ಶಿವಶರಣಪ್ಪ ಕಲಬುರಗಿ ಇನ್ನಿಲ್ಲ

ಶಿವಶರಣಪ್ಪ ಕಲಬುರಗಿ ಇನ್ನಿಲ್ಲ

ಶಿವಶರಣಪ್ಪ ಕಲಬುರಗಿ ಇನ್ನಿಲ್ಲ

ಕಲಬುರಗಿ: ಕಲಬುರಗಿ ಬಸವ ಕೇಂದ್ರ ಅಧ್ಯಕ್ಷರು, ಬಸವ ತತ್ವ ನಿಷ್ಠರು ಹಾಗೂ ದಾಸೋಹಿಗಳಾಗಿ ಪ್ರಸಿದ್ಧರಾಗಿದ್ದ ಶರಣ ಶಿವಶರಣಪ್ಪ ಕಲಬುರಗಿ ಅವರು ಲಿಂಗೈಕ್ಯರಾಗಿರುವುದು ಭಕ್ತವೃಂದ ಮತ್ತು ಸಮಾಜಕ್ಕೆ ಅಪಾರ ದುಃಖವನ್ನುಂಟುಮಾಡಿದೆ.

ಬಸವ ತತ್ವದ ಪ್ರಸಾರ-ಪ್ರಚಾರದಲ್ಲಿ ಸದಾ ತೊಡಗಿಸಿಕೊಂಡಿದ್ದ ಅವರು, ಅನೇಕ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಸಮಾಜದಲ್ಲಿ ಸೇವಾಭಾವ ಬೆಳೆಸಲು ಶ್ರಮಿಸಿದ್ದರು. ಅವರ ಸರಳತೆ, ನಿಷ್ಠೆ ಮತ್ತು ದಾಸೋಹ ಮನೋಭಾವ ಎಲ್ಲರಿಗೂ ಆದರ್ಶವಾಗಿತ್ತು.

ಅವರ ಲಿಂಗ ಶರೀರವು ಇಂದು ದಿನಾಂಕ 04-03-2026 ರಂದು ಮಧ್ಯಾಹ್ನ 1.00 ಗಂಟೆಯವರೆಗೆ ಸ್ವಸ್ತಿಕ್ ನಗರದ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಲಭ್ಯವಿರಲಿದೆ. 

ಸಾಯಂಕಾಲ 5.00 ಗಂಟೆಗೆ ಅವರ ಸ್ವಗ್ರಾಮ ಫರಹತಾಬಾದ್‌ನಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ.

ಅವರ ಅಗಲಿಕೆಯಿಂದ ಬಸವಭಕ್ತರಿಗೆ ತುಂಬಲಾರದ ನಷ್ಟವಾಗಿದೆ.