ದೇಶದ ಉನ್ನತಿಗೆ ಯುವಕರು ಅಣಿಗೊಳ್ಳಲು ವಿವೇಕಾನಂದರ ಕರೆ ಪ್ರೊ. ಪಾಲಾಮಾರ
ದೇಶದ ಉನ್ನತಿಗೆ ಯುವಕರು ಅಣಿಗೊಳ್ಳಲು ವಿವೇಕಾನಂದರ ಕರೆಪ್ರೊ. ಪಾಲಾಮಾರ
ಚಿಂಚೋಳಿ: ಸ್ವಾಮಿ ವಿವೇಕಾನಂದರು ವಿಶ್ವ ಸಮಾಜದ ಅಂಕುಡೊಂಕುಗಳನ್ನು ತಿದ್ದಿದವರು. ಅಮೆರಿಕದ ಜನರ ಮನಸ್ಸನ್ನು ಒಂದೇ ಒಂದು ಪದದಿಂದ ಗೆದ್ದ ವಿವೇಕಾನಂದರು ಭಾರತವು ಇಡೀ ಜಗತ್ತಿಗೆ ಬುನಾದಿ ಎಂದು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ಮಲ್ಲಿಕಾ ರ್ಜುನ ಪಾಲಾಮಾರ ನುಡಿದರು.
ಸ್ವಾಮಿ ವಿವೇಕಾನಂದ ಪ್ರಸಾರ ಕೇಂದ್ರ ಬೆಂಗಳೂರು ಮತ್ತು ಸಿರಿಗನ್ನಡ ವೇದಿಕೆ ಜಿಲ್ಲಾ ಘಟಕ ಕಲಬುರಗಿ ವತಿಯಿಂದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡ ಉಪನ್ಯಾಸ ಮಾಲಿಕೆಯಲ್ಲಿ ಮಾತಾಡಿದ ಅವರು
ಮಾನವೀಯ ಮೌಲ್ಯಗಳು ಯಾವಾಗ ಸಾಯುತ್ತವೆ ಅವಾಗ ಭಾರತವು ಸಾಯುತ್ತದೆ ಎಂಬ ವಿವೇಕಾನಂದರ ವಾಣಿಯನ್ನು ತಿಳಿಸಿದರು. ಜೀವನಕ್ಕೆ ದಾರಿ ದೀಪವಾದ ನುಡಿಗಳನ್ನು ಆಡುತ್ತಿದ್ದರು. ನಮ್ಮ ಮೇಲೆ ನಮಗೆ ನಂಬಿಕೆ ಇರಬೇಕು ಇಲ್ಲದವನು ಮನುಷ್ಯನೆ ಅಲ್ಲ ಎಂದರು. ಜೀವನ ಧರ್ಮಕ್ಕೆ ಭದ್ದರಾಗಬೇಕು. ದೇಶದ ಉನ್ನತಿಗೆ ಯುವಕರು ಅಣಿಗೊಳ್ಳಬೇಕು. ವಿದ್ಯಾರ್ಥಿಗಳು ಆತ್ಮ ವಿಶ್ವಾಸ ಹೊಂದಬೇಕು. ಬಲವೇ ಜೀವನ ದುರ್ಬಲವೆ ಮರಣ ಆದ್ದರಿಂದ ಯುವಕರು ಸದೃಢವಾದ ದೇಹ ಮನಸ್ಸು ಹೊಂದಬೇಕು. ಜೀವನದಲ್ಲಿ ಸೋಲಾದರೆ ದೃತಿಗೆಡಬಾರದು ಮುನ್ನುಗ್ಗಬೇಕು ಏಳಿ ಎದ್ದೇಳಿ ಸತ್ಯದ ಕಡೆಗೆ ಚಲಿಸಲು ವಿವೇಕಾನಂದರು ಕರೆ ನೀಡಿದರು ಎಂದರು.
ಸಮಾಜಿಕ ಸೇವಕರಾದ ಮಾರುತಿ ಗಂಜಗೇರಿ ಅವರು ಸನ್ಮಾನ ಸ್ವೀಕರಿಸಿ
ದೇಶದ ನಿಜ ಶಕ್ತಿ ಎಂದರೇ ಯುವಕರೆಂದು ವಿವೇಕಾನಂದರು ತಿಳಿದ್ದಿದರು. ಹರಿಯುವ ನೀರಿನ ವಿರುದ್ದ ಈಜುವ ಯುವಕರು ಭಾರತದಲ್ಲಿ ಇದ್ದರೆ ಅವರನ್ನು ಪ್ರೋತ್ಸಾಹ ನೀಡಬೇಕು ಎಂದರು. ವಿದ್ಯಾರ್ಥಿಗಳು ಕ್ರಿಯಾಶೀಲರಾಗಬೇಕು, ಜವಾಬ್ದಾರಿಯುತ ಜೀವನಕ್ಕೆ ಅಣಿಯಾಗಬೇಕು ಎಂದರು.
ಅಧ್ಯಕ್ಷತೆಯನ್ನು ಪ್ರಾಂಶುಪಾಲ ಪ್ತೊ. ಮಲ್ಲಪ್ಪ ತೊಟ್ನಳ್ಳಿ ವಹಿಸಿ ಭಾರತದ ಹಿಂದೂ ಸಂಸ್ಕೃತಿ ಅನನ್ಯತೆಯನ್ನು ದೇಶ ವಿದೇಶಗಳಲ್ಲಿ ಮುಟ್ಟಿಸುವಲ್ಲಿ ಪಾತ್ರ ಗಣನೀಯ. ಯುವಕರಿಗೆ ಜಾಗೃತಿ ಮೂಡಿಸುವ ನುಡಿ ಮುತ್ತುಗಳನ್ನು ಹೇಳಿದ್ದಾರೆ ಅವನ್ನು ಪಾಲನೆ ಮಾಡುವುದು ಅವಶ್ಯಕತೆ ಇದೆ ಎಂದರು.
ಡಾ.ರಾಜಕುಮಾರ ಮಾಳಗೆ ಸ್ವಾಗತಿಸಿದರು. ಸಿರಿಗನ್ನಡ ವೇದಿಕೆ ಜಿಲ್ಲಾಧ್ಯಕ್ಷ ಪ್ರಾಸ್ತಾವಿಕ ನುಡಿ ಆಡಿದರು. ಶರಣ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷ ಬಸವರಾಜ ಐನೊಳಿ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಡಾ.ಸಿದ್ಧಪ್ಪ ಹೊಸಮನಿ ವಂದಿಸಿದರು