ಕನ್ನಡ ರಾಜ್ಯೋತ್ಸವ : ಭಗಿರಥಿ ಪಬ್ಲಿಕ್ ಶಾಲೆ
ಕನ್ನಡ ರಾಜ್ಯೋತ್ಸವ : ಭಗಿರಥಿ ಪಬ್ಲಿಕ್ ಶಾಲೆ
ಕನ್ನಡ ರಾಜ್ಯೋತ್ಸವ ಅಂಗವಾಗಿ ಶುಕ್ರವಾರ ಪಟ್ಟಣದ ಭಗಿರಥಿ ಪಬ್ಲಿಕ್ ಶಾಲೆಯಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು.
ಶಾಸ್ತ್ರೀ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಡಾ. ಅಜಿತಕುಮಾರ ಶಾಸ್ತ್ರೀ ಮಾತೆ ಕನ್ನಡಾಂಬೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಧ್ವಜಾರೋಹಣ ನೆರವೇರಿಸಿದರು.
ನಂತರ ಅವರು ಮಾತನಾಡಿ, ನವೆಂಬರ್ ತಿಂಗಳೆಂದರೆ ಕನ್ನಡಿಗರಿಗೆ ವಿಶೇಷವಾದ ತಿಂಗಳು. ಈ ವರ್ಷ ನಾವೆಲ್ಲ 69ನೇ ಕನ್ನಡ ರಾಜ್ಯೋತ್ಸವ ಆಚರಿಸುತ್ತಿದ್ದೇವೆ. ಕನ್ನಡ ನಾಡು, ನುಡಿ ಉಳಿಯಬೇಕಾದರೇ ನಮ್ಮೇಲ್ಲರ ಶ್ರಮ ಅತ್ಯವಶ್ಯಕವಾಗಿ ಬೇಕು ಎಂದರು.
ಮುಖ್ಯಶಿಕ್ಷಕ ಮನೋಜಕುಮಾರ ಹಿರೇಮಠ, ಶೇಖ್ ಇಜಾಜ್, ಶ್ರೀದೇವಿ, ದೀಪಮಾಲಾ, ರಾಜೆಶ್ವರಿ, ಶೀತಲ, ಉಷಾ, ಅಂಜಲಿ, ಬಳಿ ಲಾಂಚಕರ್ ಇದ್ದರು.