ಛಾಯಾಗ್ರಾಹಕ ಶರಣಪ್ಪ ಹಳ್ಳಿಖೇಡ ನಿಧನ

ಛಾಯಾಗ್ರಾಹಕ ಶರಣಪ್ಪ ಹಳ್ಳಿಖೇಡ ನಿಧನ

ಛಾಯಾಗ್ರಾಹಕ ಶರಣಪ್ಪ ಹಳ್ಳಿಖೇಡ ನಿಧನ

ಕಲಬುರಗಿ: ನಗರದ ವಿದ್ಯಾನಗರ ನಿವಾಸಿ, ಪ್ರಿಲಾನ್ಸ್ ಫೋಟೋಗ್ರಾಫರ್ ಶರಣಪ್ಪ ಹಳ್ಳಿಖೇಡ (ವೇಗವಾಹಿನಿ) ಅವರು ರವಿವಾರ ರಾತ್ರಿ 2.45 ಕ್ಕೆ ಹೃದಯಾಘಾತದಿಂದ ನಿಧನರಾದರು. ಅವರಿಗೆ 61 ವರ್ಷ ವಯಸ್ಸಾಗಿತ್ತು. ಶ್ರೀಯುತರು ತಾಯಿ, ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅವರು ಅಗಲಿದ್ದಾರೆ. ಕಳೆದ 30ಕ್ಕೂ ಹೆಚ್ಚು ವರ್ಷಗಳಿಂದ ಅವರು ಫ್ರೀಲಾನ್ಸ್

ಫೋಟೋಗ್ರಾಫರ್ ಆಗಿ ಸೇವೆ ಸಲ್ಲಿಸಿದ್ದರು. ಮೃತರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಸೋಮವಾರ ಸಂಜೆ 5 ಗಂಟೆಗೆ ಇಲ್ಲಿನ ವೆಂಕಟೇಶ ನಗರದ ಕ್ರಿಶ್ಚನ್ ರುದ್ರಭೂಮಿಯಲ್ಲಿ ನಡೆಯಿತು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.