ಡಾ.ಗೌತಮ್ ಕರಿಕಲ್ ಜನುಮದಿನದ ಪ್ರಯುಕ್ತ ಕಿವುಡು, ಮೂಕ ಮಕ್ಕಳಿಗೆ ಅನ್ನ ದಾಸೋಹ

ಡಾ.ಗೌತಮ್ ಕರಿಕಲ್ ಜನುಮದಿನದ ಪ್ರಯುಕ್ತ ಕಿವುಡು, ಮೂಕ ಮಕ್ಕಳಿಗೆ ಅನ್ನ ದಾಸೋಹ
ಇಂದು ಕಲಬುರಗಿ ಜಿಲ್ಲೆಯ ಎನ್.ಎಸ್.ಯು.ಐ ಅಧ್ಯಕ್ಷರಾದ ಡಾ.ಗೌತಮ್ ಕರಿಕಲ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಕನಸು ಸೇವಾ ಸಂಸ್ಥೆಯ ವತಿಯಿಂದ ಶ್ರೀಯಾನ್ ಕಿವುಡ ಮತ್ತು ಮೂಕ ಮಕ್ಕಳ ವಸತಿ ಶಾಲೆಯಲ್ಲಿ ಅನ್ನ ಸಂತರ್ಪಣೆ ಬಾಳೆ ಹಣ್ಣು ವಿತರಣೆ ಮತ್ತು ಸಸಿ ನೆಡುವುದರ ಮೂಲಕ ಅತಿ ಸರಳವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಕನಸು ಸೇವಾ ಸಂಸ್ಥೆಯ ಪದಾಧಿಕಾರಿಗಳಾದ ಸಂತೋಷ ಕುಮಾರ್ ಎಸ್.ಪಿ, ಸಚಿನ್ ಕೋಚಿ, ಸಂಜಯಕುಮಾರ ಭೋಸ್ಲೆ, ವಿಜಯ್ ಕುಮಾರ್, ರಾಚಯ್ಯಸ್ವಾಮಿ ಹಿರೇಮಠ, ಕರ್ಣ ಯಲ್ಲಬತ್ತಿ, ಆನಂದ ಯಾತನೂರ, ರವಿ ಕುಮಾರ್, ಅಣವೀರ ಗೌಡ ಬಿರಾದಾರ್, ಅಜಯ, ಸಾಬಣ್ಣ, ಶಾಲೆಯ ಮುಖ್ಯಸ್ಥರಾದ ರಾಜು ಎಸ್. ಶಖಾಪುರ, ಶಿವಶರಣಪ್ಪ ಶಖಾಪುರ, ಮುಖ್ಯ ಶಿಕ್ಷಕಿ ವಿಜಯಲಕ್ಷ್ಮಿ ಮಾಳಗೆ, ವಿನಯಕುಮಾರ, ಮಹಾಂತೇಶ, ಅನಿತಾ, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.