ಅಂತರ ವಿಶ್ವವಿದ್ಯಾಲಯ ಕಾಲೇಜು ಸಿಬ್ಬಂದಿಗಳ ಡಾ. ಬಿ.ಆರ್. ಅಂಬೇಡ್ಕರ್ ಪ್ರಥಮ ಕ್ರಿಕೆಟ್ ಟೂರ್ನಮೆಂಟ್ ಉದ್ಘಾಟನೆ

ಅಂತರ ವಿಶ್ವವಿದ್ಯಾಲಯ ಕಾಲೇಜು ಸಿಬ್ಬಂದಿಗಳ ಡಾ. ಬಿ.ಆರ್. ಅಂಬೇಡ್ಕರ್ ಪ್ರಥಮ ಕ್ರಿಕೆಟ್ ಟೂರ್ನಮೆಂಟ್ ಉದ್ಘಾಟನೆ

ಅಂತರ ವಿಶ್ವವಿದ್ಯಾಲಯ ಕಾಲೇಜು ಸಿಬ್ಬಂದಿಗಳ ಡಾ. ಬಿ.ಆರ್. ಅಂಬೇಡ್ಕರ್ ಪ್ರಥಮ ಕ್ರಿಕೆಟ್ ಟೂರ್ನಮೆಂಟ್ ಉದ್ಘಾಟನೆ

ಕಲಬುರಗಿ: ಸರ್ಕಾರಿ ಮಹಾವಿದ್ಯಾಲಯ (ಸ್ವಾಯತ್ತ), ಕಲಬುರಗಿಯಲ್ಲಿ 2025–26ನೇ ಶೈಕ್ಷಣಿಕ ಸಾಲಿನ ಅಂಗವಾಗಿ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಸ್ಮರಣಾರ್ಥ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಡಿ ಅಂತರ ವಿಶ್ವವಿದ್ಯಾಲಯ ಕಾಲೇಜು ಸಿಬ್ಬಂದಿಗಳ ಡಾ. ಬಿ.ಆರ್. ಅಂಬೇಡ್ಕರ್ ಪ್ರಥಮ ಕ್ರಿಕೆಟ್ ಟೂರ್ನಮೆಂಟ್ ಉದ್ಘಾಟನಾ ಸಮಾರಂಭ ನಡೆಯಿತು.

ಕಾರ್ಯಕ್ರಮವನ್ನು ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಕಚೇರಿಯ ಜಂಟಿ ನಿರ್ದೇಶಕರಾದ ಪ್ರೊ. ಗೊಳ್ಳೆ ಶಿವಶರಣ ಅವರು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಐದು ವಿಶ್ವವಿದ್ಯಾಲಯಗಳಿಂದ ಆಗಮಿಸಿದ ಕಾಲೇಜು ಸಿಬ್ಬಂದಿಗಳ ತಂಡಗಳಿಗೆ ಶುಭ ಹಾರೈಸಿ, ವಿವಿಧ ಕಾಲೇಜುಗಳೊಂದಿಗೆ ಉತ್ಸಾಹದಿಂದ ಕ್ರಿಕೆಟ್ ಆಡುತ್ತ ಉತ್ತಮ ಪ್ರದರ್ಶನ ನೀಡಬೇಕು ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರಗಿಯ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಎಂ.ಎಸ್. ಪಾಸೋಡಿ ಅವರು ಮಾತನಾಡಿ, ಸಿಬ್ಬಂದಿಗಳು ಚೈತನ್ಯದಿಂದ ಕ್ರಿಕೆಟ್ ಆಡುತ್ತಿರುವುದು ಸಂತೋಷಕರ ಸಂಗತಿ ಎಂದು ತಿಳಿಸಿ, ಎಲ್ಲಾ ತಂಡಗಳ ನಾಯಕರಿಗೆ ಶುಭ ಹಾರೈಸಿದರು ಹಾಗೂ ಉತ್ತಮ ಆಟವಾಡಿ ಅಂತಿಮ ಪಂದ್ಯಕ್ಕೆ ತಲುಪುವಂತೆ ಪ್ರೋತ್ಸಾಹಿಸಿದರು.

