ಮೇಯರ್ ವರ್ಷಾ ರಾಜೀವ್ ಜಾನೆ ಅವರು ಉದ್ಯಾನವನಗಳ ಪರಿಶೀಲನೆ
ಮೇಯರ್ ವರ್ಷಾ ರಾಜೀವ್ ಜಾನೆ ಅವರು ಉದ್ಯಾನವನಗಳ ಪರಿಶೀಲನೆ
ಕಲಬುರಗಿ ನಗರದಲ್ಲಿನ ಉದ್ಯಾನವನಗಳ ಪರಿಶೀಲನೆ, ಗುಣಮಟ್ಟದ ಬಗ್ಗೆ ಪರೀಶೀಲನೆಗಾಗಿ ನಗರದಲ್ಲಿ ವಿವಿಧ ಉದ್ಯಾನವನಗಳಿಗೆ ಮಹಾನಗರ ಪಾಲಿಕೆಯ ಮಹಾಪೌರರಾದ ವರ್ಷಾ ರಾಜೀವ್ ಜಾನೆ ಅವರು ಅಧಿಕಾರಿಗಳೊಂದಿಗೆ ಭೆಟಿ ಕೊಟ್ಟು ವೀಕ್ಷಿಸಿದರು.
ಹಸಿರು ಕಲಬುರಗಿ ಉಸಿರು ಕಲಬುರಗಿ ಧ್ಯೇಯದೊಂದಿಗೆ ಕಲಬುರಗಿ ನಗರದಲ್ಲಿನ ವಿವಿಧ ಬಡಾವಣೆಗಳಲ್ಲಿ ಉದ್ಯಾನವನಗಳಿಗೆ ಮೇಯರ್ ವರ್ಷಾ ಜಾನೆ ಅವರು ಅಧಿಕಾರಿಗಳೊಂದಿಗೆ ಭೆಟಿ ಕೊಟ್ಟು ಖುದ್ದಾಗಿ ವೀಕ್ಷಣೆ ಮಾಡಿದರು.
ಈ ಸಂದರ್ಭದಲ್ಲಿ ಉಪ ಮಹಾಪೌರರಾದ ತೃಪ್ತಿ ಅಲ್ಲದ್ ಲಾಖೆ, ಕರ, ಹಣಕಾಸು, ಮೇಲ್ಮನೆ ಅಧ್ಯಕ್ಷರಾದ ಅನುಪಮ್ಮಾ ಕಮಕನೂರ, ಮಹಾನಗರ ಪಾಲಿಕೆ ಸದಸ್ಯರಾದ ಕುಮಾರಿ ರೇಣುಕಾ ಹೋಳ್ಕರ್, ರೇಣುಕಾ ರಾಮುರೆಡ್ಡಿ, ಲತಾ ರವಿ ರಾಠೋಡ್ ಸೇರಿದಂತೆ ಮಹಾನಗರ ಪಾಲಿಕೆಯ ಅಧಿಕಾರಿಗಳು ಇದ್ದರು.
