ಮುಖ್ಯಗುರುಗಳಾದ ಶ್ರೀಶೈಲ್ ಮ್ಯಾಳೇಶಿ ಹಾಗೂ ಶ್ರೀಶೈಲ್ ಮೇತ್ರಿ ಸೇವೆಯಿಂದ ಅಮಾನತು

ಮುಖ್ಯಗುರುಗಳಾದ ಶ್ರೀಶೈಲ್ ಮ್ಯಾಳೇಶಿ ಹಾಗೂ ಶ್ರೀಶೈಲ್ ಮೇತ್ರಿ ಸೇವೆಯಿಂದ ಅಮಾನತು
ಕಲಬುರಗಿ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಕಲಬುರಗಿ ಜಿಲ್ಲಾ ಸಮಿತಿಯಿಂದ ದಿನಾಂಕ ೦೬-೦೯-೨೦೨೫ ರಂದು ಅಫಜಲಪುರ ತಾಲೂಕಿನ ಸೊನ್ನ (ಹಳೆ) ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಬಡದಾಳ ತಾಂಡಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರುಗಳ ವಿರುದ್ಧ ಸಂಬAಧಪಟ್ಟ ನಿಯಮ ಉಲ್ಲಂಘನೆ ಕುರಿತು ಶಿಕ್ಷಣ ಇಲಾಖೆಗೆ ಲಿಖಿತ ದೂರು ಸಲ್ಲಿಸಲಾಗಿತ್ತು.
ದೂರು ಸಲ್ಲಿಸಿದ ವಿಷಯ ಎನೆಂದರೆ ದಿನಾಂಕ ೧೫-೦೮-೨೦೨೫ ರಂದು ನಡೆದ ೭೯ನೇ ಸ್ವಾತಂತ್ರ‍್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಸರ್ಕಾರಿ ಆದೇಶಗಳ ಪ್ರಕಾರ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರ ಪ್ರದರ್ಶನ ಮಾಡದೆ ಕರ್ನಾಟಕ ನಾಗರಿಕ ಸೇವಾ ನಡತೆ ನಿಯಮಾವಳಿ, ೧೯೬೬ ರ ನಿಯಮ ೩(೧)(೨)(೩) ಉಲ್ಲಂಘನೆಯು ನಡೆದಿತ್ತು.
ಈ ಕುರಿತು ಪಕ್ಷದ ವತಿಯಿಂದ ಪತ್ರಿಕಾಗೋಷ್ಠಿ ಮೂಲಕ ಕೂಡಲೇ ಕ್ರಮ ಕೈಗೊಳ್ಳದಿದ್ದಲ್ಲಿ ಡಿಡಿಪಿಐ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಲಾಯಿತು. ನಮ್ಮ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಡಿಡಿಪಿಐ ಕಲಬುರಗಿ ಅವರು ಕ್ಷೇತ್ರ ಶಿಕ್ಷಣಾಧಿಕಾರಿ, ಅಫಜಲಪುರ ಅವರಿಗೆ ಸ್ಪಷ್ಟ ನಿರ್ದೇಶನ ನೀಡಿ, ಸಂಬAಧಪಟ್ಟ ಇಬ್ಬರು ಮುಖ್ಯಗುರುಗಳಾದ ಶ್ರೀಶೈಲ್ ಮ್ಯಾಳೇಶಿ ಪ್ರ.ಮು.ಗು., ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಸೊನ್ನ (ಹಳೆ), ಶ್ರೀಶೈಲ್ ಮೇತ್ರಿ ಪ್ರ.ಮು.ಗು., ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಬಡದಾಳ ತಾಂಡಾ ಇವರನ್ನು ದಿನಾಂಕ ೧೧-೦೯-೨೦೨೫ ರಿಂದ ಸೇವೆಯಿಂದ ಅಮಾನತುಗೊಳಿಸುವ ಆದೇಶ ಹೊರಡಿಸಲಾಗಿದೆ.
ಈ ಕ್ರಮವು ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಹೋರಾಟದ ಫಲಶ್ರುತಿಯಾಗಿದೆ. ಪಕ್ಷದ ಒತ್ತಡ ಮತ್ತು ಹೋರಾಟದಿಂದಲೇ ಶಿಕ್ಷಣ ಇಲಾಖೆಯು ನಿಯಮಾನುಸಾರ ಕ್ರಮ ಕೈಗೊಳ್ಳಬೇಕಾಯಿತು.
ಇದಲ್ಲದೆ, ಮುಂದಿನ ದಿನಗಳಲ್ಲಿ ಸರ್ಕಾರಿ ಆದೇಶಗಳನ್ನು ಉಲ್ಲಂಘಿಸುವ ಅಥವಾ ಸಾಮಾಜಿಕ ನ್ಯಾಯದ ಮೌಲ್ಯಗಳನ್ನು ನಿರ್ಲಕ್ಷಿಸುವ ಯಾವುದೇ ಸಂದರ್ಭಗಳಲ್ಲಿ, ನಮ್ಮ ಹೋರಾಟವನ್ನು ಮತ್ತಷ್ಟು ಬಲಿಷ್ಠವಾಗಿ ಮುಂದುವರಿಸಲಾಗುವುದು ಎಂದು ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಜಿಲ್ಲಾ ಸಮಿತಿಯ ಅಧ್ಯಕ್ಷರಾದ ಸುನೀಲ ಇಂಗನಕಲ್ಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
.