ನಾರಾಯಣ ಗುರು ಜಯಂತಿಯನ್ನು ಅರ್ಥಪೂರ್ಣವಾಗಿಸಲು ಸಿದ್ಧತೆ ಪೂರ್ಣ : ಡಾ.ವಿನಯ್ ಗುತ್ತೇದಾರ್ ಗಾರಂಪಳ್ಳಿ

ನಾರಾಯಣ ಗುರು ಜಯಂತಿಯನ್ನು ಅರ್ಥಪೂರ್ಣವಾಗಿಸಲು ಸಿದ್ಧತೆ ಪೂರ್ಣ : ಡಾ.ವಿನಯ್ ಗುತ್ತೇದಾರ್ ಗಾರಂಪಳ್ಳಿ
ಕಲಬುರಗಿ : ಬ್ರಹ್ಮ ಶ್ರೀ ನಾರಾಯಣ ಗುರುಗಳ 171ನೇ ಜಿಲ್ಲಾ ಮಟ್ಟದ ಜಯಂತಿ ಉತ್ಸವವನ್ನು ಸೆಪ್ಟೆಂಬರ್ 16ರಂದು ಕಲಬುರಗಿ ನಗರದಲ್ಲಿ ಅರ್ಥಪೂರ್ಣವಾಗಿ ಆಚರಿಸಲು ಪೂರ್ಣಗೊಂಡಿದ ಜಯಂತಿ ಉತ್ಸವದ ಜಿಲ್ಲಾಧ್ಯಕ್ಷರಾದ ಡಾ. ವಿನಯ್ ಗುತ್ತೇದಾರ್ lಗಾರಂಪಳ್ಳಿ ಹೇಳಿದರು.
ಕಲಬುರಗಿಯ ಹೋಟೆಲ್ ಸಭಾಂಗಣದಲ್ಲಿ ಶನಿವಾರ (ಸೆಪ್ಟೆಂಬರ್ 6ರಂದು) ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಈ ಹಿಂದಿನ ಜಯಂತಿ ಉತ್ಸವಗಳಿಂದ ಭಿನ್ನವಾಗಿ ಗುರುಗಳ ತತ್ವ ಮತ್ತು ಸಿದ್ದಾಂತವನ್ನು ಜನಮನಕ್ಕೆ ಮುಟ್ಟಿಸಲು ವಿಶಿಷ್ಟ ರೀತಿ ಆಚರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಈ ಬಾರಿ 16 ಮಂದಿ ಬೇರೆ ಬೇರೆ ಜಾತಿ ಸಮುದಾಯಗಳ ಸಾಧಕರಿಗೆ ಬ್ರಹ್ಮಶ್ರೀ ನಾರಾಯಣ ಗುರು ಪ್ರಶಸ್ತಿ ನೀಡುವ ಮೂಲಕ ನಾರಾಯಣ ಗುರುಗಳ ತತ್ವದ ಅನುಷ್ಠಾನಕ್ಕೆ ನಿರ್ಧರಿಸಲಾಗಿದೆ ಜೊತೆಗೆ 11 ಮಂದಿ ವಿದ್ಯಾರ್ಥಿಗಳನ್ನು ಮೂರು ವರ್ಷಗಳ ಕಾಲ ಎಂಟರಿಂದ ಹತ್ತನೇ ತರಗತಿಯವರೆಗೆ ಪೂರ್ಣ ಶಿಕ್ಷಣ ನೀಡುವ ಹೊಣೆಗಾರಿಕೆಯನ್ನು ವಹಿಸಿಕೊಳ್ಳಲು ದತ್ತು ಸ್ವೀಕಾರ ಮಾಡಲಾಗುವುದು ಅವರಿಗೆ ಶಾಲಾ ಖರ್ಚು ವೆಚ್ಚವಲ್ಲದೆ ಪ್ರವಾಸ ಮತ್ತು ಸೈಕಲ್ ವಿತರಣೆಗೂ ನೆರವು ನೀಡಲಾಗುವುದು. ಈ ಬಾರಿಯ ಮೆರವಣಿಗೆಯಲ್ಲಿ ವಿಶೇಷ ಆಕರ್ಷಣೆ ಎಂಬಂತೆ ಬ್ರಹ್ಮಶ್ರೀ ನಾರಾಯಣ ಗುರುಗಳ ಐದು ಅಡಿ ಎತ್ತರದ ಭವ್ಯ ಮೂರ್ತಿಯನ್ನು ನಿರ್ಮಾಣ ಮಾಡಲಾಗಿದ್ದು ಶೋಭಾಯಾತ್ರೆಯ ಮೂಲಕ ಎಸ್ಎಂ ಪಂಡಿತ್ ರಂಗಮಂದಿರ ಕ್ಕೆ ಕರೆತರಲಾಗುವುದು ಮೆರವಣಿಗೆಯಲ್ಲಿ ಡಿಜೆಯನ್ನು ಪೂರ್ಣ ನಿಷೇಧಿಸಲಾಗಿದ್ದು ವಿಶೇಷ.ಆಕರ್ಷಣೆಯಾಗಿ ಖ್ಯಾತ ಚಲನಚಿತ್ರ ನಟ ವಿಜಯ ರಾಘವೇಂದ್ರ ಭಾಗವಹಿಸಲಿದ್ದಾರೆ. ಸಾಂಪ್ರದಾಯಿಕ ಶೈಲಿ ಮತ್ತು ಭಕ್ತಿಯನ್ನು ಉದ್ದೀಪನಗೊಳಿಸುವ ಪೂರ್ಣ ಕಲಶ ಹೊತ್ತ ಮುತ್ತೈದೆಯರು, ಭಜನಾ ತಂಡ, ಚೆಂಡೆ ಮೇಳ, ಡೊಳ್ಳು ಮೇಳ ಸಹಿತ ಗುರುಗಳ ಮೂರ್ತಿಯ ಮೆರವಣಿಗೆ ನಡೆಯಲಿದೆ. ಈ ಬಾರಿ ವಿಶೇಷವಾಗಿ ಕಲಬುರಗಿಯ ಜೀವಾ ಆಸ್ಪತ್ರೆಯ ಸಹಯೋಗದೊಂದಿಗೆ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ ಮತ್ತಿತರ ವಿಧಾಯಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಪ್ರಮುಖ ಭಾಷಣಕಾರರಾಗಿ ವಿಧಾನ ಪರಿಷತ್ ಸದಸ್ಯರಾದ ಬಿ.ಕೆ ಹರಿಪ್ರಸಾದ್ ಹಾಗೂ ಕಾರ್ಯಕ್ರಮದ ಉದ್ಘಾಟಕರಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆಯ ಸಚಿವರಾದ ಪ್ರಿಯಾಂಕ ಖರ್ಗೆಯವರು ಭಾಗವಹಿಸಲಿದ್ದಾರೆ. ಡಾ. ಶರಣ್ ಪ್ರಕಾಶ್ ಪಾಟೀಲ್ ಆರೋಗ್ಯ ಶಿಬಿರವನ್ನು ಉದ್ಘಾಟಿಸಲಿದ್ದಾರೆ. ಸಚಿವ ಶರಣಬಸಪ್ಪ ದರ್ಶನಪುರ್ 11 ವಿದ್ಯಾರ್ಥಿಗಳ ದತ್ತು ಸ್ವೀಕಾರಕ್ಕೆ ಚಾಲನೆ ನೀಡಲಿದ್ದಾರೆ. ನಾರಾಯಣ ಗುರುಗಳ ಕೃತಿಯನ್ನು ವಿಧಾನ ಪರಿಷತ್ ರಾಜ್ಯ ಜಗದೇವ ಗುತ್ತೇದಾರ್ ಹಾಗೂ ಚಿಕಿತ್ಸಾ ಶಿಬಿರದ ವೈದ್ಯರಿಗೆ ಡಾ ಅಜಯ್ ಸಿಂಗ್ ಸನ್ಮಾನ ನೆರವೇರಿಸಲಿದ್ದಾರೆ. ಜಿಲ್ಲೆಯ ಎಲ್ಲಾ ಶಾಸಕರು ವಿಧಾನ ಪರಿಷತ್ ಸದಸ್ಯರು ಹಾಗೂ ಸಮಾಜದ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
*ಪಂಚಾಯತ್ ಮಟ್ಟಕ್ಕೆ ತಲುಪಿದ ನಾರಾಯಣ ಗುರು ಜಯಂತಿ ಜಾಗೃತಿಯ ಸಂಕೇತ: ಡಾ. ಪ್ರಣವಾನಂದ ಶ್ರೀ*
ರಾಜ್ಯದಲ್ಲಿ 2016 ರಲ್ಲಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ ಅವರು ನಾರಾಯಣಗುರು ಜಯಂತಿಯನ್ನು ರಾಜ್ಯಾದ್ಯಂತ ಆಚರಿಸಬೇಕು ಎಂಬ ಸರಕಾರಿ ಆದೇಶವನ್ನು ಹೊರಡಿಸಿದ ನಂತರ ಇದೀಗ ಜನರಲ್ಲಿ ಜಾಗೃತಿ ಮೂಡಿದ್ದು ಸೆಪ್ಟೆಂಬರ್ 7ರಂದು ಪಂಚಾಯತ್ ಮಟ್ಟದಲ್ಲೂ ನಾರಾಯಣ ಗುರು ಜಯಂತಿ ಆಚರಣೆ ಗೊಳ್ಳುತ್ತಿರುವುದು ಗುರುಗಳ ಬಗ್ಗೆ ಜಾಗೃತಿ ಹೊಂದಿರುವುದರ ಸಂಕೇತ ಎಂದು ಕಲಬುರಗಿ ಜಿಲ್ಲಾ ಚಿತಾಪುರ ತಾಲೂಕು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಡಾ. ಪ್ರಣವಾನಂದ ಸ್ವಾಮೀಜಿ ಹೇಳಿದರು.
ನಾರಾಯಣ ಗುರುಗಳ ಜಯಂತಿ ಆಚರಣೆಯಿಂದ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನಾರಾಯಣ ಗುರು ತತ್ವವನ್ನು ಮುಟ್ಟಿಸಲು ಮತ್ತು ಹೊಸ ಸಮಾಜವನ್ನು ನಿರ್ಮಾಣ ಮಾಡಲು ಪ್ರಯತ್ನ ಮಾಡುತ್ತಿದ್ದು ಈಡಿಗ ಬಿಲ್ಲವ ಸೇರಿದಂತೆ 26 ಪಂಗಡಗಳ ಸಮಗ್ರ ಅಭಿವೃದ್ಧಿಯನ್ನು ಹಿನ್ನೆಲೆಯಲ್ಲಿಟ್ಟುಕೊಂಡು ಈಗಾಗಲೇ ಅನೇಕ ಬೇಡಿಕೆಗಳನ್ನು ರಾಜ್ಯ ಸರ್ಕಾರಕ್ಕೆ ನೀಡಲಾಗಿದೆ.
