಾಟೀಲ ಉದ್ಘಾಟಿ ಸಿದರು.ಅನುದಾನಕ್ಕೆ ಒಳಪಡಿಸಿದರು.ವಿಭಾಗ ಮಟ್ಟ ದ ವಾಲಿಬಾಲ್ ಕ್ರೀಡಾಪಟು ಆಯ್ಕೆ ಕಾಲೇಜು ಆವರಣದಲ್ಲಿ ನಡೆದು ಇತಿಹಾಸವಾಯಿತು.ಎನ್.ಎಸ್ ಎಸ್.ಶಿಬಿರ,ಸಾಹಿತ್ಯ, ಸಾಂಸ್ಕೃತಿಕ ಅರಿವು ಮೂಡಿಸಿ ಕಸಾಪ ಸಮ್ಮೇಳನ ಆಯೋಜಿಸಿದರು.ಚಿಂಚೋಳಿಯ ವಿದ್ಯಾರ್ಥಿಗಳು, ಜನರು ಇಂದಿಗೂ ನೆನಪಿಸುತ್ತಾರೆ. ೧೯೯೬ರಲ್ಲಿ ಇದೇ ಶಿಕ್ಷಣ ಸಂಸ್ಥೆಯ ಬೀದರ ಬಿ.ವಿ.ಬಿ ಕಾಲೇಜಿಗೆ ವರ್ಗಾವಣೆ ಆದಾಗ ವಿದ್ಯಾರ್ಥಿಗಳು ಸತ್ಯಾ ಗ್ರಹ ನಡೆಸಿದ್ದು ಅಭಿಮಾನ ಉಂಟುಮಾಡುವದು. ಅಲ್ಲಿಯೂ ಸಹ ಪಾಠ,ಆಟ,ಸಾಹಿತ್ಯ, ಸಂಸ್ಕೃತಿ ಜೊ ತೆ ಕಸಾಪ ಕಾರ್ಯಯೋಜನೆ,ವಿಜ್ಞಾನ ಪರಿಷತ್ತಿನ ಕಾ ರ್ಯಕ್ರಮ ಮೂಲಕ ಜನರಲ್ಲಿ ಜಾಗೃತಿ ತಂದರು.
೩೦-೦೫-೨೦೦೮ರಲ್ಲಿ ವಯೋನಿವೃತ್ತಿ ಹೊಂದಿದರು. ನಂತರ ಬೀದರ ಕರ್ನಾಟಕ ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು.
ಕುಟುಂಬ: ಇಲ್ಲೂ ಸಹ ಎರಡು ತಲೆಮಾರಿನಿಂದ ಸುರ ಪುರ ತಾಲೂಕಿನ ದಂಡು ಸೊಲಾಪುರದ ಮಠದಿಂದ ಹೆಣ್ಣು ಕೊಡುಕೊಳ್ಳುವಿಕೆ ಇದೆ.ಹೊಸ ಬೀಗತನ ಮಾಡಿ ಎಂದು ತಮ್ಮ ನಿಲುವಿ ಸ್ಪಷ್ಟಪಡಿಸಿದರು.ಆದರೂ ಅಕ್ಕ ನ ಮಗಳಾದ ಶಾಂತಾಳೊಂದಿಗೆ ವಿವಾಹವಾಯಿತು.ನ ಟರಾಜ್,ಜ್ಯೋತಿ ಇಬ್ಬರು ಮಕ್ಕಳು ಮದುವೆಯಾಗಿ ಅಳಿಯ,ಸೊಸೆ,ಮೊಮ್ಮಕ್ಕಳು ಇದ್ದಾರೆ.ಸಂತೃಪ್ತ ಜೀವ ನ.ಇಡೀ ಕುಟುಂಬ ಎಲ್ಲರೊಂದಿಗೆ ಬೆರೆತು ಬಾಳಿದವ ರು.ಶಿಥಿಲವಾದ ಕುಟುಂಬದ ಮಧ್ಯ ಇಂತಹ ಆದರ್ಶ ಬಾಳು ಸವೆಸಿದವರು.ಅವರ ಪತ್ನಿ ಶಾಂತಕ್ಕನವರು ಎಂದು ಕಾಡಿ ಬೇಡಿದವರಲ್ಲ,ಅವರ ಬೆನ್ನಹಿಂದಿನ ಬೆಳ ಕಾಗಿ ಬಂದವರು.ಸೂಗಯ್ಯನವರು ಆಕಸ್ಮಿಕವಾಗಿ ಹೃದಯಘಾತದಿಂದ ೨೧-೧೧-೨೦೧೭ರಂದು ಲಿಂಗೈಕ್ಯ ರಾದರು.ಅರವತ್ತೇಳು ವರ್ಷದಲ್ಲಿ ಅವರು ಬದುಕಿದ್ದು ಮಹತ್ವದ್ದು.ಅವರು ಬರೆಯವ ಹಾಗೆ ಬದುಕಿದರು.ಬ ದುಕಿ ಬರಹ ಮಾಡಿದವರು.
ಅಂತರ ಕಥಾಸಂಕಲನ,ಜಾನಪದ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು, ಹಾರಕೂಡದ ಶ್ರೀ ಚೆನ್ನಬಸವೇ ಶ್ವರ ಮಠದಿಂದ ಪ್ರಕಟವಾದವು.೧೯೮೪ರಲ್ಲಿ ಉಂಡು ಮಲಗಿದವರು ಕಾವ್ಯ ಸಂಕಲನದ ಮೂಲಕ ಸಾಹಿತ್ಯ ಲೋಕ ಪ್ರವೇಶಿಸಿದತು. ಆಗಾಲೇ ಹೋರಾಟದ ಮೂ ಲಕ ನಾಡಿಗೆ ಗೊತ್ತಾದಂತೆ ಸಾಹಿತ್ಯದ ಮೂಲಕವು ಚಿರ ಪರಿಚಿತರಾದರು.ಅವರ ಮೂಲದ್ರವ್ಯ ಕಾವ್ಯ.ಉಂಡು ಮಲಗಿದವರು,ನೀರು ನೆಲೆ, ಯಾಕೋ ಕೋಗಿಲೆ ಕೂಗುವುದಿಲ್ಲ ಎಂಬ ಮೂರು ಕಾವ್ಯದ ಮೂಲಕ ಕಾವ್ಯಾಸಕ್ತರ ಗಮನಸೆಳೆಯುವ ಮೂಲಕ ಪ್ರಖರ ಕವಿ ಎಂದು ಸಾಬೀತುಗೊಂಡವರು.ಸಾಮಾಜಿಕ ತುಡಿತ, ಆಕ್ರೋಶ,ಜಾತಿ, ಅಸ್ಪೃಶ್ಯತೆ, ರಾಜಕೀಯ, ಬಡತನ, ಮೌಡ್ಯತೆ,ಹಸಿವು,ಹೆಣ್ಣಮೇಲಿನ ಹಿಂಸೆ ವರ್ತಮಾನದ ವಿಷಯಕ್ಕೆ ಸ್ಪಂದಿಸುವ ಕವನ ರಚಿಸಿದ್ದಾರೆ.
ಮನೆ ಮಂದಿರ ಸಂದಿಯಲಿ
ತುಂಬಿದೆ ಗುಂಡಿನ ಸದ್ದು
ಬಾಂಬುಗಳ ಬಲೆಯಲಿ ಸಿಕ್ಕು
ತೊಟ್ಟ ಬಟ್ಟೆ ರಕ್ತಮಯ
ದೇಹದಲಿ ತುಂಬಿವೆ ಗಾಯ
ಜೀವ ಹಿಂಡುವ ಜನರ ಕಂಡು
ಯಾಕೋ ಕೋಗಿಲೆ ಕೂಗುವುದಿಲ್ಲ
ಇಂಥ ಕವಿತೆ ಮೂಲಕ ವರ್ತಮಾನದ ಕವಿ ಕಾವ್ಯ ತೆರೆದು ತೋರಿಸುತ್ತವೆ.
ಅವರ ಕವನ ಸರಿಯಾಗಿ ಅರ್ಥವಾಗುವ ಹಾಗೆ ಜನ ಮನ ತಲುಪಿವೆ.ಇವರ ಕವನಗಳು ನಾಡಿನ ವಿಶ್ವವಿ ದ್ಯಾಲಯಗಳಲ್ಲಿ ಪಠ್ಯ ವಾಗಿವೆ.
ಕತೆಗಳನ್ನು ತುಂಬಾ ಸೊಗಸಾಗಿ ಚಿತ್ರಿಸಿದ್ದಾರೆ.ಅಂತ ರ ೧೯೯೨ರಲ್ಲಿ ಪ್ರಕಟವಾಯಿತು.ಸ್ವಾತಂತ್ರ್ಯ ಪೂರ್ವ ನಂತರದ ಜನಜೀವನ ಚಿತ್ರಣ ಹೊಂದಿವೆ.ಹುಳುಗಳು ಶಹಪುರ,ಜೇವರಗಿಯಲ್ಲಿ ನಡೆದ ತೊಗರಿ ಬೆಳೆಗೆ ನಾಶ ವಾದಚಿತ್ರಣವಿದೆ.ಬೇವುಕಚ್ಚಿದ ಬಾಯಿ ಕತೆಗಳು ಜಾಗ ತೀಕರಣದ ಹಿನ್ನೆಯ ಹಳ್ಳಿ ಬದುಕು ಹೇಗಾಗಿದೆ ಎಂಬ ವಾಸ್ತವತೆ ಅಡಗಿದೆ.ಅಂತರಂಗದ ಗುಡಿಯ ಒಳಗೆ ಈ ಕಥೆಗಳು ನೀರಾವರಿ ಯೋಜನೆಯಿಂದ ತತ್ತರಿಸಿದ ರೈತ ಜೀವನ ಮುಖಾಮುಖಿಯಿದೆ.ನೀನ್ಯಾಕೋ ನಿನ್ನ ಹಂಗ್ಯಾಕೋ,ಕಂಗಳ ಮುಂದಣ ಕತ್ತಲೆ ಬಹು ವಿಶಿಷ್ಟ ಸಂವೇದನೆಯ ಕಥೆಗಳಾಗಿವೆ.ಆರು ಕಥಾ ಸಂಕಲನ ಪ್ರಕಟಿಸಿ ಭಾಷೆ,ವಸ್ತು, ತಂತ್ರ,ಶೈಲಿಗಳಿಂದ ಎಲ್ಲಾ ಬದುಕಿನ ನಾನಾ ಮಗ್ಗುಲುಗಳನ್ನು ವಿವರಿಸುತ್ತವೆ.
ಐದು ಬೀದಿನಾಟಕಗಳು ರಚಿಸಿದ ಹಿರೇಮಠರ ಸ್ವತಃ ಕಲಾವಿದ,ನಟ ಆದ್ದರಿಂದ ಬೀದಿಗಾಗಿ ಬರೆದ ಅಕ್ಷರ, ಮೌಢ್ಯತೆ,ಅಂಧಾನುಕರಣೆ,ದೇವದಾಸಿ ಪದ್ಧತಿ,ಒಳಗೆ ಸಂತೆಯಲ್ಲಿ ಶಿಕ್ಷಣ ಇವತ್ತಿನ ಶಿಕ್ಷಣದ ಸ್ಥಿತಿಗತಿಯನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ.ವಯಸ್ಕರ ಶಿಕ್ಷಣದ ಮೂಲಕ ಕಲಿಕೆಯ ಮಹತ್ವ ಸಾರಿದ್ದಾರೆ.ಮತದಾನ ಗ್ರಾ ಮೀಣ ಪ್ರದೇಶದಲ್ಲಿ ಚುನಾಚಣೆಗಳು ಹೇಗೆ ಹಾದಿ ತಪ್ಪಿಸುತ್ತವೆಂಬುದನ್ನು ಉದಾರವಾಗಿ ವಿವರಿಸಿದ್ದಾರೆ.
ರೈತರ ಆತ್ಮಹತ್ಯೆಯು ಹೇಗೆ ಸಾಲ ಕೊಟ್ಟ ಬ್ಯಾಂಕ್ ಬೆನ್ನು ಬಿಡದೇ ಹತ್ತುವುದು.ರೈತರ ಸ್ಥಿತಿಯನ್ನು ಬಗೆಹರಿಸುವಲ್ಲಿ ವಿಫಲರಾದ ಬಗೆ ತೋರಿಸುತ್ತದೆ. ಪರಿ ಸರ ರಕ್ಷಣೆ ಇವತ್ತು ಅತ್ಯಂತ ಅವಶ್ಯವೆಂಬುದು ತಿಳಿಸು ವ ಮಹತ್ವದ ನಾಟಕ.ಇವತ್ತಿನ ಢಾಬಿಕತೆಯಲ್ಲಿ ಸ್ವಾಮಿ ಗಳು ಮಠಾದೀಶರು ಹೇಗೆ ಅವನತಿಗೆ ಸಮಾಜ ತರುವ ರೆನ್ನುವುದನ್ನು ವೇಷಧಾರಿಯಲ್ಲಿ ಚಿತ್ರಿಸಿದ್ದಾರೆ.ಜನಮ ನ್ನಣೆಯ ಜೊತೆ ಸಮಕಾಲೀನ ಪ್ರಜ್ಞೆ ಎತ್ತಿ ಹಿಡಿದಿವೆ.
ಜೀವನ ಚರಿತ್ರೆ:ನಮ್ಮ ಶರಣರು,ಸಂತರು,ಮಹಾತ್ಮ ರು,ಸಾಧಕರು ಮಾಡಿದ ಜೀವನ, ಬರಹ,ಬದುಕಿನ ಮೌಲ್ಯಗಳು ಜನಮಾನಸದಲ್ಲಿ ನೆಲೆ ನಿಲ್ಲುವ ಹಂತ ಚರಿತ್ರೆಗಳು ಮಾಡುತ್ತವೆ.ಉರಿಲಿಂಗಪೆದ್ದಿ, ಕಿನ್ನರಿ ಬ್ರಹ್ಮಯ್ಯ,ಎಡೆಯೂರು ಸಿದ್ಧಲಿಂಗೇಶ್ವರ, ಹೇಮರೆಡ್ಡಿ ಮಲ್ಲಮ್ಮ,ತಿಂಥಣಿ ಮೊನಪ್ಪಯ್ಯ, ಗುರುನಾನಕ, ಇಂಥದೊಂದು ಚರಿ ತ್ರೆ ಕಟ್ಟುವಾಗ ಸಂಪೂರ್ಣ ಮಾಹಿತಿ,ಅಧ್ಯಯನ, ಸಂ ಗ್ರಹದಿಂದ ವೈಶಿಷ್ಟ್ಯ ಪೂರ್ಣವಾಗಿ ದಾಖಲಿಸಿದ್ದಾರೆ.
ಆಧುನಿಕ ವಚನ: ಹನ್ನೆರಡನೆಯ ಶತಮಾನದ ಶರಣರು ವಚನ ಸಾಹಿತ್ಯವನ್ನು ರಚಿಸಿದವರು.ಅವರ ಮುಂದುವರಿಕೆಯಾಗಿ ಆಧುನಿಕ ವಚನಗಳು ರಚನೆ ಯನ್ನು ಕವಿಗಳು ಬರೆದು ಶರಣರ ಪರಂಪರೆಯನ್ನು ಮುಂದುವರೆಸಿಕೊಂಡು ಬಂದರು.ರಾಯಚೂರು ಜಿಲ್ಲೆ ಯ ದೇವದುರ್ಗದ ಆದಿಮಾತೆಪ್ಪ ಮೊಟ್ಟಮೊದಲ ವಚನಕಾರ.ಹರ್ಡೇಕರ ಮಂಜಪ್ಪ,ರಂಗಣ್ಣ,ಸಿದ್ಧಯ್ಯ ಪುರಾಣಿಕರಂಥವರು ಅಲ್ಲದೇ ಇಂದು ಎಂಟನೂರಕ್ಕು ಹೆಚ್ಚು ವಚನ ಕಾರರು ಬರೆಯುತ್ತಿದ್ದಾರೆ. ಆ ಸಾಲಿನಲ್ಲಿ ಸೂಗಯ್ಯನವರು ಒಬ್ಬರು.ಸುವರ್ಣ ಮಹೋತ್ಸವದ ಸೂಗೂರೇಶ್ವರ ಎಂಬ ಅಂಕಿತದಲ್ಲಿ ೩೦೭ ವಚನಗಳು
ಸೂಗೂರೇಶ್ವರ ವಚನಗಳು ಎಂಬ ಸಂಕಲನ ಪ್ರಕಟಿಸಿ ದ್ದಾರೆ.ಅವರ ವಚನದಲ್ಲಿ ಜ್ಞಾನ,ವಿಜ್ಞಾನ, ವೈಚಾರಿಕತೆ, ಮಾನವೀಯತೆಯನ್ನು ಎತ್ತಿ ತೋರಿಸುವ ವಚನಗಳು. ಕೊರಾನಾಗಿಂತ ಮುಂಚೆಯೇ" ಸುಲಿಗರ ಮಾಡುವ ಡಾಕ್ಟರ್/ಬಹುದೊಡ್ಡ ಹಣದ ರೋಗಿ ನೊಡಾ" ಎಂದು ಬರೆದವರು.ಬಾಡಿಗೆ ಎಲ್ಲಾ ದೊರೆತರೂ ಸಹ ಇಂದು ಬಾಡಿಗೆ ತಂದೆ, ತಾಯಿ,ಮಕ್ಕಳು ದೊರೆಯಿವುದು ಕಂಡ ದಿಲಾದ ಬಗ್ಗೆ ಚಿಂತನೆ ಇದೆ.ರೈತರು,ಅಸ್ಪೃಶ್ಯತೆ, ಈ ವಾಸ್ತವತೆಗೆ ಹತ್ತಿರವಿರುವ ವಚನ ಬರೆದು ಗಮನ ಸೆಳೆದವರು.
ಜಾನಪದ ಸಾಹಿತ್ಯ: ಜಾನಪದ ಸಾಹಿತ್ಯ ಸಂಗ್ರಹ, ಸಂ ಪಾದನೆ,ಪ್ರಕಟಣೆ,ಸಂಶೋಧನೆ, ವಿಮರ್ಶೆಯನ್ನು ಹಂ ತ ಹಂತವಾಗಿ ಮಾಡಿದ ಅಪೂರ್ವ ಜಾನಪದ ವಿದ್ವಾಂ ಸರಲ್ಲಿ ಸೂಗಯ್ಯನವರು ಒಬ್ಬರು.ಪ್ರಾರಂಭದಲ್ಲಿ ಉತ್ತರ ಕರ್ನಾಟಕ ಜಾನಪದ ಯೋಜನೆಯ ಸಹಾಯ ಕ ಸಂಶೋಧಕರಾಗಿ ಹಳ್ಳಿ ಹಳ್ಳಿಗಳಲ್ಲಿ ತಿರುಗಿ ಸಂಗ್ರಹ ಮಾಡಿದವರು.ಅದೇ ಜ್ಞಾನ ಅವರನ್ನು ಬಹು ಅಪರೂ ಪಾ ಕಾರ್ಯ ಮಾಡಲು ಸಾಧ್ಯವಾಯಿತು.ಮೈಲಾರಲಿಂ ಗನ ಸಾಹಿತ್ಯ ಮತ್ತು ಸಂಪ್ರದಾಯ, ಸಣ್ಣಾಟಗಳ ವಸ್ತು ಮತ್ತು ತಂತ್ರ,ವಚನ ಸಾಹಿತ್ಯದಲ್ಲಿ ಜಾನಪದ ಅಂಶಗ ಳು,ಹಾಗೂ ಬಯಲಾಟದ ಸಾರಥಿ ಕುರಿತು ನಾಲ್ಕು ಬಾರಿ ಸಂಶೋಧನೆ ಮಾಡಲು ನೊಂದಣಿ ಮಾಡಿದರೂ ಅವರು ಮಾಡಿರುವರು,ಇವರು ಮಾಡಿರುವರು ಎಂದು ಸಂಶೋಧನೆ ಮಾಡಲು ಬದಲಾವಣೆಗೊಂಡು ಇವರ ಮನಸ್ಸಿಗೆ ನೋವಾಗಿ,ಪಿಎಚ್.ಡಿ ಮಾಡುವುದೆ ಬಿಟ್ಟು ತಾವೇ ಸಂಶೋಧನಾ ಪುಸ್ತಕ ಪ್ರಕಟಿಸಲು ಮುಂದಾದ ರು.
ಜನಪದ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು,ಜನಪದ ವೈದ್ಯ ಪದ್ಧತಿ, ದೇವದೇವ ವನ,ಜನಪದ ಒಗಟಿನ ಕಥೆ ಗಳು,ಜಾನಪದ ಸಂಸ್ಕೃತಿ, ಮನೆಮದ್ದು,ಜನಪದ ಸಾಹಿತ್ಯದಲ್ಲಿ ಶೃಂಗಾರ ಗೀತೆಗಳು,ಜಾನಪದ ಸಂವಹನ,ಮುಂತಾದ ಜಾನಪದಕ್ಕೆ ಸಂಬಂಧಿಸಿದಂತೆ ಕೃತಿ ಪ್ರಕಟಿಸಿ ಜಾನಪದ ತಜ್ಞ ರಾದವರು.
ವಚನ ಸಾಹಿತ್ಯ, ವಿಮರ್ಶೆ,ಸಂಶೋಧನೆ,ಶಿಶುಪ್ರಾಸಗ ಳು,ಪ್ರಬಂಧಗಳು, ಚಿಂತನ,ಚರಿತ್ರೆ, ಸಂಪಾದನೆ,ಸೃಜ ನಶೀಲ ಸಾಹಿತಿಯಾಗಿ ಕಾವ್ಯ,ವಚನ,ನಾಟಕ,ಕಥೆಗ ಳನ್ನು ಬರೆದೆ ಸಾಹಿತಿಯಾದವರು.
ಇವರ ಸಾಹಿತ್ಯ ಸೇವೆಯನ್ನು ಪರಿಗಣಿಸಿದಾಗ ಸಿಗ ಬೇಕಾದ ಗೌರವ ಇವರಿಗೆ ದೊರೆಯಲಿಲ್ಲ. ಪ್ರತಿಭೆಗೆ ಈ ದೇಶದಲ್ಲಿ ಅವಕಾಶವಿಲ್ಲ,ಆದರೂ ಬೀದತ ಜಿಲ್ಲೆಯಲ್ಲಿ ಅವರ ಸಾಹಿತ್ಯ ಕೃತಿಗಳು ಹೊರಬಂದವು.ಅವರು ಜಿಲ್ಲೆ ಯ ತುಂಬಾ ಓಡಾಡಿ,ಸಾಹಿತ್ಯ ಸಂಸ್ಕೃತಿ ಬೆಳೆಸಿದರು. ಅನೇಕ ಯುವ ಬರಹಗಾರರಿಗೆ ಮಾರ್ಗದರ್ಶನ ಮಾಡಿ ಉತ್ತಮ ಸಾಹಿತಿ,ಕವಿಗಳಾಗುವಲ್ಲಿ ಪಾತ್ರವಿದೆ.ತಮ್ಮ ಕೈಯಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಯಾವ ಜಾತಿ,ಮತ,ನೋಡದೆ ಪ್ರತಿಭೆ ನೋಡಿ ಬೆಳೆಸಿದ ಪರಿ ನಿಜ ಜಂಗಮನ ಕಾರ್ಯವಾಗಿದೆ.ಹಿರೇಮಠರ ಕಾರ್ಯಕ್ಕೆ ಬೀದರ ಜಿಲ್ಲೆಯಲ್ಲಿ ಗೌರವ ದೊರೆಯಲಿಲ್ಲ ಶಿಕ್ಷಣ ಸಿರಿ,ಸುವರ್ಣ ಕರ್ನಾಟಕ, ಸುವರ್ಣ ಗಡಿ ಸಿರಿ, ಸುವರ್ಣ ಕರ್ನಾಟಕ, ಜಾನಪದ ತಜ್ಞ,ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳು ದೊರಕಿವೆ.ಚಿಂಚೋಳಿ ತಾಲೂಕಾ ಕನ್ನಡ ಸಾಹಿತಗಯ ಸಮ್ಮೇಳನದ ಸರ್ವಾಕ್ಷರಾಗಿದ್ದರು.ಜಾನಪದ ಸಮ್ಮೇಳನ ಯಾದಗಿರಿಯ ಸರ್ವಾಧಗಯಕ್ಷ ಗೌರವ ದೊರೆತಿವೆ. ಅವರ ಕುರಿತು ಎಂ.ಫಿಲ್,ಪಿಎಚ್.ಡಿ ಮಾಡಿದ್ದಾರೆ.ಇವರ ಸಾಹಿತ್ಯವ ನ್ನು ಗುರುತಿಸಿ ಮೊದಲು ಹೊರತಂದವರು ಡಾ.ಗವಿ ಸಿದ್ಧಪ್ಪ ಪಾಟೀಲರು.ಸೂಗಯ್ಯ ಹಿರೇಮಠರ ಸಾಹಿತ್ಯಾ ವಲೋಕನ,ಸುಗಂಧ ಅಭಿನಂದನಾ ಗ್ರಂಥ ಹಾರಕೂಡ ಶ್ರೀ ಚನ್ನಬಸವೇಶ್ವರ ಹಿರೇಮಠ ಸಂಸ್ಥಾನದಿಂದ ಹೊರ ತಂದರು.ಜನಪದ ಜಂಗಮ ಎಂಬ ಸಂಸ್ಮರಣ ಗ್ರಂಥ ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನದಿಂದ ಹೊರ ತಂದರು. ಆಮೇಲೆ ಸಗರನಾಡು ಸೂಗಯ್ಯನವರ ಪ್ರತಿಷ್ಠಾನ ಮಾಡಿ ಮನು ಸಗರ,ಸ್ವಾಮಿರಾವ್ ಕುಲಕರ್ಣಿ,ಚಿ.ಸಿ. ನಿಂಗಣ್ಣನವರು ಪ್ರಶಸ್ತಿಯನ್ನು ಡಾ.ಚೆನ್ನವೀರ ಶಿವಾಚಾರ್ಯ ಮಹಾಸ್ವಾಮಿಗಳವರ ನೇತೃತ್ವದಲ್ಲಿ ಕೊ ಡಮಾಡುತ್ತಾ ಬಂದಿದ್ದಾರೆ. ಈಗ ಅವರ ಮಗ ನಟರಾಜ ಹಾಗೂ ಇತರರು ಸೇರಿ ಪ್ರತಿಷ್ಠಾನ ಮುಂದು ವರಿಸಿಕೊಂಡು ಹಾರಕೂಡ ಶ್ರೀಗಳವರ ದಿವ್ಯ ಪಾವನ ಸಾನಿಧ್ಯದಲ್ಲಿ ನಡೆಯುತ್ತಿದೆ.ಸಗರನಾಡ ಸಿರಿ ಎಂಬ ಪು ಸ್ತಕವನ್ನ ಪ.ಮನುಸಗರ ಹೊರತಂದಿದ್ದಾರೆ.ಅವರ ಸಮಗ್ರ ಸಾಹಿತ್ಯ ಸಂಪುಟ ಹೊರಬರಬೇಕಾಗಿದೆ. ಆದರೂ ವಾಚಿಕೆಯ ಮೂಲಕ ಅವರ ಬರಹದ ವೈಶಿಷ್ಟ್ಯ ತೆಯನ್ನು ಕಾಣಬಹುದು.ಅಲಕ್ಷ್ಯಕ್ಜೆ ಒಳಗಾದ ಸಾಹಿತಿ,ನೇರ,ನಿಷ್ಟುರ,ದಾಕ್ಷಿಣ್ಯದ,ಹಠ,ಛಲವಾದಿ. ಸಾಹಿತಿ,ಹೋರಾಟಗಾರ, ಎಲ್ಲಾ ಆದಂತೆ ಅವರೊಬ್ಬ ಮಾನವೀಯತೆ ಮನುಷ್ಯರಾಗಿದ್ದವರು.
ಡಾ.ಗವಿಸಿದ್ಧಪ್ಪ ಎಚ್.ಪಾಟೀಲ, ಸಾಹಿತಿ,ಕಲಬುರಗಿ
ಇಂದು ಅವರ ಹೆಸರಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ ನೀಡಲಾಗುವ ನಿಮಿತ್ತ ಲೇಖನ
,
