ಶಿವಮಂದಿರದಲ್ಲಿ ಅಷ್ಠಗಿ,ಪಾಳಾ ಪಾಟೀಲರಿಗೆ ಗೌರವ ಸನ್ಮಾನ

ಶಿವಮಂದಿರದಲ್ಲಿ ಅಷ್ಠಗಿ,ಪಾಳಾ ಪಾಟೀಲರಿಗೆ ಗೌರವ ಸನ್ಮಾನ

ಅಷ್ಠಗಿ,ಪಾಳಾ ಪಾಟೀಲರಿಗೆ ಗೌರವ ಸನ್ಮಾನ 

ಶ್ರೀ ಸುಭಾಶ್ಚಂದ್ರ ಪಾಟೀಲ್ ಸ್ಮಾರಕ ಜನಕಲ್ಯಾಣ ಟ್ರಸ್ಟ್ ಪಾಳಾ ವತಿಯಿಂದ ಆಯೋಜಿಸಿದ್ದ ಶರಣ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನದ ಅಭೂತಪೂರ್ವ ಯಶಸ್ಸಿಗೆ ಟ್ರಸ್ಟ್ ಅಧ್ಯಕ್ಷರು ಹಾಗೂ ಪತ್ರಕರ್ತರಾದ ಶ್ರೀ ಶರಣಗೌಡ ಪಾಟೀಲ್ ಪಾಳಾ ಹಾಗೂ ಸಮ್ಮೇಳನದ ಸಂಚಾಲಕರಾದ ಲೇಖಕ ಹಾಗೂ ಕೃಷಿ ಶ್ರೀ ಪ್ರಶಸ್ತಿ ಪುರಸ್ಕೃತ ಸಾಹಿತಿ ಪ್ರೊ ಯಶವಂತರಾಯ ಅಷ್ಠಗಿ ಅವರಿಗೆ ಕಲಬುರಗಿಯ ಜಯನಗರ ಶಿವ ಮಂದಿರ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಶಿವಮಂದಿರ ಟ್ರಸ್ಟ್ ಅಧ್ಯಕ್ಷರು ಹಾಗೂ ಜನಪರ ಹೋರಾಟಗಾರರಾದ ಶ್ರೀ ಲಿಂಗರಾಜ ಸಿರಗಾಪೂರ್, ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಉಮೇಶ್ ಶೆಟ್ಟಿ, ಪದಾಧಿಕಾರಿಗಳಾದ ಸೂರ್ಯಕಾಂತ ಕೆ ಬಿ, ಬಂಡೆಪ್ಪ ಕೇಸೂರ ಹಾಗರಗಿ, ವಿರೇಶ ದಂಡೋತಿ, ಶ್ರೀಮತಿ ಅನುರಾಧ ಕುಮಾರಸ್ವಾಮಿ, ಶ್ರೀಮತಿ ಸುಜಾತಾ ಭೀಮಳ್ಳಿ, ಸೇರಿದಂತೆ ಜಯನಗರ ಬಡಾವಣೆಯ ಪ್ರಮುಖರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಕಲಬುರಗಿ ಆರಾಧ್ಯ ದೈವ ಮಹಾದಾಸೋಹಿ ಶ್ರೀ ಶರಣಬಸವೇಶ್ವರರ ಕುರಿತ "ಶರಣರ ಶಕ್ತಿ" ಮುಂದಿನ ತಿಂಗಳ ೧೮ ನೇ ತಾಲೂಕಿನಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿರುವ ಚಲನಚಿತ್ರದ ಭಿತ್ತಿ ಪತ್ರ ಬಿಡುಗಡೆ ಮಾಡಲಾಯಿತು...

"ಶರಣರ ಶಕ್ತಿ" ಸಿನಿಮಾ ಬಿತ್ತಿ ಚಿತ್ರ ಬಿಡುಗಡೆ