ಕಲಬುರಗಿಯಲ್ಲಿ ಈಡಿಗ ಸಮಾಜಕ್ಕೆ ಸ್ವಂತ ನಿವೇಶನ ಹಾಗೂ ಸಭಾಭವನದ ಕೊರತೆಯಿದ್ದು ಅದನ್ನು ಸರಕಾರ ಕೂಡಲೇ ನೀಡಬೇಕು ಎಂದು ಒತ್ತಾಯಿಸಲಾಗುವುದು. ಜೊತೆಗೆ ಬ್ರಹ್ಮ ಶ್ರೀ ನಾರಾಯಣ ಗುರುಗಳ ಭವ್ಯ ಮೂರ್ತಿಯನ್ನು ರಾಜಧಾನಿ ಬೆಂಗಳೂರುನಲ್ಲಿ ಸ್ಥಾಪನೆ ಮಾಡಬೇಕು ಸುಮಾರು ಒಂದುವರೆ ಲಕ್ಷದಷ್ಟು ಸಮುದಾಯದ ಕುಲಕಸುಬು ವಂಚಿತ ಜನರಿಗೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂಬಿತ್ಯಾದಿ ಹಲವು ಬೇಡಿಕೆಗಳನ್ನು ಕೂಡ ಮುಂದಿಟ್ಟುಕೊಂಡು ಸರಕಾರದ ಗಮನ ಸೆಳೆಯಲಾಗುವುದು. ನಾರಾಯಣ ಗುರು ಜಯಂತಿಯನ್ನು ಸರಕಾರಿ ಮಟ್ಟದಲ್ಲಿ ಆಚರಿಸಲು ಆದೇಶ ಹೊರಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಜೊತೆಗೆ ಮೈಸೂರು ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಆರು ಜನ ವಿದ್ವಾಂಸರು ಈಡಿಗ ಬಿಲ್ಲವ ಸೇರಿದಂತೆ 26 ಪಂಗಡಗಳ ಕುಲ ಶಾಸ್ತ್ರೀಯ ಅಧ್ಯಯನ ಆರಂಭಿಸಿದ್ದು ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಈ ಸಮುದಾಯದ ಆರ್ಥಿಕ ಸಾಮಾಜಿಕ ಶೈಕ್ಷಣಿಕ ಸ್ಥಿತಿಗತಿಯ ನಿಖರ ಅಂಕಿ ಅಂಶ ದೊರೆಯಲಿದೆ.ಸಮಾಜದ ಎಲ್ಲರೂ ಅಧ್ಯಯನ ತಂಡಕ್ಕೆ ಸಹಕಾರ ನೀಡಬೇಕು ಎಂದು ಸಮಾಜದ ಬಾಂಧವರಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ ಎಂದರು. ಮಹಾತ್ಮ ಗಾಂಧೀಜಿ ಅವರು ಮತ್ತು ನಾರಾಯಣ ಗುರುಗಳು ಶಿವಗಿರಿಯಲ್ಲಿ ಭೇಟಿಯಾಗಿ ಇದೀಗ ನೂರನೇ ವರ್ಷ. ಇದನ್ನು ಕೂಡ ಈ ಬಾರಿ ಜಯಂತಿ ಉತ್ಸವದಲ್ಲಿ ಸ್ಮರಿಸಲಾಗುವುದು. ನಾರಾಯಣ ಗುರುಗಳು ಈಳವ ಜಾತಿಯಲ್ಲಿ ಹುಟ್ಟಿದರೂ ಒಂದೇ ಜಾತಿ ಒಂದೇ ಮತ ಒಬ್ಬನೇ ದೇವರು ಎಂಬ ಲೋಕ ಸಂದೇಶ ನೀಡಿ ಮಾನವರೆಲ್ಲರೂ ಒಂದೇ ಎಂಬುದನ್ನು ಸಾರಿದ ಮಹಾತ್ಮ.ಅದಕ್ಕಾಗಿ ಎಲ್ಲ ಜಾತಿ ಸಮುದಾಯದವರು ಒಟ್ಟಾಗಿ ಜಯಂತಿ ಆಚರಣೆಗೊಂಡರೆ ಅರ್ಥಪೂರ್ಣ ಎಂದು ಡಾ.ಸ್ವಾಮೀಜಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷರಾದ ಶಿವರಾಜ್ ಬಿ ಗುತ್ತೇದಾರ್ ಜೇವರ್ಗಿ ಕಾರ್ಯದರ್ಶಿ ಜಗದೇವ ಎಂ ಗುತ್ತೇದಾರ್ ಕಲ್ಲ ಬೇನೂರು ಮಲ್ಲಿಕಾರ್ಜುನ ಗುತ್ತೇದಾರ್ ಕುಕ್ಕುಂದ ಕಾಶಿನಾಥ ಗುತ್ತೇದಾರ್ ಚಿತ್ತಾಪುರ ಮಹೇಶ್ ಗುತ್ತೇದಾರ್ ಹೊಳಕುಂದ, ವೆಂಕಟೇಶ ಕಡೇಚೂರ್, ಡಾ. ಸದಾನಂದ ಪೆರ್ಲ ಮತ್ತಿತರರು ಉಪಸ್ಥಿತರಿದ್ದರು.