ಸಗರ ಅಂಬೇಡ್ಕರ್ ವಸತಿ ಶಾಲೆ ಸ್ಥಳಾಂತರಕ್ಕೆ ವಿರೋಧ

ಸಗರ ಅಂಬೇಡ್ಕರ್ ವಸತಿ ಶಾಲೆ ಸ್ಥಳಾಂತರಕ್ಕೆ ವಿರೋಧ
ಶಹಾಪುರ : ತಾಲೂಕಿನ ಸಗರ ಗ್ರಾಮಕ್ಕೆ ಸರಕಾರದಿಂದ ಮಂಜೂರಾಗಿರುವ ಡಾ: ಬಿ.ಆರ್. ಅಂಬೇಡ್ಕರ್ ಹೆಣ್ಣುಮಕ್ಕಳ ವಸತಿ ಶಾಲೆ ಯಾವುದೇ ಕಾರಣಕ್ಕೂ ಬೂದನೂರು ಗ್ರಾಮಕ್ಕೆ ಸ್ಥಳಾಂತರ ಮಾಡುವುದಕ್ಕೆ ಬಿಡುವುದಿಲ್ಲ ಎಂದು ಬಿಜೆಪಿ ಯುವ ಮುಖಂಡ ತಿರುಪತಿ ಹತ್ತಿಕಟಗಿ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಸಗರ ಗ್ರಾಮದ ಸುತ್ತು ಮುತ್ತಲು ಹತ್ತಾರು ಹಳ್ಳಿಗಳಾದ ಹತ್ತಿಗುಡೂರ,ರಸ್ತಾಪುರ,ಶಾರದಳ್ಳಿ
ಕೊಂಗಂಡಿ,ಮಂಡಗಳ್ಳಿ,ತಿಮ್ಮಾಪು,ವಿರುಪಾಪುರ,ಹೊಸಳ್ಳಿ,ಯಕ್ಕಿಗಡ್ಡಿ,ಮಹಲ್ ರೋಜಾ,ದರಿಯಾಪುರ ಬಹುತೇಕವಾಗಿ ಗ್ರಾಮಗಳಲ್ಲಿ ದಲಿತ,ಬಡ ಹಾಗೂ ಕೂಲಿ ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ.ವಸತಿ ಶಾಲೆ ಇಲ್ಲೇ ಮುಂದುವರಿಸಿದರೆ ದಲಿತ ಹೆಣ್ಣುಮಕ್ಕಳಿಗೆ ತುಂಬಾ ಅನುಕೂಲವಾಗಲಿದೆ.ಒಂದು ವೇಳೆ ಇದು ಕೈತಪ್ಪಿ ಬೇರೆ ಕಡೆಗೆ ಸ್ಥಳಾಂತರಗೊಂಡರೆ,ದಲಿತ ಹೆಣ್ಣು ಮಕ್ಕಳಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ತೀವ್ರ ಅಕ್ರೋಶ ವ್ಯಕ್ತಪಡಿಸಿದರು.
ಸಮಾಜ ಕಲ್ಯಾಣ ಇಲಾಖೆಯಿಂದ ಮಂಜೂರಾದ ಈ ವಸತಿ ಶಾಲೆಗೆ ಸಗರ ಗ್ರಾಮದಲ್ಲಿ ಸ್ಥಳದ ಕೊರತೆ ಇದೆ ಎಂಬ ನೆಪವೊಡ್ಡಿ ಬೂದನೂರು ಗ್ರಾಮಕ್ಕೆ ಸ್ಥಳಾಂತರ ಮಾಡುವುದಕ್ಕೆ ತೆರೆಮರೆಯಲ್ಲಿ ಕಸರತ್ತು ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಶಾಲಾ ಕಟ್ಟಡ ನಿರ್ಮಾಣವಾಗುವ ತನಕ ಬಾಡಿಗೆ ಕಟ್ಟಡದಲ್ಲಿ ಶಾಲೆ ನಡೆಸಬೇಕು,ಯಾವುದೇ ಕಾರಣಕ್ಕೂ ವಸತಿ ಶಾಲೆ ಸ್ಥಳಾಂತರ ಆಗುವುದಕ್ಕೆ ಬಿಡುವುದಿಲ್ಲ ಒಂದು ವೇಳೆ ಸ್ಥಳಾಂತರಗೊಂಡರೆ ವಿವಿಧ ಸಂಘಟನೆಗಳೊಂದಿಗೆ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಗ್ರಾಮಸ್ಥರು ಈ ಮೂಲಕ ಎಚ್ಚರಿಕೆ ನೀಡಿದ್ದಾರೆ.ಆದರೆ ಇಷ್ಟೆಲ್ಲಾ ಪ್ರಕ್ರಿಯ ನಡೆದರೂ ಯಾವೊಬ್ಬ ಜನಪ್ರತಿನಿಧಿ, ಸಂಘ ಸಂಸ್ಥೆಗಳು ಧ್ವನಿಯತ್ತದೆ ಇರುವುದು ಬಹಳ ನೋವಿನ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.