ಚಿತಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಿನಾಚರಣೆ; ಶಿಕ್ಷಕ–ಮಕ್ಕಳ ಮಹಾಸಭೆ ಜರುಗಿತು
ಚಿತಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಿನಾಚರಣೆ; ಶಿಕ್ಷಕ–ಮಕ್ಕಳ ಮಹಾಸಭೆ ಜರುಗಿತು
ಆಳಂದ: ಚಿತಲಿ ಸರ್ಕಾರಿ ಪ್ರೌಢಶಾಲೆ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ರಾಜ್ಯ ಸರ್ಕಾರದ ಆದೇಶದಂತೆ ಶಿಕ್ಷಕ–ಮಕ್ಕಳ ಮಹಾಸಭೆಯನ್ನು ಭಾನುವಾರ ಭವ್ಯವಾಗಿ ಏರ್ಪಡಿಸಲಾಯಿತು.
ಕಾರ್ಯಕ್ರಮವನ್ನು ಪ್ರೌಢಶಾಲೆಯ ಎಸ್‌ಡಿಎಂಸಿ ಅಧ್ಯಕ್ಷೆ ಪ್ರತಿಭಾ ಶಾಂತಯ್ಯ ಹಾಗೂ ಸಾಗರ್ ಪಾಟೀಲ ಅವರಿಂದ ಉದ್ಘಾಟಿಸಲಾಯಿತು. ಸಭೆಗೆ ಪ್ರೌಢಶಾಲೆ ಮುಖ್ಯಗುರು ಸೋಮನಾಥ ಜಳಕೋಟಿ ಅಧ್ಯಕ್ಷತೆ ವಹಿಸಿದ್ದು, ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕರಾದ ಸಿದ್ದರಾಮ ಬಂಡೆ ಉಪಾಧ್ಯಕ್ಷರಾಗಿ ಉಪಸ್ಥಿತರಿದ್ದರು.
ಸಭೆಯಲ್ಲಿ ಕಿಣಿ ಸುಲ್ತಾನ್ ಗ್ರಾಮಪಂಚಾಯತಿ ಉಪಾಧ್ಯಕ್ಷ ಚನ್ನಬಸಪ್ಪ ಕೋಟೆ, ಗ್ರಾಮಪಂಚಾಯತ್ ಸದಸ್ಯರು ಸರಸ್ವತಿ ಚನ್ನಶೆಟ್ಟಿ ಮತ್ತು ಅಂಬುಬಾಯಿ ಬೇಡರ್, ಜೊತೆಗೆ ಎರಡೂ ಶಾಲೆಗಳ ಎಸ್‌ಡಿಎಂಸಿ ಸದಸ್ಯರು ಭಾಗವಹಿಸಿದ್ದು ಕಾರ್ಯಕ್ರಮಕ್ಕೆ ಭಿನ್ನತೆ ತಂದಿತು.
ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳ ಶಿಕ್ಷಕರಾದ ಶಿವಕುಮಾರ್ ಬೇಳ್ಳೆ, ಸುಭಾಷ್ ಬಿರಾದಾರ್, ಸಹದೇವ ಇಂಗಳೆ, ಸುರೇಶ್ ಹಂಚಿನಾಳ, ಕವಿತಾಬಾಯಿ ಹೊಸಮನಿ, ಧರ್ಮಣ್ಣ, ಜಗನ್ನಾಥ್ ಸೇರಿದಂತೆ ಅನೇಕರು ಸಭೆಯಲ್ಲಿ ಪಾಲ್ಗೊಂಡಿದ್ದರು. ಗ್ರಾಮದಲ್ಲಿನ ಪಾಲಕರೂ ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.
ಈ ಸಂದರ್ಭದಲ್ಲಿ ಶಿಕ್ಷಕ ಯುಸೂಫ ಬಳೂರಗಿ ಅವರು ಮಕ್ಕಳ ಶೈಕ್ಷಣಿಕ ಪ್ರಗತಿ, ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆ, ಬಾಲಕಾರ್ಮಿಕತೆ ಹಾಗೂ ಬಾಲ್ಯ ವಿವಾಹ ತಡೆಗಟ್ಟುವಿಕೆ, ಸರ್ಕಾರಿ ಶಾಲೆಯಲ್ಲಿ ಲಭ್ಯವಿರುವ ಸೌಲಭ್ಯಗಳು ಮೊದಲಾದ ವಿಷಯಗಳ ಕುರಿತು ಪಾಲಕರಿಗೆ ವಿವರಿಸಿದರು
.