ಕಾರ್ಯಕ್ರಮದಲ್ಲಿ ಬೆಂಗಳೂರಿನಿಂದ ಆಗಮಿಸಿದ ಎಡಿಬಿ ಸಮಿತಿಯ ಅಧಿಕಾರಿಗಳಾದ ಪ್ರೊ. ರಮೇಶ್ ರೆಡ್ಡಿ ಮತ್ತು ಸ್ಯಾನ್ ಪ್ರಾನ್ಸಿಸ್ ಮಾರಿಯ ಆನಂದ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಡಾ. ಸವಿತಾ ತಿವಾರಿ ವಹಿಸಿ ಕ್ರಿಕೆಟ್ ತಂಡದವರಿಗೆ ಶುಭಾಶಯ ಕೋರಿದರು.

ಈ ಸಂದರ್ಭದಲ್ಲಿ ಡಾ. ಮಲ್ಲೇಶಪ್ಪ ಎಸ್. ಕುಂಬಾರ, ಡಾ. ರಾಜಕುಮಾರ ಸಲಗರ, ಡಾ. ದವಲಪ್ಪ ಬಿ.ಎಚ್., ಡಾ. ರಾಜಶೇಖರ ಮಡಿವಾಳ, ಡಾ. ರವೀಂದ್ರಕುಮಾರ ಭಂಡಾರಿ, ಡಾ. ಅಂಬೇಡ್ಕರ್ ವಿಚಾರ ವೇದಿಕೆಯ ಸಂಯೋಜಕ ಡಾ. ರಮೇಶ್ ಪೋತೆ, ಸಹ ಸಂಯೋಜಕ ಡಾ. ಬಸಂತ ಸಾಗರ, ಸಾಂಸ್ಕೃತಿಕ ಸಂಚಾಲಕರಾದ ಡಾ. ಬಲಭೀಮ ಸಾಂಗ್ಲಿ, ಕಾಲೇಜಿನ ದೈಹಿಕ ನಿರ್ದೇಶಕ ಡಾ. ಬೆಣ್ಣೂರು ವಿಶ್ವನಾಥ, ಪ್ರೋ. ಚೆನ್ನಕ್ಕಿ ನಾಗಪ್ಪ, ಡಾ. ನಾಗಪ್ಪ ಗೋಗಿ, ಡಾ. ಮಲ್ಲಿಕಾರ್ಜುನ ಶೆಟ್ಟಿ, ಡಾ. ಅರುಣಕುಮಾರ ಸಲಗರ, ಡಾ. ರಾಜೇಶ ಅಜಬಸಿಂಗ್, ಡಾ. ಚಂದ್ರಕಾಂತ ಜಮಾದಾರ, ಡಾ. ರಾಮಕೃಷ್ಣ, ಡಾ. ಶಂಕರ ರಾಠೋಡ, ಡಾ. ರಮೇಶ್, ಡಾ. ಮಹ್ಮದ ಯುನೂಸ್, ಡಾ. ಮಹಾಂತೇಶ ಪಾಟೀಲ, ಡಾ. ಉತ್ತಮ, ಡಾ. ರಬಿಯಾ ಇಫತ್, ಡಾ. ಅಜ್ರಾ ಪರ್ವಿನ್ ಸೇರಿದಂತೆ ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ಅತಿಥಿ ಉಪನ್ಯಾಸಕರು ಭಾಗವಹಿಸಿದರು.

ಇದೇ ಸಂದರ್ಭದಲ್ಲಿ ಕಾಲೇಜಿನ ಪತ್ರಾಂಕಿತ ವ್ಯವಸ್ಥಾಪಕರಾದ ಅಜಯಸಿಂಗ್ ತಿವಾರಿ, ವಿಜಯಲಕ್ಷ್ಮಿ ಹಾಗೂ ಕಚೇರಿ ಅಧೀಕ್ಷಕರಾದ ಶಿವಾನಂದ ಸ್ವಾಮಿ ಉಪಸ್ಥಿತರಿದ್ದರು.

ಐದು ವಿಶ್ವವಿದ್ಯಾಲಯಗಳಿಂದ ಆಗಮಿಸಿದ 20 ಕ್ರಿಕೆಟ್ ತಂಡಗಳು ಈ ಟೂರ್ನಮೆಂಟ್‌ನಲ್ಲಿ ಭಾಗವಹಿಸಿದ್ದವು. ಕಾರ್ಯಕ್ರಮವನ್ನು ಡಾ. ಬಲಭೀಮ ಸಾಂಗ್ಲಿ ಅವರು ಅಚ್ಚುಕಟ್ಟಾಗಿ ನಿರೂಪಿಸಿದರು.