ಡಾ. ಅಪ್ಪಾ ನಾಡು ಕಂಡ ಮಹಾನ್ ದಾರ್ಶನಿಕರು ಗುರು ಉಪದೇಶ ಕಚೇರಿಯಲ್ಲಿ `ನುಡಿ ನಮನ

ಡಾ. ಅಪ್ಪಾ ನಾಡು ಕಂಡ ಮಹಾನ್ ದಾರ್ಶನಿಕರು ಗುರು ಉಪದೇಶ ಕಚೇರಿಯಲ್ಲಿ `ನುಡಿ ನಮನ

ಡಾ. ಅಪ್ಪಾ ನಾಡು ಕಂಡ ಮಹಾನ್ ದಾರ್ಶನಿಕರು

ಗುರು ಉಪದೇಶ ಕಚೇರಿಯಲ್ಲಿ `ನುಡಿ ನಮನ’

 ಕಲಬುರಗಿ : ಶ್ರೀ ಶರಣಬಸವೇಶ್ವರ ಸಂಸ್ಥಾನ 8ನೇ ಪೀಠಾಧಿಪತಿ ಪೂಜ್ಯಶ್ರೀ ಡಾ. ಶರಣಬಸವಪ್ಪ ಅಪ್ಪ ಅವರು ಈ ನಾಡು ಕಂಡ ಮಹಾನ್ ದಾರ್ಶನಿಕ ಎಂದು ಬಣ್ಣಿಸಿದವರು ಗೌರವ ಸಂಪಾದಕರಾದ ಗುಂಡೂರಾವ ಕಡಣಿ.

 ಅವರು ಗುರು ಉಪದೇಶ ಮಾಸ ಪತ್ರಿಕೆ ಕಚೇರಿಯಲ್ಲಿ ಶನಿವಾರ ಆಯೋಜಿಸಿದ ಡಾ. ಅಪ್ಪಾಜಿಯವರಿಗೆ `ನುಡಿ ನಮನ’ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಾ, ಡಾ. ಅಪ್ಪಾಜಿಯವರು ಕಲ್ಯಾಣ ಕರ್ನಾಟಕದಲ್ಲಿ ಮಾಡಿದ ಶೈಕ್ಷಣಿಕ ಕ್ರಾಂತಿ ಅಗಾಧವಾದದ್ದು ಎಂದು ನುಡಿದರು.

 ಗುರು ಉಪದೇಶ ಮಾಸ ಪತ್ರಿಕೆ ಇದೀಗ ದಶ ವಸಂತೋತ್ಸವದಲ್ಲಿ ಸಾಗುತ್ತಿದ್ದು, ಸಾಗಿದ ದಾರಿಯುದ್ದಕ್ಕೂ ಡಾ. ಅಪ್ಪಾಜಿಯವರು ಬೆಳಕಾಗಿದ್ದಾರೆ ಎಂದು ನುಡಿದರು.

 ಸಂಪಾದಕರಾದ ಸಿದ್ದಣಗೌಡ ಮಾಲಿ ಪಾಟೀಲರು ಮಾತನಾಡಿ, ಡಾ. ಶರಣಬಸವಪ್ಪ ಅಪ್ಪಾ ಅವರು `ಅನ್ನ ಹಾಗು ಅರಿವು’ ಎರಡೂ ದಾಸೋಹ ಉತ್ತುಂಗ ಶಿಖರದತ್ತ ಕೊಂಡೊಯ್ದವರು. ದಾಸೋಹ ಮಹಾಮನೆಯಲ್ಲಿ ನುಚ್ಚು ಉಂಡು ಉಚ್ಚ ಸ್ಥಾನಕ್ಕೇರಿದವರು ಅನೇಕರು ವಿಶ್ವದಾದಂತ್ಯ ಸಿಗುತ್ತಾರೆ ಎಂದು ಹೇಳಿದರು. 

 ಉಪ ಸಂಪಾದಕ ಕಿರಣ್ ಪಾಟೀಲ ಮಾತನಾಡಿ, ಅಪ್ಪಾಜಿಯವರು ಕಲಿಕೆಗೆ ಹೆಚ್ಚು ಪ್ರೋತ್ಸಾಹಿಸುತ್ತಿದ್ದರು. ಹೊಸ ಹೊಸ ಪ್ರತಿಭೆಗಳಿಗೆ ಉತ್ತೇಜನ ನೀಡಿ ನಾಡಿಗೆ ಪರಿಚಯಿಸಿದವರು ಎಂದರು.

 ಸುಭಾಷಚಂದ್ರ ಪಾಟೀಲ ಜನಕಲ್ಯಾಣ ಟ್ರಸ್ಟ್ನ ಅಧ್ಯಕ್ಷ ಶರಣಗೌಡ ಪಾಟೀಲ ಪಾಳಾ, ಕರ್ನಾಟಕ ಜಾನಪದ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಸಿ.ಎಸ್. ಮಾಲಿಪಾಟೀಲರು ಮಾತನಾಡಿದರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ, ಪತ್ರಿಕಾ ಬಳಗದ ಮಿತ್ರರಾದ ನಾಗರಾಜ ಗಂದಿಗುಡಿ, ಬಸವರಾಜ ಟೇಂಗಳಿ ಕಡಣಿ, ಶ್ರೀಕಾಂತ ಪೊಲೀಸ್ ಪಾಟೀಲ ದಿಕ್ಸಂಗಾ, ಸಿದ್ಧರಾಮ ರಾಜಮಾನೆ, ನಾಗರಾಜ ಬಿರಾದಾರ, ಹೆಚ್. ಬರಗಾಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಅಪಾರ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿದ್ದರು.