ಶಹಾಬಜಾರ ಯುಪಿಎಚ್‌ಸಿಯಲ್ಲಿ ವಿಶ್ವ ರೇಬಿಸ್ ದಿನಾಚರಣೆ
ಶಹಾಬಜಾರ ಯುಪಿಎಚ್‌ಸಿಯಲ್ಲಿ ವಿಶ್ವ ರೇಬಿಸ್ ದಿನಾಚರಣೆ
ಕಲಬುರಗಿ: ನಗರದ ಶೇಖರೋಜಾದಲ್ಲಿರುವ ಶಹಾಬಜಾರ ‘ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ಸಹಯೋಗದೊಂದಿಗೆ ಶನಿವಾರ ‘ವಿಶ್ವ ರೇಬಿಸ್ ದಿನಾಚರಣೆ’ ಜರುಗಿತು.
ನಾಯಿ ಕಚ್ಚಿದಾಗ ತಕ್ಷಣವೇ ಗಾಯವನ್ನು ಶುದ್ಧ ನೀರು ಹಾಗೂ ಸೋಪಿನಿಂದ ತೊಳೆದು, ಶೀಘ್ರವೇ ಹತ್ತಿರದ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಬೇಕು. ಒಂದುವೇಳೆ ಅದು ಸಾಕು ನಾಯಿ, ಸಣ್ಣ ಮರಿ ಅಥವಾ ಲಸಿಕೆ ಪಡೆದಿರುವ ನಾಯಿಯಾಗಿದ್ದರೂ ಕೂಡ ಕಚ್ಚಿಸಿಕೊಂಡವರು ನಿರ್ಲಕ್ಷ್ಯ ಮಾಡದೇ ಕಡ್ಡಾಯವಾಗಿ ಚಿಕಿತ್ಸೆ ಪಡೆಯಬೇಕು.
ವಿಶ್ವ ರೇಬಿಸ್ ದಿನವಾದ ಇಂದು ಜೀವಕ್ಕೆ ಕುತ್ತು ತರಬಹುದಾದ ಈ ರೋಗದ ಬಗ್ಗೆ ಹೆಚ್ಚಿನ ಎಚ್ಚರ ವಹಿಸುವ ಕುರಿತು ಜನರಲ್ಲಿ ಅರಿವು ಮೂಡಿಸೋಣ ಎಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್.ಕೇಶ್ವಾರ ರೇಬಿಸ್ ಬಗ್ಗೆ ಜಾಗೃತಿ ಮಾತುಗಳನ್ನಾಡಿದರು.
ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ.ಪಾಟೀಲ, ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ರೇಶ್ಮಾ ನಕ್ಕುಂದಿ, ಜಗನಾಥ ಗುತ್ತೇದಾರ, ನಾಗೇಶ್ವರಿ ಮುಗಳಿವಾಡಿ, ಮಂಗಲಾ ಚಂದಾಪುರೆ, ನಾಗಮ್ಮ ಚಿಂಚೋಳಿ ಸೇರಿದಂತೆ ಮತ್ತಿತರರಿದ್ದರು
.