ನಾಟಿ ವೈದ್ಯ ಶರಣಕುಮಾರ ಬಜಂತ್ರಿ ಹಾಗರಗಾರ ಸೇವೆ ಸ್ಮರಣೀಯ: ಸೂರ್ಯವಂಶಿ

ನಾಟಿ ವೈದ್ಯ ಶರಣಕುಮಾರ ಬಜಂತ್ರಿ ಹಾಗರಗಾರ ಸೇವೆ ಸ್ಮರಣೀಯ: ಸೂರ್ಯವಂಶಿ
ಕಲಬುರಗಿ,ಸೆ.೬- ನಾಡಿನ ಪರಂಪರಿಕ ನಾಟಿ ವೈದ್ಯಕೀಯ ಸೇವೆಯಿಂದ ಕಾಮಲೆ ಸೇರಿದಂತೆ ಕೆಲ ಪ್ರಮುಖ ರೋಗಳಿಗೆ ಚಿಕಿತ್ಸೆ ನೀಡುತ್ತಿರುವ ಶರಣಕುಮಾರ ಬಜಂತ್ರಿ ಹಾಗರಗಾ ಅವರ ಸೇವೆ ಸ್ಮರಣೀಯ ಎಂದು ಬೀದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಜಗನ್ನಾಥ ಎಸ್.ಸೂರ್ಯವಂಶಿ ಅವರು ಹೇಳಿದರು.
ಸುಪರ ಮಾರುಕಟ್ಟೆ ಸಿಟಿ ಬಸ್ ನಿಲ್ದಾಣದ ಬಳಿ ಇರುವ ಕರ್ನಾಟಕ ರಾಜ್ಯ ಬೀದಿ ವ್ಯಾಪಾರಿಗಳ ಸಂಘದ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಸಾಧಕರ ಸನ್ಮಾನ ಸಮಾರಂಭದಲ್ಲಿ ಕಾಮಲೆ ಔಷಧಿಯ ಖ್ಯಾತ ನಾಟಿ ವೈದ್ಯರಾದ ಶರಣಕುಮಾರ ಬಜಂತ್ರಿ ಹಾಗರಗಾ ಅವರನ್ನು ಸನ್ಮಾನಸಿ ಗೌರವಿಸಲಾಯಿತು.
ನಾಡಿನ ಪರಂಪರಿಕ ನಾಟಿ ಔಷಧ ವಿದ್ಯೆ ಮತ್ತು ಚಿಕಿತ್ಸಾ ಪದ್ದತೆಯನ್ನು ಉಳಿಸಿ ಬೆಳೆಸಲು ಸರ್ಕಾರ ಪ್ರೋತ್ಸಹಿಸಬೇಕು ಎಂದ ಸೂರ್ಯವಂಶಿ ಅವರು, ಉಚಿತ ರೋಗ ತಪಾಸಣೆ ಮತ್ತು ಅತ್ಯಂತ ಕಡಿಮೆ ಶುಲ್ಕದಲ್ಲಿ ಬಜಂತ್ರಿ ಅವರು ಸಾರ್ವಜನಿಕರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಸಹಸ್ರ ಸಂಖ್ಯೆಯಲ್ಲಿ ಕಾಮಲೆ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಿ ಗುಣಪಡಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶರಣಕುಮಾರ ಬಜಂತ್ರಿ ಹಾಗರಗಾ ಅವರು, ಯಾವುದೇ ಅಡ್ಡಪರಿಣಾಮ ವಿಲ್ಲದ ಹಾಗೂ ನಮ್ಮ ಪೂರ್ವಿಕರಿಂದ ಕಲಿತ ನಾಟಿ ಔಷಧಿ ಕಾಮಲೆ ರೋಗಕ್ಕೆ ರಾಮಬಾಣವಾಗಿದೆ. ಬಹುತೇಕರು ಕಾಮಲೆಯ ರೋಗದಿಂದ ಚೇತರಿಸಿಕೊಂಡಿದ್ದಾರೆ ಇದಕ್ಕೆ ದೈವಿ ಹಾಗೂ ಸಾರ್ವಜನಿಕರ ಆರ್ಶಿವಾದವೇ ಕಾರಣೆ ಎಂದರು.
ಈ ಸಂದರ್ಭದಲ್ಲಿ ಸಚೀನ ಫರಹತಾಬಾಧ, ದತ್ತು ಎಚ್.ಭಾಸಗಿ, ನ್ಯಾಯವಾದಿ ಚಂದ್ರಶೇಖರ ಪಾಟೀಲ, ಹಣಮಂತ ಹೈದ್ರಿ, ಸೂರ್ಯಕಾಂತ ತಳವಾರ, ವೆಂಕಟೇಶ ಕಾಂಬಳೆ, ಲಕ್ಷ್ಮಿ ಬಾಯಿ ಶ್ರೀದೇವಿ ಪಿ, ಬಾಬುಮಿಯಾ, ರಾಘು ಸೇರಿದಂತೆ ಹಲವರಿದ್ದರು.