ಶಿಕ್ಷಣ ಸಂಘಟನೆ ಹೋರಾಟಕ್ಕೆ ಮಹತ್ವ ನೀಡಿ: ಸಂಸದ ಸಾಗರ ಖಂಡ್ರೆ
ಶಿಕ್ಷಣ ಸಂಘಟನೆ ಹೋರಾಟಕ್ಕೆ ಮಹತ್ವ ನೀಡಿ: ಸಂಸದ ಸಾಗರ ಖಂಡ್ರೆ
ಬೀದರ್: ಡಾ.ಬಾಬಾ ಸಾಹೇಬ್ ಅಂಬೇಡ್ಕರ ಅವರು ಹಾಕಿ ಕೊಟ್ಟಿರುವ ಅಮೂಲ್ಯವಾದ ಶಿಕ್ಷಣ ಸಂಘಟನೆ ಹೋರಾಟ ಪ್ರತಿಯೊಬ್ಬರು ಅರಿಬೇಕು ಎಂದು ಸಂಸದ ಸಾಗರ್ ಖಂಡ್ರೆ ಹೇಳಿದರು.
ಬೀದರ ನಗರದಲ್ಲಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ 68ನೇ ಮಹಾ ಪರಿನಿರ್ವಾಣ ದಿನ ಅಂಗವಾಗಿ ಮತ್ತು ಶೋಷಿತ ಸಮುದಾಯಗಳ ಐಕ್ಯತಾ ಹಾಗೂ ಸಂಗೀತ ನುಡಿ ನಮನ ಕಾರ್ಯಕ್ರಮವು ದಲಿತ ಸಂಘಟನೆಗಳ ಒಕ್ಕೂಟ ವತಿಯಿಂದ ಕಾರ್ಯಕ್ರಮ ಆಯೋಜನೆ ಮಾಡಲಾಯಿತು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು
ಡಾ.ಬಾಬಾ ಸಾಹೇಬ್ ಅಂಬೇಡ್ಕರ ಅವರು ಬರೆದ ಸಂವಿಧಾನದಿಂದ ನಾನು ಲೋಕಸಭಾ ಸದಸ್ಯ ಆಗೋಕೆ ಸಾಧ್ಯವಾಯಿತು . ಮತ್ತು ಅಂಬೇಡ್ಕರ್ ಅವರ ಸಂವಿಧಾನದ ಕುರಿತು ತಿಳಿಸಬೇಕು ಅಂಬೇಡ್ಕರ್ ಅವರು ಹಾಕು ಕೊಟ್ಟಿರುವಂತಹ ದಾರಿ ಮನುಷ್ಯನ ವ್ಯಕ್ತಿತ್ವ ವಿಕಸನ ಮಾರ್ಗವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ಪರಮಪೂಜ್ಯ ಭಂತೆ ಜ್ಞಾನಸಾಗರ ಹಾಗೂ ಅವರ ಸಂಗಡಿಗರಿಂದ ಪೂಜ್ಯರಿಂದ ಮಂಗಳ ಗಾತಾ ಹೇಳಿದ್ದರು ಕಾರ್ಯಕ್ರಮ ಅನೇಕ ರಾಜಕೀಯ ಗಣ್ಯರು ಒಳಗೊಂಡಂತೆ ಜನ ಪ್ರತಿನಿಧಿಗಳು ಹಾಗೂ ಅನೇಕ ದಲಿತ ಹೋರಾಟಗಾರರು ಅಂಬೇಡ್ಕರ್ ವಾದಿಗಳು ಸಾರ್ವಜನಿಕ ಸೇರಿದಂತೆ ವಿವಿಧ ಸಂಗೀತ ಭೀಮ ಗೀತೆ ಕಾರ್ಯಕ್ರಮವು ನೆರವೇರಿತು. ನಿರೂಪಣೆ ಪ್ರದೀಪ್ ನಾಟೇಕರ್ ನೆರವೇರಿಸಿದರು.
ವರದಿ: ಮಛಂದ್ರನಾಥ ಕಾಂಬ್ಳೆ ಬೀದರ್