ವಿಶ್ವನಾಥರೆಡ್ಡಿ ಮುದ್ನಾಳ
ಶ್ರೀ ವಿಶ್ವನಾಥರೆಡ್ಡಿ ಮುದ್ನಾಳ
ಕಲಬುರಗಿಯ ಸರ್ಕಾರಿ ಮಹಿಳಾ ಪದವಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಮಿತ್ರ ಡಾ. ಮಲ್ಲಿಕಾರ್ಜುನ ಶೆಟ್ಟಿ ಅವರು ಅದ್ಯಯನ ಹಾಗೂ ಅಧ್ಯಾಪನದೊಂದಿಗೆ ತಮ್ಮ ಪ್ರತಿಭೆಯನ್ನು ಹೆಚ್ಚಿಸಿಕೊಂಡವರು. ರಾಜ್ಯ, ರಾಷ್ಟ್ರೀಯ ಮತ್ತು ಅಂತರ್ ರಾಷ್ಟ್ರೀಯ ಮಟ್ಟದ ವಿಚಾರ ಸಂಕೀರ್ಣಗಳಲ್ಲಿ ಮಂಡಿಸಿರುವ ಪ್ರಬಂಧಗಳು ಅವರ ಪ್ರೌಢತೆಗೆ ಸಾಕ್ಷಿಯಾಗಿದೆ.
ಹುಟ್ಟು ಹೋರಾಟಗಾರರು, ಕೊಟ್ಟ ಭಾಷೆಯಂತೆ ನಡೆಯುವ ದಿಟ್ಟ ಪುರುಷರು. ಇಟ್ಟ ಹೆಜ್ಜೆಯಂತೆ ಬದುಕನ್ನು ಕಟ್ಟಿಕೊಂಡವರು. ತೊಟ್ಟ ರೂಪದಂತೆ ಪಟ್ಟು ಬಿಡದೆ ಜೀವನವನ್ನು ಮೆಟ್ಟಿ ನಿಂತವರು ಶ್ರೀ ವಿಶ್ವನಾಥರೆಡ್ಡಿ ಮುನ್ನಾಳರು ನಾಡಿನಲ್ಲಿ 'ರೆಡ್ಡಿ ಸಾಹೇಬರು' ಎಂದೇ ಚಿರಪರಿಚಿತರು. ಹುಟ್ಟು ಹೋರಾಟಗಾರರು. ಛಲದಂಕ ಮಲ್ಲರು, ವಚನ ಪರಿಪಾಲಕರು, ನಾಡ-ನುಡಿಗಾಗಿ ನಾಡವರ ಏಳಿಗೆಗಾಗಿ ಜೀವನವಿಡೀ ಹೋರಾಡಿದವರು. ಸಾರ್ವಜನಿಕ ರಂಗದಲ್ಲಿ ಪರಿಶುದ್ಧ ಹಸ್ತರು. ಅಧಿಕಾರಕ್ಕಾಗಿ ಬೆಂಬತ್ತದೆ. ಶ್ರೀ ಹೆಗಡೆಯವರ ಸಂಪುಟದಲ್ಲಿ 'ಸಚಿವ ಸಂಪುಟದ ಮಹರ್ಷಿ'ಗಳೆಂದೇ ಬಿರುದಾಂಕಿತರಾದವರು. ಇಂತಹ ಮಹಾನ್ ಪುರುಷ ಶ್ರೀ ಮುದ್ನಾಳರ ವಿರಾಟ್ ಜೀವನದ ವೈಶಿಷ್ಟ್ಯಗಳನ್ನು ಡಾ. ಮಲ್ಲಿಕಾರ್ಜುನ ಅವರು ತುಂಬಾ ಚೆನ್ನಾಗಿ ನಿರೂಪಿಸಿದ್ದಾರೆ.
ಕ ಶ್ರೀ ರೆಡ್ಡಿಯವರ ಹೋರಾಟಮಯ ಬದುಕನ್ನು ಅದಕ್ಕೆ ಶಕ್ತಿಯಾಗಿ ನಿಂತ ಮಹನೀಯರನ್ನು ಹಾಗೂ ಚಳುವಳಿಗಳ ಬಗ್ಗೆ ವಿವರವಾದ ಮಾಹಿತಿ ನೀಡಿದ್ದಾರೆ. ವಿಶ್ವ ವ್ಯಾಪಾರ ಎನಿಸುವ ಶ್ರೀ ವಿಶ್ವನಾಥರೆಡ್ಡಿಯವರ ಚಿಂತನೆಗಳ ಮೇಲೆ ಬೆಳಕು ಚೆಲ್ಲಿ, ಆ ವಿಚಾರಧಾರೆಗಳು ಚಿರಂತನ ಸ್ಪೂರ್ತಿಯ ಸೆರೆಯಾಗಬಲ್ಲವೆಂಬುದನ್ನು ಸಾಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಡಾ. ಮಲ್ಲಿಕಾರ್ಜುನ ಶೆಟ್ಟಿಯವರ ಈ ಕೃತಿ ಸಾರ್ಥಕತೆಯನ್ನು ಪಡೆದಿದೆ.
ಕಲಬುರಗಿಯ ಹೆಂಬಾಡಿ ಪ್ರಕಾಶನದಿಂದ 2019ರಲ್ಲಿ ಪ್ರಕಟಗೊಂಡ ಈ ಕೃತಿಯಲ್ಲಿ 172 ಪುಟಗಳಿದ್ದು 110 ಬೆಲೆ ನಿಗದಿಪಡಿಸಲಾಗಿದೆ.
ಡಾ. ಶರಣಬಸಪ್ಪ ವಡ್ಡನಕೇರಿ