ನ.೧೫.೧೬ ರಂದು ಮರಗಮ್ಮಾ ದೇವಿಯ ೪೮ನೇ ಜಾತ್ರಾ ಮಹೋತ್ಸವ

ನ.೧೫.೧೬ ರಂದು ಮರಗಮ್ಮಾ ದೇವಿಯ ೪೮ನೇ ಜಾತ್ರಾ ಮಹೋತ್ಸವ

ನ.೧೫.೧೬ ರಂದು ಮರಗಮ್ಮಾ ದೇವಿಯ ೪೮ನೇ ಜಾತ್ರಾ ಮಹೋತ್ಸವ :..

ನಾಗರಾಜ್ ದಂಡಾವತಿ ವರದಿ ಶಹಾಬಾದ : - ನಗರದ ಜೆಪಿ ಕಾಲೋನಿಯಲ್ಲಿರುವ ಆದಿಶಕ್ತಿ ಶ್ರೀಮರಗಮ್ಮಾ ದೇವಿಯ ಮೂರ್ತಿ ಸ್ಥಾಪನೆಯ ೪೮ನೇ ವರ್ಷದ ವರ್ಧಂತಿ ಮಹೋತ್ಸವ ಹಾಗೂ ೮ನೇ ವರ್ಷದ ಭವ್ಯ ರಥೋತ್ಸವ ನ. ೧೫, ರಂದು ನಡೆಯಲಿದೆ ಎಂದು ದೇವಸ್ಥಾನ ಸಮಿತಿಯ ಗೌರವ ಅಧ್ಯಕ್ಷ ರಘುನಾಥ ಕಂಬಾನೂರ, ಅಧ್ಯಕ್ಷ ಆನಂದ ಹುಲಿಯಾರ ತಿಳಿಸಿದ್ದಾರೆ. 

ನ.೧೫ ರಂದು ಬೆಳಗ್ಗೆ ೧೧ ಗಂಟೆಗೆ ೨೫೧ ಜನ ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದ್ದು, ಸಂಜೆ ೬ ಗಂಟೆಗೆ ೧೦೦೮ ದೀಪೋತ್ಸವ ನಡೆಯಲಿದೆ. 

ನ.೧೬ ರಂದು ಬೆಳಗ್ಗೆ ೧೦ ಗಂಟೆಗೆ ಭವ್ಯ ಪಲ್ಲಕ್ಕಿ ಮೆರವಣಿಗೆಯೊಂದಿಗೆ ದೇವಿಗೆ ಕಾಗಿಣಾ ನದಿಗೆ ಗಂಗಾ ಸ್ನಾನಕ್ಕೆ ಕರೆದುಕೊಂಡು ಹೋಗಲಾಗುವದು. ಮಧ್ಯಾಹ್ನ ೧ ಗಂಟೆಗೆ ದೇವಿಗೆ ವಿಶೇಷ ಅಭಿಷೇಕ, ಅಲಂಕಾರ, ಮಹಾ ನೈವೇಧ್ಯ, ಮಹಾಮಂಗಳಾರತಿ ನಡೆಯಲಿದೆ, ಸಂಜೆ ೬.೨೦ಕ್ಕೆ ತೊನಸನಳ್ಳಿ(ಎಸ್)ನ ಶ್ರೀಗುರು ಸಂಗಮೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಪೂಜ್ಯ ರೇವಣಸಿದ್ದ ಚರಂತೇಶ್ವರ ಶಿವಾಚಾರ್ಯರ ದಿವ್ಯ ಸಾನಿಧ್ಯದಲ್ಲಿ ಭವ್ಯ ರಥೋತ್ಸವ ನಡೆಯಲಿದೆ. ನಂತರ ಮಹಾ ಪ್ರಸಾದ ವಿತರಣೆ, ಅಹೋರಾತ್ರಿ ಭಜನೆ ನಡೆಯಲಿದೆ ಎಂದು ತಿಳಿಸಿದ್ದಾರೆ.