ಮುಳ್ಳು ಹಾದಿಯ ಪಯಣ
ಮುಳ್ಳು ಹಾದಿಯ ಪಯಣ
ಹಳ್ಳೆಪ್ಪ ಗ್ರಾಮೀಣ ಪ್ರದೇಶದಲ್ಲಿ ಜನಿಸಿ , ಬಡತನದ ಬೇಗೆಯಲ್ಲಿ ಬೇಯ್ದರೂ ವಿದ್ಯೆ ಎಂಬ ಹಣತೆ ಹಿಡಿದು ಉನ್ನತ ವ್ಯಾಸಾಂಗ ಮಾಡುತ್ತಲೇ ಬರವಣಿಗೆಯಲ್ಲಿ ತೊಡಗಿಸಿಕೊಂಡ ಸರಳ, ಸಜ್ಜನಿಕೆಯ ವ್ಯಕ್ತಿ . ವಿದ್ಯಾರ್ಥಿ ದೆಸೆಯಲ್ಲಿಯೇ ಓದುವುದನ್ನು ಹವ್ಯಾಸ ಮಾಡಿಕೊಂಡಿರೋ ಹಳ್ಳೆಪ್ಪಅವರು , ಸಂಶೋಧನೆಯಲ್ಲಿ ತೊಡಗಿಕೊಂಡ ನಂತರ ಬರಹವನ್ನು ಗಂಭೀರವಾಗಿ ತೆಗೆದುಕೊಂಡು ಸಾಹಿತ್ಯ ಲೋಕಕ್ಕೆ ಅದ್ಭುತ ಕೃತಿಗಳನ್ನು ನೀಡಿದ್ದಾರೆ .
ಹಳ್ಳೆಪ್ಪ ಅವರ "ಮುಳ್ಳು ಹಾದಿಯ ಪಯಣ"ಕೃತಿಯು ವೈವಿಧ್ಯಮಯ ಲೇಖನಗಳನ್ನೊಳಗೊಂಡ ಕೃತಿಯಾಗಿದೆ. ಹೆಸರೇ ಸೂಚಿಸುವಂತೆ ಸಂಕಷ್ಟಗಳ ಸರಮಾಲೆ ಹೊತ್ತು ಸಾಗಿದವರ ಬದುಕು, ಬವಣೆ, ಸುಖ ದುಃಖಗಳ ಕೇಂದ್ರೀಕೃತ ಕಥೆ, ಕಾದಂಬರಿ, ಕಾವ್ಯ ಇತ್ಯಾದಿಗಳನ್ನು ಪರಾಮರ್ಶೆಗೆ ಒಳಪಡಿಸೋ ಕಾರ್ಯ ಮಾಡಿದ್ದಾರೆ. ದಲಿತ – ಬಂಡಾಯ, ಸ್ತ್ರೀ ಸಂವೇದನೆ, ಮುಸ್ಲಿಂ ಸಂವೇದನೆ ಮೊದಲಾದವುಗಳಲ್ಲದೆ, ಜನಪದ ಸಾಹಿತ್ಯ, ವಚನ ಸಾಹಿತ್ಯ ಇತ್ಯಾದಿಗಳ ಮೇಲೂ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದಾರೆ.
ಮತೋಶ್ರೀ ಈರಮ್ಮ ವಡ್ಡನಕೇರಿ ಪ್ರತಿಷ್ಠಾನದಿಂದ 2021 ರಲ್ಲಿ ಪ್ರಕಟಗೊಂಡ ಈ ಕೃತಿಯಲ್ಲಿ 108 ಪುಟಗಳಿದ್ದು 115 ಬೆಲೆ ನಿಗದಿಪಡಿಸಲಾಗಿದೆ.
ಡಾ.ಶರಣಬಸಪ್ಪ ವಡ್ಡನಕೇರಿ