ಡಾ. ವಿಷ್ಣುವರ್ಧನ್‌ರಿಗೆ ಕರ್ನಾಟಕ ರತ್ನ ಪ್ರಶಸ್ತಿ: ಹರ್ಷ

ಡಾ. ವಿಷ್ಣುವರ್ಧನ್‌ರಿಗೆ ಕರ್ನಾಟಕ ರತ್ನ ಪ್ರಶಸ್ತಿ: ಹರ್ಷ

ಡಾ. ವಿಷ್ಣುವರ್ಧನ್‌ರಿಗೆ ಕರ್ನಾಟಕ ರತ್ನ ಪ್ರಶಸ್ತಿ: ಹರ್ಷ

ರಾಜಧಾನಿ ಬೆಂಗಳೂರಿನಲ್ಲಿ ಡಾ. ವಿಷ್ಣುವರ್ಧನ್ ರವರ ಸ್ಮಾರಕ ನಿರ್ಮಾಣ ಕೈಗೊಳ್ಳಬೇಕು ಬಸವರಾಜ್ ಬಾಗೇವಾಡಿ ಮನವಿ

ಕಲಬುರಗಿ: ಮೇರು ನಟ ಸಾಹಸಸಿಂಹ ಡಾ ವಿಷ್ಣುವರ್ಧನ್ ರವರಿಗೆ ಕರ್ನಾಟಕ ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಿದ್ದಕ್ಕೆ ಜೇವರ್ಗಿ ಪಟ್ಟಣದ ವಿಜಯಪುರ ಕ್ರಾಸ್ ಬಸವೇಶ್ವರ ವೃತ್ತದಲ್ಲಿ ಡಾ. ವಿಷ್ಣು ಸೇನಾ ಸಮಿತಿ ಜೇವರ್ಗಿ ತಾಲ್ಲೂಕು ವತಿಯಿಂದ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಲಾಯಿತು. 

ಡಾ. ವಿಷ್ಣು ಸೇನಾ ಸಮಿತಿ ಜೇವರ್ಗಿ ತಾಲ್ಲೂಕು ವತಿಯಿಂದ ರಾಜ್ಯ ಸರ್ಕಾರಕ್ಕೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ಕೃತಜ್ಞತೆ ಸಲ್ಲಿಸಲಾಯಿತು. ಮತ್ತು ಅಭಿಮಾನಿಗಳೆಲ್ಲರೂ ಸಿಹಿ ಹಂಚಿಪಟಾಕಿ ಸಿಡಿಸಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ತಾಲೂಕ ವಿಎಸ್‌ಎಸ್ ಅಧ್ಯಕ್ಷರಾದ ಬಸವರಾಜ್ ಬಾಗೇವಾಡಿ ಮಾತನಾಡಿ ಡಾ. ವಿಷ್ಣುವರ್ಧನ್ ರವರಿಗೆ ಕರ್ನಾಟಕ ರಾಜ್ಯ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ರವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಲು ತೀರ್ಮಾನ_ಕೈಗೊಂಡಿರುವುದರಿAದ ಅತೀವ ಖುಷಿಯಾಗಿದ್ದು, ರಾಜ್ಯ ಸರ್ಕಾರಕ್ಕೆ ಕೃತಜ್ಞತೆಗಳು ಸಲ್ಲಿಸಿದರು. ಹಾಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಆದಷ್ಟು ಬೇಗ ರಾಜಧಾನಿ ಬೆಂಗಳೂರಿನಲ್ಲಿ ಡಾ. ವಿಷ್ಣುವರ್ಧನ್ ರವರ ಸ್ಮಾರಕ ನಿರ್ಮಾಣ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಕನ್ನಡಪರ ಹೋರಾಟಗಾರರಾದ ಶರಬು ಕಲ್ಯಾಣಿ, ರೈತ ಸೇನೆ ಜಿಲ್ಲಾ ಕಾರ್ಯಾಧ್ಯಕ್ಷರು ಸಂತೋಷಗೌಡ ಮಾಲಿಪಾಟೀಲ.ಪುರಸಭೆ ಸದಸ್ಯರಾದ ಮೆಹಬೂಬ್ ಪಟೇಲ್, ವೆಂಕಯ್ಯ ಗುತ್ತೇದಾರ್, ಸಂಗೀತಗಾರರು ಸಿದ್ದಲಿಂಗ ಮಾವೂರ್ ಎಸ್ ಮಾಹುರ್ ಭೀಮು ಖಾದ್ಯಪುರ್, ಶರಣು ಕೋಳಕೂರ್, ಎಂ ಜೆ ಪ್ರಜ್ವಲ್, ಮರೆಪ್ಪ ಬಿಲ್ಲಾರ್, ಚೇತನ್, ಹರಿಶ ಬಾರಿಗಿಡ, ಭೀಮು ಕುನ್ನೂರ,ಮರೆಪ್ಪ ಬಿಲ್ಲಾರ್, ಚೇತನ್ ವಿಶ್ವಕರ್ಮ, ಶ್ರವಣ್ ಕುಮಾರ್ ನಾಟಿಕರ್, ಭುವನ್ ಕುಮಾರ್, ಪವನ್ ಕುಲಕರ್ಣಿ, ಸುರೇಶ್ ಕುಮಾರ್ ಹಿರೇಮರ್, ಬಾಗೇಶ್, ಹರಿಶ ಬಾರಿಗಿಡ, ಇನ್ನು ಹಲವಾರು ಕನ್ನಡಪರ ರೈತಪರ ಮತ್ತು ಡಾಕ್ಟರ್ ವಿಷ್ಣು ಸೇನಾ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.