ವಕ್ಪ ಬೋರ್ಡ್ ವಿರುದ್ಧ ಸಿಡಿದೆದ್ದ ಸಿದ್ದಲಿಂಗ ಪೂಜಾರಿ
ವಕ್ಪ ಬೋರ್ಡ್ ವಿರುದ್ಧ ಸಿಡಿದೆದ್ದ ಸಿದ್ದಲಿಂಗ ಪೂಜಾರಿ
ಜೇವರ್ಗಿ ತಾಲೂಕಿನ ಸುತ್ತ ಮುತ್ತಲಿನ ಹಳ್ಳಿಯ ರೈತರ ಪಹಣಿಯ ಕಾಲಂ ನಂಬರ್ ೧೧ ರಲ್ಲಿ ವಕ್ಪ ಎಂದು ನಮೂದಿಸಲಾಗಿದೆ . ಇದರಿಂದ ತಾಲೂಕಿನ ರೈತರು ಆತಂಕ ಪಡುವಂತಾಗಿದೆ.ಇದನ್ನು ಕೂಡಲೆ ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆಯ ತಾಲೂಕ ಅಧ್ಯಕ್ಷರಾದ ಸಿದ್ದಲಿಂಗ ಪೂಜಾರಿ ಎಚ್ ಹಾಲಗಡ್ಲಾ ಅವರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಸರಕಾರದ ಅವಜ್ಞಾನಿಕ ನೀತಿಯಿಂದ ರಾಜ್ಯದ ರೈತರು ಸಂಕಷ್ಟ ಪಡುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜೇವರ್ಗಿ ತಾಲೂಕಿನ ರಾಜ್ಯ ರಸ್ತೆ ಹೆದ್ದಾರಿಯ ಮೇಲೆ ವಹಾನಗಳ ಸಂಚಾರ ತಡೆ ಹಿಡಿದು ತಾಲೂಕಿನ ರೈತ ಪರ ಹೋರಾಟಗಾರರೊಂದಿಗೆ ಪ್ರತಿಭಟನೆ ನಡೆಸಿದರು .
ಮಾಜಿ ಶಾಸಕರಾದ ದೊಡ್ಡಪ ಗೌಡ ಎಸ್ ಪಾಟೀಲ್ ನರಬೋಳ್ ಅವರು ರೈತಪರ ಹೋರಾಟಕ್ಕೆ ಬೆಂಬಲ ನೀಡಿ ಸರ್ಕಾರದ ವಿರುದ್ಧ ಕಿಡಿಕಾರಿದರು.
ವಕ್ಪ ಹೆಸರಿನಲ್ಲಿ ರೈತರ ಜಮೀನುಗಳನ್ನು ಕಬಳಿಸುವ ಹುನ್ನಾರ ನಡೆಸುತ್ತಿರುವ ಎಂದರು.
ರಾಜ್ಯದಲ್ಲಿ ಅತಿವೃಷ್ಟಿ , ಅನಾವೃಷ್ಟಿಯಿಂದ ಬೆಳೆಯನ್ನು ಕಳೆದುಕೊಂಡು ಗಂಜಿಗೂ ಗತಿ ಇಲ್ಲದೆ ಅಸಹಾಯಕ ಸ್ಥಿತಿಯಲ್ಲಿ ಬದುಕು ಕಟ್ಟಿಕೊಂಡವರು,
ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ . ಇಂತಹ ಸಂಕಷ್ಟದ ಸಮಯದಲ್ಲಿ ರೈತರ ಜೀವದ ಜೊತೆ ಆಟ ಆಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು .
ಜೆವರ್ಗಿ ತಾಲೂಕಿ ನಬಿಜಿಪಿ. ಯುವ ಮುಖಂಡರಾದ ನಿಂಗಣ್ಣ ರದ್ದೇವಾಡಗಿ, ಭಾಗವಹಿಸಿ ರೈತ ಪರ ಹೋರಾಟಕ್ಕೆ ಬೆಂಬಲ ಸೂಚಿಸಿದರು .
ಇದರಿಂದಾಗಿ ಬ್ಯಾಂಕಿನಲ್ಲಿ ರೈತರಿಗೆ ಸಾಲ ಸೌಲಭ್ಯ ಕೊಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಕೂಡಲೆ ಇದಕ್ಕೆ ಸರ್ಕಾರ ವಕ್ಪ ಎನ್ನುವ ಹೆಸರನ್ನು ಕೂಡಲೇ ತೆಗೆದು ಹಾಕಬೇಕೆಂದು ಆಗ್ರಹಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆಯ ತಾಲೂಕ ಅಧ್ಯಕ್ಷರಾದ ಸಿದ್ದಲಿಂಗ ಪೂಜಾರಿ ಎಚ್ ಹಾಲಗಡ್ಲಾ ಅವರ ಸಮ್ಮುಖದಲ್ಲಿ ತಾಲೂಕ ದಂಡಾಧಿಕಾರಿಗಳ ಮುಖಾಂತರ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದರು