ವಾಡಿ ಯಲ್ಲಿ ಸಂಗೊಳ್ಳಿ ರಾಯಣ್ಣನ 226 ಜಯಂತಿ ಆಚರಣೆ
ವಾಡಿ ಯಲ್ಲಿ ಸಂಗೊಳ್ಳಿ ರಾಯಣ್ಣನ 226 ಜಯಂತಿ ಆಚರಣೆ
ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ 226 ಜಯಂತಿ ಆಚರಿಸಲಾಯಿತು.
ಇದೇ ವೇಳೆ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ ರಾಯಣ್ಣನ ಜನ್ಮದಿನವು ಸ್ವಾತಂತ್ರ್ಯದಿನದಂದು,
ಪುಣ್ಯತಿಥಿಯು ಗಣರಾಜ್ಯೋತ್ಸವ ದಂದು ಬರುವುದು ತುಂಬಾ ವಿಶೇಷ ವಾಗಿದೆ ಎಂದರು.
ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ಗ್ರಾಮದಲ್ಲಿ 1798ರ ಆಗಸ್ಟ್ 15ರಂದು ರಾಯಣ್ಣ ಜನಿಸಿದ್ದ.1831 ಜನವರಿ 26ರಂದು ಆತನನ್ನು ಖಾನಾಪುರ ತಾಲೂಕಿನ ನಂದಗಡದಲ್ಲಿ ಗಲ್ಲಿಗೇರಿಸಲಾಯಿತು.
ಗಲ್ಲಿಗೇರಿಸುವ ಮುನ್ನ ಬ್ರಿಟಿಷ್ ಅಧಿಕಾರಿಗಳು ನಿನ್ನ ಕಡೆಯ ಆಸೆ ಏನೆಂದು ಕೇಳಿದಾಗ, ಭಾರತದಲ್ಲಿಯೇ ಮತ್ತೆ ಹುಟ್ಟಿಬರಬೇಕು. ಪರದೇಶಿ ಬ್ರಿಟಿಷರ ವಿರುದ್ಧ ಹೋರಾಡಿ ಅವರನ್ನು ಭಾರತದಿಂದ ಒದ್ದು ಓಡಿಸಬೇಕು ಎಂದು ಸಿಂಹದಂತೆ ಗರ್ಜಿಸಿದ್ದ ಆ ವೀರನ ದೇಶಭಕ್ತಿ ಎಂದೆಂದಿಗೂ ಮರೆದಂತದ್ದಾಗಿದೆ ಎಂದು ಹೇಳಿದರು.
ಮುಖಂಡರಾದ ಬಸವರಾಜ ಪಂಚಾಳ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿದರು.
ಈ ಸಂಧರ್ಭದಲ್ಲಿ ಯುವ ಮುಖಂಡ ವಿಠಲ ನಾಯಕ ,ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ರವಿ ನಾಯಕ, ಎಸ್ ಸಿ ಮೂರ್ಚಾದ ಅಧ್ಯಕ್ಷ ದೌಲತರಾವ ಚಿತ್ತಾಪುರಕರ್ ಮುಖಂಡರಾದ ಗಿರಿಮಲ್ಲಪ್ಪ ಕಟ್ಟಿಮನಿ,ಹರಿ ಗಲಾಂಡೆ,ಭೀಮಶಾ ಜಿರೋಳ್ಳಿ,ಅರ್ಜುನ ಕಾಳೆಕರ್,ಕಿಶನ ಜಾಧವ,ಅಂಬದಾಸ ಜಾಧವ,ಆನಂದ ಡೌವಳೆ, ಸೋಮು ಚವ್ಹಾಣ,ಹಣಮಂತ ಚವ್ಹಾಣ,ರವಿ ಕಾರಬಾರಿ,ರಾಜು ಪವಾರ,ಪ್ರಕಾಶ ಪುಜಾರಿ,ಅಯ್ಯಣ್ಣ ದಂಡೋತಿ,ಮಲ್ಲಿಕಾರ್ಜುನ ಸಾತಖೇಡ, ಆನಂದ ಇಂಗಳಗಿ,ಭಾರತ ರಾಠೋಡ,ಪ್ರೇಮ ರಾಠೋಡ,
ಮಹೇಂದ್ರ ಕುಮಾರ ಪುಜಾರಿ,ಹೀರಾ ನಾಯಕ,ಸಿದ್ದೇಶ್ವರ ಚೊಪಡೆ, ಸಚಿನ್ ಡೌವಳೆ,
ಯಂಕಮ್ಮ ಗಾಡಗಾಂವ,ನಿರ್ಮಲ ಇಂಡಿ,ಶರಣಮ್ಮ ಯಾದಗಿರಿ,ದೇವಕ್ಕಿ ಪುಜಾರಿ, ಉಮಾಬಾಯಿ ಗೌಳಿ,ಅನ್ನಪೂರ್ಣ ದೊಡ್ಡಮನಿ,ಪ್ರೇಮ ತೆಲ್ಕರ,ಹಿರಾಸಿಂಗ್ ರಾಠೋಡ, ಸೋಮು ಸಿಂಗ ಚವ್ಹಾಣ,ರಾಜು ನಾಯಕ ಸೇರಿದಂತೆ ಇತರರು ಪಾಲ್ಗೊಂಡಿದ್ದರು.