ರಾಷ್ಟ್ರೀಯ ಅಹಿಂದ ಸಂಘಟನೆಯ ರಾಜ್ಯ ಕಾರ್ಯಾಧ್ಯಕ್ಷರಾಗಿ ಮಾಳಿಂಗರಾಯ ಕಾರಗೊಂಡ ನೇಮಕ
ರಾಷ್ಟ್ರೀಯ ಅಹಿಂದ ಸಂಘಟನೆಯ ರಾಜ್ಯ ಕಾರ್ಯಾಧ್ಯಕ್ಷರಾಗಿ ಮಾಳಿಂಗರಾಯ ಕಾರಗೊಂಡ ನೇಮಕ
.ರಾಷ್ಟ್ರೀಯ ಅಹಿಂದ ಸಂಘಟನೆ ಬೆಂಗಳೂರು ,ಕರ್ನಾಟಕ ಸರ್ಕಾರದ ನೋಂದಣಿ ಸಂಖ್ಯೆ DRB1/SOR/204/2024-2025 ಈ ಸಂಘಟನೆಯ ವತಿಯಿಂದ ಶ್ರೀ ಮಾಳಿಂಗರಾಯ ಹಂಗರಗಾ (ಕೆ ) ಅವರನ್ನು ರಾಷ್ಟ್ರೀಯ ಅಹಿಂದ ಒಕ್ಕೂಟದ ರಾಜ್ಯ ಕಾರ್ಯಕಾರಣಿ ಸಮಿತಿಯು ಒಮ್ಮತದಿಂದ ತೀರ್ಮಾನಿಸಿ
ರಾಜ್ಯ ಕಾರ್ಯಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ(ಕಲಬುರ್ಗಿ ವಿಭಾಗ ಉಸ್ತುವಾರಿ)ಎರಡನೇ ಹಂತದ ಅಹಿಂದ ನಾಯಕರನ್ನ ಗುರುತಿಸುವುದು, ಮತ್ತು ಅವರನ್ನು ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ, ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಮತ್ತು ವೈಯಕ್ತಿಕವಾಗಿ ಬೆಳೆಯಲು ವೇದಿಕೆ ಕಲಿಸುವುದರ ಮೂಲಕ ಅವರನ್ನು ಪ್ರೋತ್ಸಾಹಿಸುವುದು ಈ ಒಕ್ಕೂಟದ ಉದ್ದೇಶವಾಗಿದೆ.
ಶ್ರೀ ಮುತ್ತಣ್ಣ ಶಿವಳ್ಳಿ ,ರಾಜ್ಯಾಧ್ಯಕ್ಷರು ರಾಷ್ಟ್ರೀಯ ಅಹಿಂದ ಒಕ್ಕೂಟ ಬೆಂಗಳೂರು
ಪ್ರೊ. ಬೀರಲಿಂಗೇಶ್ವರ ಪೂಜಾರಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ರಾಷ್ಟ್ರೀಯ ಆಹಿಂದ ಒಕ್ಕೂಟ ಬೆಂಗಳೂರು-
ರಾಜ್ಯ ಕಾರ್ಯಧ್ಯಕ್ಷರುಗಳುಶ್ರೀ ಗುರನಗೌಡ ಎಸ್ ಪಾಟೀಲ ,.ಶಿವಣ್ಣ ಮೈಸೂರು
ರಾಷ್ಟ್ರೀಯ ಅಹಿಂದ ಒಕ್ಕೂಟ ಹಾಗೂ ರಾಜ್ಯ ಕಾರ್ಯಕಾರಣಿ ಸಮಿತಿ ವತಿಯಿಂದ ಇವರಿಗೆ ಅಭಿನಂದನೆಗಳನ್ನು ಸಲ್ಲಿಸಿ ಶುಭ ಹಾರೈಸಿದ್ದಾರೆ ಸಂಘಟನೆಯನ್ನು ಉನ್ನತ ಮಟ್ಟದಲ್ಲಿ ಬೆಳೆಸಲು ಮಾಳಿಂಗರಾಯ ಕಾರಗೊಂಡ ಅವರನ್ನು ರಾಜ್ಯ ಕಾರ್ಯಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆವೆಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