31488 ಮಕ್ಕಳ ಪೋಲಿಯೋ ಅಭಿಯಾನ ಯಶಸ್ವಿಗೆ 184 ತಂಡ ರಚನೆ : ಡಾ.ಗಫಾರ್
ಪೋಲಿಯೋ ಅಭಿಯಾನಕ್ಕೆ ಚಾಲನೆ
ಒಟ್ಟು 31488 ಮಕ್ಕಳ ಪೋಲಿಯೋ ಅಭಿಯಾನ ಯಶಸ್ವಿಗೆ 184 ತಂಡ ರಚನೆ : ಡಾ.ಗಫಾರ್
ಚಿಂಚೋಳಿ : ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನ ಕಾರ್ಯಕ್ರಮ ಡಿ. 21 ರಿಂದ 24 ರವರೆಗೆ ನಡಯಲಿದ್ದು, ಐದು ವರ್ಷದೊಳಗಿನ ಮಕ್ಕಳಿಗೆ ತಪ್ಪದೇ ಪೋಲಿಯೋ ಹಾಕಿಸಿ ಎಂದು ತಾಲೂಕ ವೈದ್ಯಾಧಿಕಾರಿ ಡಾ ಗಫಾರ್ ತಿಳಿಸಿದ್ದಾರೆ.
ಚಿಮ್ಮಇದ್ಲಾಯಿ ಗ್ರಾಮದ ವಾಲ್ಮೀಕಿ ಭವನದಲ್ಲಿ ಪೋಲಿಯೋ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ತಾಲೂಕಿನಲ್ಲಿ ಒಟ್ಟು 31488 ಮಕ್ಕಳು ಇದ್ದು, ಅಭಿಯಾನದ ಯಶಸ್ವಿಗೆ 184 ತಂಡಗಳು ರಚನೆ ಮಾಡಲಾಗಿದೆ. ಪೋಲಿಯೋ ಕಾರ್ಯನಿರ್ವಾಹಣೆಗೆ 364 ಸದಸ್ಯರು, 36 ಜನ ಮೇಲ್ವಿಚಾರಕರನ್ನು ನೇಮಿಸಲಾಗಿದೆ.
ಚಿಂಚೋಳಿ ತಾಲೂಕ ಆಸ್ಪತ್ರೆ ಸೇರಿದಂತೆ ಎಲ್ಲಾ ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರ ಮತ್ತು ಅಂಗನವಾಡಿ ಕೇಂದ್ರಗಳು ಸೇರಿ, 164 ಬೂತ್ ಗಳಲ್ಲಿ ಪಲ್ಸ್ ಪೋಲಿಯೋ ಹನಿ ಹಾಕಲಾಗುತ್ತಿದ್ದು, ಪಾಲಕ-ಪೋಷಕರು ಮಕ್ಕಳ ಉತ್ತಮ ಆರೋಗ್ಯದ ಬೆಳೆವಣಿಗೆಗೆ ಎರಡು ಹನಿ ಪೋಲಿಯೋ ಹಾಕಿಸುವ ಮೂಲಕ ಅಭಿಯಾನ ಯಶಸ್ವಿಗೊಳಿಸಬೇಕೆಂದು ಡಾ. ಗಾಫರ್ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗ್ರಾ. ಪಂ. ಉಪಾಧ್ಯಕ್ಷೆ ಚಂದ್ರಕಲಾ ಚೆಟ್ನಳ್ಳಿ, ಸದಸ್ಯ ಶ್ರೀನಿವಾಸ ಚಿಂಚೋಳಿಕರ್, ಮೊಗಲಪ್ಪ, ಗುಂಡಪ್ಪ ಅವರಾದಿ, ಅಮೃತಪ್ಪ, ರಾಜೇಂದ್ರ ಚಟ್ನಳ್ಳಿ, ಆರೋಗ್ಯ ಕೇಂದ್ರದ ಸಹಾಯಕಿ ಆರತಿ ಸೇರಿದಂತೆ ಅಂಗನವಾಡಿ, ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು.
